ಬಾಲಿವುಡ್

ಮುಂಬೈನ ಜುಹು ಬೀದಿಯಲ್ಲಿ ವೃದ್ಧನ ವೇಷ ತೊಟ್ಟು ಹಾಡಿದ ಸೋನು ನಿಗಮ್!

ಕೆಲವರು ಹತ್ತಿರ ಬಂದು ನಿಂತು ಹಾಡನ್ನು ಆಲಿಸಿದರು. ಒಬ್ಬಾತ ಬಂದು ಅಂಕಲ್ ನಿಮ್ಮ ದನಿ ಚೆನ್ನಾಗಿದೆ ಎಂದು ಹೇಳಿ ಅವರ ಹಾಡನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ...

ಮುಂಬೈನ ಜುಹು ಬೀದಿಯಲ್ಲಿ ವೃದ್ಧನ ವೇಷ ತೊಟ್ಟು ಹಾಡಿದ ಸೋನು ನಿಗಮ್!
ಸೋನು ನಿಗಮ್
Published On :
ಮುಂಬೈ: ಮುಂಬೈಯ ಜುಹು ರಸ್ತೆಯಲ್ಲಿ ವೃದ್ಧನೊಬ್ಬ ಹಾಡುತ್ತಿದ್ದಾನೆ. ಶಾರುಖ್ ಖಾನ್ ನಟಿಸಿದ ಕಲ್ ಹೋ ನ ಹೋ ಚಿತ್ರದ 'ಹರ್ ಗಡೀ ಬದಲ್ ರಹೀ ಹೈ 'ಹಾಡನ್ನು ಆ ವೃದ್ಧ ಹಾಡುತ್ತಿದ್ದರೆ ದಾರಿ ಹೋಕರು ಕ್ಷಣ ಮಾತ್ರ ನಿಂತು ನೋಡಿ ಮತ್ತೆ ಮುಂದೆ ಹೋಗುತ್ತಿದ್ದರು. ಕೆಲವರು ಹತ್ತಿರ ಬಂದು ನಿಂತು ಹಾಡನ್ನು ಆಲಿಸಿದರು. ಒಬ್ಬಾತ ಬಂದು ಅಂಕಲ್ ನಿಮ್ಮ ದನಿ ಚೆನ್ನಾಗಿದೆ ಎಂದು ಹೇಳಿ ಅವರ ಹಾಡನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ. ಆದರೆ ಆ ವೃದ್ಧ ಮಾರುವೇಷದಲ್ಲಿದ್ದ ಜನಪ್ರಿಯ ಗಾಯಕ ಸೋನು ನಿಗಮ್ ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ!
ಬೀಯಿಂಗ್ ಇಂಡಿಯನ್ ಎಂಬ ಯೂಟ್ಯೂಬ್ ಚಾನೆಲ್‌ನವರ 'ದ ರೋಡ್ ಸೈಡ್ ಉಸ್ತಾದ್‌' ಎಂಬ ವೀಡಿಯೋಗಾಗಿ ಸೋನು ಈ ವೇಷ ಧರಿಸಿದ್ದರು. 
ಜುಹು ರಸ್ತೆಯಲ್ಲಿ ತಮ್ಮ 'ಪ್ರಯೋಗ'ದ ಅನುಭವದ ಬಗ್ಗೆ ಮಾತನಾಡಿದ ಸೋನು, ಅದೊಂದು ಅದ್ಭುತ ಅನುಭವವಾಗಿತ್ತು. ನನ್ನ ಹಾಡನ್ನು ಕೇಳಿದ ಒಬ್ಬ ವ್ಯಕ್ತಿ ನನ್ನ ಹತ್ತಿರ ಬಂದು ನನ್ನ ಕೈ ಮುಟ್ಟಿ ಅಂಕಲ್ ನೀವು ತಿಂಡಿ ತಿಂದಿದ್ದೀರಾ? ಎಂದು ಕೇಳಿ ನನ್ನ ಕೈಯಲ್ಲಿ 12 ರುಪಾಯಿ ಇಟ್ಟು ಹೋದರು. ಲಕ್ಷ  ದುಡ್ಡು ಸಂಪಾದನೆ ಮಾಡಿದ್ದಕ್ಕಿಂತಲೂ ಹೆಚ್ಚು ಖುಷಿಯಾಯಿತು ಆ ಹಣವನ್ನು ನೋಡಿ. ನಾನೀಗ ಆ ಹಣವನ್ನು ಫ್ರೇಮ್ ಹಾಕಿಟ್ಟಿದ್ದೀನಿ, ಇನ್ನೊಂದು ಸಲ ಆತನನ್ನು ಭೇಟಿಯಾಗಿ ಅವರಿಗೆ ವಾಪಸ್ ಏನಾದರೂ ನೀಡಬೇಕಿದೆ.
ಎಲ್ಲರೂ ಧಾವಂತದ ಬದುಕಿನಲ್ಲಿ ಮುನ್ನುಗ್ಗುತ್ತಲೇ ಇರುತ್ತಾರೆ. ಸುತ್ತು ಮುತ್ತಲೂ ಏನಾಗುತ್ತಿದೆ? ಆ ಕ್ಷಣದ ಖುಷಿಯನ್ನು ಅರಿಯಲು ಯಾರೂ ಪ್ರಯತ್ನ ಪಡುತ್ತಿಲ್ಲ. ನಾನು ಸಾಧಾರಣದ ಒಂದು ಬದುಕಿನ ಆ ಕ್ಷಣವನ್ನು ಅನುಭವಿಸುವ ಮೂಲಕ ಆ ಖುಷಿಯನ್ನು ಕಂಡುಕೊಂಡೆ ಎಂದು ಸೋನು ನಿಗಮ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.