ಬಾಲಿವುಡ್

ಮುಖಕ್ಕೆ ಮುಸುಕು ಮುಚ್ಚಿಕೊಂಡು ದೆಹಲಿ ರಸ್ತೆಗಳಲ್ಲಿ ಅಲೆದ ಅಮಿತಾಬ್ ಬಚ್ಚನ್

ಬಿಗ್ ಬಿ ಅಮಿತಾಭ್‌ ಬಚ್ಚನ್ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಾಹಸ ಮಾಡಿದ್ದಾರೆ. ಮುಖವನ್ನು ಮುಚ್ಚಿಕೊಂಡು ದೆಹಲಿಯ ಗಲ್ಲಿಗಲ್ಲಿಗಳಲ್ಲಿ ಸಾಮಾನ್ಯ ಜನರಂತೆ ತಿರುಗಾಡಿದ್ದಾರೆ. ..

ಮುಖಕ್ಕೆ ಮುಸುಕು ಮುಚ್ಚಿಕೊಂಡು ದೆಹಲಿ ರಸ್ತೆಗಳಲ್ಲಿ ಅಲೆದ ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Published On :

ನವದೆಹಲಿ: ಅಭಿಮಾನಿಗಳ ಮುತ್ತಿಗೆಯಿಂದ ಪಾರಾಗಲು  ಬಿಗ್ ಬಿ ಅಮಿತಾಭ್‌ ಬಚ್ಚನ್ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಾಹಸ ಮಾಡಿದ್ದಾರೆ. ಮುಖವನ್ನು ಮುಚ್ಚಿಕೊಂಡು ದೆಹಲಿಯ ಗಲ್ಲಿಗಲ್ಲಿಗಳಲ್ಲಿ ಸಾಮಾನ್ಯ ಜನರಂತೆ ತಿರುಗಾಡಿದ್ದಾರೆ.

ಅಬ್ಬೇಪಾರಿಯಂತೆ ಓಡಾಡುತ್ತಿದ್ದ ಬಿಗ್‌ಬಿಯನ್ನು ಯಾರೊಬ್ಬರೂ ಗುರುತು ಹಿಡಿಯಲಿಲ್ಲ. ಸ್ವತಃ ಅಮಿತಾಭ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ರಿಕ್ಸ್‌ಗಳೆಲ್ಲಾ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಷ್ಟೇ ಸೀಮಿತ ಎಂದುಕೊಂಡಿದ್ದ ಅವರ ಅಭಿಮಾನಿಗಳು ಅಮಿತಾಭ್ ಅವರ ಈ ನಡೆ ಬಗ್ಗೆ ಬೆರಗಾಗಿದ್ದಾರೆ.

ಖಾಕಿ ಪ್ಯಾಂಟ್, ಫಿಟ್ಟೆಡ್ ಶರ್ಟ್ ಹಾಗೂ ಒಂದು ಮುಸುಕು ಧರಿಸಿ ಬೆಳ್ಳಂಬೆಳಗ್ಗೆ ದೆಹಲಿಯ ಜನಭರಿತ ರಸ್ತೆಗಳಲ್ಲಿ ತಿರುಗಾಡಿದ ಅಮಿತಾಭ್ ಅವರು ಈ ಚಿತ್ರಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಶೂಜಿತ್ ಸರ್ಕಾರ್ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರದ ಪಿಂಕ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ರಾಜಧಾನಿಗೆ ಬಂದಿದ್ದ ಅಮಿತಾಭ್ ಮುಖಕ್ಕೆ ಮುಸುಕು ಹಾಕಿಕೊಂಡು ಬೀದಿ ಬೀದಿಗಳಲ್ಲಿ ಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.