ಬಾಲಿವುಡ್ ನ ನೀರಸ ಸಾಹಸ ದೃಶ್ಯಗಳು ಬೇಸರ ತಂದಿದ್ದವು: ಅಜಯ್ ದೇವಗನ್
ಖ್ಯಾತ ಸಾಹಸ ನಿರ್ದೇಶಕ ವೀರು ದೇವಗನ್ ಅವರ ಪುತ್ರ ನಟ ಅಜಯ್ ದೇವಗನ್ ಅವರಿಗೆ ಬಾಲಿವುಡ್ ನಲ್ಲಿ ನಿರ್ದೇಶನವಾಗುವ ನೀರಸ ಆಕ್ಷನ್ ದೃಶ್ಯಗಳು ಬೇಸರ ತಂದಿದ್ದವಂತೆ.

Published On :
ಮುಂಬೈ: ಖ್ಯಾತ ಸಾಹಸ ನಿರ್ದೇಶಕ ವೀರು ದೇವಗನ್ ಅವರ ಪುತ್ರ ನಟ ಅಜಯ್ ದೇವಗನ್ ಅವರಿಗೆ ಬಾಲಿವುಡ್ ನಲ್ಲಿ ನಿರ್ದೇಶನವಾಗುವ ನೀರಸ ಆಕ್ಷನ್ ದೃಶ್ಯಗಳು ಬೇಸರ ತಂದಿದ್ದವಂತೆ. ಆದುದರಿಂದಲೇ ತಾವೇ ನಟಿಸಿ ನಿರ್ದೇಶಿಸಿರುವ 'ಶಿವಾಯ್' ನಲ್ಲಿ ಹೊಸತನದ ಆಕ್ಷನ್ ದೃಶ್ಯಗಳನ್ನು ಒಳಗೊಂಡಿರುವುದಾಗಿ ಹೇಳಿದ್ದಾರೆ.
"ನನಗೆ ಸಾಹಸ ದೃಶ್ಯಗಳು ಸುಲಭವಾಗಿ ಒಗ್ಗುತ್ತವೆ. ಸಾಮಾನ್ಯವಾಗಿ ನಮ್ಮ ಸಿನೆಮಾಗಳಲ್ಲಿ ಕಾಣುವ ಸಾಹಸ ದೃಶ್ಯಗಳಿಂದ ಬೇಸರನಾಗಿದ್ದೆ. ಆದುದರಿಂದ ಒಂದು ಹೆಜ್ಜೆ ಮುಂದಿಡುವ ಅವಶ್ಯಕತೆ ಇತ್ತು" ಎಂದು ಅಜಯ್ ಹೇಳಿದ್ದಾರೆ.
ತಮ್ಮ ಸಿನೆಮಾಗಳಲ್ಲಿ ಸಾಹಸ ದೃಶ್ಯಗಳಿಗೆ ಹೆಸರಾಗಿರುವ ಅಜಯ್ ದೇವಗನ್, ತಾವೆಂದು ಬದಲಿಯನ್ನು ಬಳಸುವುದಿಲ್ಲ ಅದಕ್ಕೆ 'ಶಿವಾಯ್' ಚಿತ್ರೀಕರಣ ತ್ರಾಸದಾಯಕವಾಗಿತ್ತು ಎನ್ನುತ್ತಾರೆ.
"ಆದರೆ ಎಲ್ಲವು ಸುಸೂತ್ರವಾಗಿ ನಡೆಯಿತು. ಸಣ್ಣಪುಟ್ಟ ಗಾಯಗಳಾಗುತ್ತಿದ್ದವು ಮತ್ತೆ ಮುಂದುವರೆಯುತ್ತಿದ್ದೆವು. ಗಂಭೀರವಾದದ್ದು ಏನು ತೊಂದರೆಯಾಗಲಿಲ್ಲ" ಎಂದು ಅವರು ತಿಳಿಸುತ್ತಾರೆ.
2008 ರಲ್ಲಿ 'ಯು ಮಿ ಔರ್ ಹಮ್' ನಿರ್ದೇಶಿಸಿದ ನಂತರ ಅಜಯ್ ದೇವಗನ್ ನಿರ್ದೇಶನದ ಎರಡನೇ ಚಿತ್ರ 'ಶಿವಾಯ್'. ಐದು ವರ್ಷದ ಹಿಂದೆ ಇಂತಹ ಸಿನೆಮಾ ಮಾಡಲು ಕಷ್ಟವಾಗುತ್ತಿತ್ತು ಎನ್ನುತ್ತಾರೆ 47 ವರ್ಷದ ನಟ.
'ಶಿವಾಯ್' ಅಕ್ಟೋಬರ್ 28 ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


