ಟಿವಿ ಶೋಗೆ ಮತ್ತೆ ಎಂಟ್ರಿ ಕೊಟ್ಟ ಮಾಧುರಿ ದೀಕ್ಷಿತ್
ಖಾಸಗಿ ವಾಹಿನಿಯ ಝಲಕ್ ದಿಖ್ಲಾ ಜಾ ಕಾರ್ಯಕ್ರಮ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಾಧುರಿ ದೀಕ್ಷಿತ್ ಅವರು ಇದೀ ಮತ್ತೆ ಟಿವಿ ಶೋಗೆ ಎಂಟ್ರಿ ನೀಡಲಿದ್ದು, ನೃತ್ಯ ಕಾರ್ಯಕ್ರಮವೊಂದಕ್ಕೆ...

ಮುಂಬೈ: ಖಾಸಗಿ ವಾಹಿನಿಯ ಝಲಕ್ ದಿಖ್ಲಾ ಜಾ ಕಾರ್ಯಕ್ರಮ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಾಧುರಿ ದೀಕ್ಷಿತ್ ಅವರು ಇದೀ ಮತ್ತೆ ಟಿವಿ ಶೋಗೆ ಎಂಟ್ರಿ ನೀಡಲಿದ್ದು, ನೃತ್ಯ ಕಾರ್ಯಕ್ರಮವೊಂದಕ್ಕೆ ತೀರ್ಪುಗಾರರಾಗಿ ಬರುತ್ತಿದ್ದಾರೆಂದು ಹೇಳಲಾಗುತ್ತಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ 'ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್' ಅವತರಣಿ ಭಾರತದಲ್ಲೂ ಬರುತ್ತಿದ್ದು, ಈ ನೃತ್ಯ ಕಾರ್ಯಕ್ರಮಕ್ಕೆ ಮಾಧುರಿಯವರು ತೀರ್ಪುಗಾರರಾಗಿ ಬರುತ್ತಿದ್ದಾರೆಂದು ತಿಳಿದುಬಂದಿದೆ.
ಮಾಧುರಿಯವರು ಕಥಕ್ ನೃತ್ಯದಲ್ಲಿ ತರಬೇತಿ ಪಡೆದಿದ್ದು, ಅವರ ಪ್ರತಿಭೆಯನ್ನು ಹಿಂದಿ ಸಿನಿಮಾ ಹಾಗೂ ಪ್ರಖ್ಯಾತಿ ಪಡೆದುಕೊಂಡಿರುವ ಹಾಡುಗಳ ಮುಖೇನ ಜನತೆಯ ಮನಮುಟ್ಟಿದ್ದಾರೆ. ಈ ಹಿಂದೆಯೂ ಮಾಧುರಿ ಖಾಸಗಿ ವಾಹಿನಿಯೊಂದರ ಝಲಕ್ ದಿಖ್ಲಾ ಜಾ ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗುವ ಮೂಲಕ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ಟಿವಿ ಕಾರ್ಯಕ್ರಮಗಳಲ್ಲೂ ಜನತೆಯ ಮನಮುಟ್ಟಿದ್ದರು. ಇದೀಗ ಮತ್ತೆ ಟಿವಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಲಿಡುತ್ತಿದ್ದಾರೆ.
ಇನ್ನು 'ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್' ನೃತ್ಯ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಮಾಧುರಿಯವರೊಂದಿಗೆ ನೃತ್ಯ ತರಬೇತುದಾರರಾದ ಟೆರೆನ್ಸ್ ಲೆವಿಸ್ ಮತ್ತು ಬೋಸ್ಕೋ ಮಾರ್ಟಿಸ್ ಅವರು ಜೊತೆಗೂಡಲಿದ್ದಾರೆ. ಕಾರ್ಯಕ್ರಮ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಟೆರೆನ್ಸ್ ಲೆವಿಸ್ ಅವರು, ಬೋಸ್ಕೋ ಅವರು ರಸ್ತೆ ಹಾಗೂ ನಗರದ ಶೈಲಿ ಕುರಿತಂತೆ ತೀರ್ಪು ನೀಡುವುದಾದರೆ, ನಾನು ತಾಂತ್ರಿಕ ಅಂಶಗಳು ಹಾಗೂ ವೇದಿಕೆಯ ಪ್ರದರ್ಶನದ ಕುರಿತು ತೀರ್ಪು ನೀಡುತ್ತೇನೆ. ಇನ್ನು ಮಾಧುರಿಯವರು ಭಾರತೀಯ ನೃತ್ಯ ಶೈಲಿ ಕುರಿತು ತೀರ್ಪು ನೀಡಲಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


