ಗೂಗಲ್ ಇರುವದು ಮುದುಕರಿಗೆ: ಆಲಿಯಾ ಭಟ್
ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲಹೋತ್ರಾ ಅವರೊಂದಿಗೆ ವೋಗ್ ಫೋಟೋ ಶೂಟ್ ನಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಆಲಿಯಾ ಭಟ್ ಗೂಗಲ್ ಯುವ ಜನತೆಗಲ್ಲ ಎಂದು

ನವದೆಹಲಿ: ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲಹೋತ್ರಾ ಅವರೊಂದಿಗೆ ವೋಗ್ ಫೋಟೋ ಶೂಟ್ ನಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ಆಲಿಯಾ ಭಟ್ ಗೂಗಲ್ ಯುವ ಜನತೆಗಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ಪತ್ರಿಕೆಗೆ ಸಂದರ್ಶನ ನೀಡಿರುವ ೨೨ ವರ್ಷದ ನಟಿ ದಿನಕ್ಕೆ ಎಷ್ಟು ಬಾರಿ ಗೂಗಲ್ ನಲ್ಲಿ ಹುಡುಕುತ್ತೀರಿ ಎಂಬ ಪ್ರಶ್ನೆಗೆ "ಗೂಗಲ್ ಇರುವುದು ಮುದುಕರಿಗೆ, ಇನ್ಸ್ಟಾಗ್ರಾಮ್ ಈಗ ನೂತನ ಗೂಗಲ್!" ಎಂದಿದ್ದಾರೆ.
ಈ ಮಧ್ಯೆ 'ಬ್ರದರ್ಸ್' ಸಿನೆಮಾದ ನಾಯಕ ನಟನನ್ನು ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಬಗ್ಗೆ ಪ್ರಶ್ನಿಸಿದಾಗ "ಇದು ಪೀಳಿಗೆಯ ವಿಷಯ. ನಮ್ಮ ವಯಸ್ಸಿನ ಜನ ಯಾವಾಗಲೂ ಫೋನಿನಲ್ಲಿರುತ್ತಾರೆ- ಇನ್ಸ್ಟಾಗ್ರಾಮ್ ಬಳಸುತ್ತಲೋ, ಟ್ವೀಟ್ ಮಾಡುತ್ತಲೋ, ವಾಟ್ಸ್ ಆಪ್ ಬಳಸುತ್ತಲೋ ಮತ್ತು ನಾವು ಸಿನೆಮಾರಂಗದಲ್ಲಿರುವುದರಿಂದ ಅವರ ಬಳಕೆಗೆ ಪೂರೈಕೆ ಮಾಡಬೇಕಾಗುತ್ತದೆ" ಎಂದಿದ್ದಾರೆ ಸಿದ್ಧಾರ್ಥ್.
ಮಾರ್ಚ್ ೧೮ ರಂದು ಬಿಡುಗಡೆಯಾಗಲಿರುವ 'ಕಪೂರ್ ಅಂಡ ಸನ್ಸ್' ಸಿನೆಮಾದಲ್ಲಿ ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


