ಕತ್ರಿನಾ ಕೈಫ್'ಗೆ ಸ್ಫೂರ್ತಿ ಈ ಮೂವರು ಮಹಿಳೆಯರು
ತನ್ನ ಮುಗ್ಧ ನಗೆಯ ಮೂಲಕ ಬಾಲಿವುಡ್ ಜನರ ಮನಗೆದ್ದಿರುವ ಸೆಕ್ಸೀ ಕನ್ಯೆ ಕತ್ರೀನಾ ಕೈಫ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಯಶಸ್ಸಿಗೆ ಸ್ಪೂರ್ತಿಯಾದವರಾರು...

ನವದೆಹಲಿ: ತನ್ನ ಮುಗ್ಧ ನಗೆಯ ಮೂಲಕ ಬಾಲಿವುಡ್ ಜನರ ಮನಗೆದ್ದಿರುವ ಸೆಕ್ಸೀ ಕನ್ಯೆ ಕತ್ರೀನಾ ಕೈಫ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಯಶಸ್ಸಿಗೆ ಸ್ಪೂರ್ತಿಯಾದವರಾರು ಎಂಬ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಎನ್ ಡಿಟಿವಿ ಮತ್ತು ಲೋರಿಯಲ್ ಪ್ಯಾರಿಸ್ 'ವುಮೆನ್ ಆಫ್ ವರ್ತ್ ಅವಾರ್ಡ್ಸ್ 2016' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನನಗೆ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಅಮೆರಿಕನ್ ತಂತ್ರಜ್ಞಾನ ಕಾರ್ಯಕಾರಿ ಶೆರ್ಲಿ ಸ್ಯಾಂಡ್ಬರ್ಗ್ ಹಾಗೂ ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ಸ್ಫೂರ್ತಿ ಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಕಾರ್ಯಕ್ರಮ ಕುರಿತು ಮಾತನಾಡಿರುವ ಅವರು, ಗುರ್ತಿಕೆ ಇಲ್ಲದ ಹಾಗೂ ಆಯಾಸವಿಲ್ಲದೆ ದುಡಿಯುವ ಮಹಿಳೆಯರಿಗೆ ಈ ಕಾರ್ಯಕ್ರಮವನ್ನು ಸಮರ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಎನ್ ಡಿಟಿ, ಗ್ರೋಬಲ್ ಬ್ಯೂಟಿ ಹೌಸ್ ಲೋರಿಯಲ್ ಪ್ಯಾರಿಸ್ ನೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡಿದ್ದು, ಎರಡೂ ಸಂಸ್ಥೆಗಳು ಸೇರಿ ಇದೀಗ 'ವುಮೆನ್ ಆಫ್ ವರ್ತ್' ಎಂಬ ಅಭಿಯಾನವನ್ನು ಆರಂಭಿಸಿದೆ. ಕೆಚ್ಚೆದೆಯ ಭಾರತೀಯ ಮಹಿಳೆಯರನ್ನು ದೇಶಕ್ಕೆ ಪರಿಚಯಿಸುವುದು ಹಾಗೂ ಅವರನ್ನು ಗುರ್ತಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


