'ತನು ವೆಡ್ಸ್ ಮನು' ಮೂರನೆ ಭಾಗವೂ ಬರಲಿದೆ: ದೀಪಕ್ ದೋಬ್ರಿಯಲ್
'ತನು ವೆಡ್ಸ್ ಮನು' ಸಿನೆಮಾ ಸರಣಿಯ ಮೂರನೇ ಭಾಗದ ಚಿತ್ರದ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ ಎಂದಿದ್ದಾರೆ ನಟ ದೀಪಕ್ ದೋಬ್ರಿಯಲ್.

ದುಬೈ: 'ತನು ವೆಡ್ಸ್ ಮನು' ಸಿನೆಮಾ ಸರಣಿಯ ಮೂರನೇ ಭಾಗದ ಚಿತ್ರದ ಬಗ್ಗೆ ಮಾತುಕತೆ ಪ್ರಗತಿಯಲ್ಲಿದೆ ಎಂದಿದ್ದಾರೆ ನಟ ದೀಪಕ್ ದೋಬ್ರಿಯಲ್.
ಈ ಸಿನೆಮಾ ಸರಣಿಯ 'ಪಪ್ಪಿ' ಪಾತ್ರದಲ್ಲಿ ಪ್ರಖ್ಯಾತರಾಗಿದ್ದ ದೀಪಕ್, ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದ ಎರಡನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಶುಕ್ರವಾರ ಜರುಗಿದ ಈ ಕಾರ್ಯಕ್ರಮದಲ್ಲಿ 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ತಮ್ಮ ಪಾತ್ರಕ್ಕಾಗಿ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿಯನ್ನು ಗೆದ್ದಿದ್ದರು.
'ತನು ವೆಡ್ಸ್ ಮನು' ಸಿನೆಮಾದ ಮೂರನೇ ಭಾಗ ಬರಲಿದೆಯೇ ಎಂಬ ಪ್ರಶ್ನೆಗೆ "ಮೂರನೇ ಭಾಗಕ್ಕೆ ಪ್ರೇಕ್ಷಕರು ಬೇಡಿಕೆಯಿಟ್ಟಿದ್ದಾರೆ. ಹೌದು ಬರಲಿದೆ" ಎಂದಿದ್ದಾರೆ ದೀಪಕ್.
ಆನಂದ ಎಲ್ ರಾಯ್ ನಿರ್ದೇಶಿಸಿದ್ದ ಮೊದಲ ಎರಡು ಭಾಗಗಳಲ್ಲಿ ಆರ್ ಮಾಧವನ್ ಮತ್ತು ಕಂಗನಾ ರನೌತ್ ಕಾಣಿಸಿಕೊಂಡಿದ್ದರು. ಎರಡು ಚಿತ್ರಗಳು ಭಾರಿ ಯಶಸ್ಸು ಕಂಡಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


