ಸ್ವಂತ ಶಕ್ತಿಯಿಂದ ಬೆಳೆದಿದ್ದಕ್ಕೆ ಹೆಮ್ಮೆಯಿದೆ: ಅನುಷ್ಕಾ ಶರ್ಮಾ
ಸೇನಾ ಕುಟುಂಬದಲ್ಲಿ ಜನಿಸಿ ಬೆಳೆದು, ಮಾಡೆಲಿಂಗ್ ಕ್ಷೇತ್ರದಿಂದ ನಟನೆಗೆ ಜಿಗಿದು ಹೆಸರು ಮಾಡಿದ ನಟಿ ಅನುಷ್ಕಾ ಶರ್ಮಾ ಸ್ವಶಕ್ತಿಯಿಂದ ಈ ಮಟ್ಟಕ್ಕೆ ಏರಿರುವುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ.

ಮುಂಬೈ: ಸೇನಾ ಕುಟುಂಬದಲ್ಲಿ ಜನಿಸಿ ಬೆಳೆದು, ಮಾಡೆಲಿಂಗ್ ಕ್ಷೇತ್ರದಿಂದ ನಟನೆಗೆ ಜಿಗಿದು ಹೆಸರು ಮಾಡಿದ ನಟಿ ಅನುಷ್ಕಾ ಶರ್ಮಾ ಸ್ವಶಕ್ತಿಯಿಂದ ಈ ಮಟ್ಟಕ್ಕೆ ಏರಿರುವುದಕ್ಕೆ ಹೆಮ್ಮೆಯಿದೆ ಎಂದಿದ್ದಾರೆ.
"ನಟಿಯಾಗಿ ನನಗೆ ಈ ಜೀವನಶೈಲಿ ಸಿಕ್ಕಿದೆ ಅದನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದೇನೆ. ನನಗೆ ಎಲ್ಲೆಲ್ಲೂ ಕಾಣಿಸಿಕೊಳ್ಳುವ ಆಸಕ್ತಿಯಿಲ್ಲ. ನನಗೆ ಬಂದಿರುವ ಹೆಸರಿಗೆ ನಾನು ಋಣಿಯಾಗಿದ್ದೇನೆ. ನಾನು ಸ್ವಶಕ್ತಿಯಿಂದ ಬೆಳೆದವಳು ಅದಕ್ಕೆ ನನಗೆ ಹೆಮ್ಮೆಯಿದೆ. ನನ್ನ ಕೆಲಸವನ್ನು ಅತ್ಯಂತ ಗೌರವದಿಂದ ಕಾಣುತ್ತೇನೆ ಅದೇ
ನನ್ನ ಶಕ್ತಿ" ಎಂದು ಸೂಪರ್ ಸ್ಟಾರ್ ಶಾರುಖ್ ಖಾನ್, ಅಮೀರ್ ಖಾನ್ ಮುಂತಾದ ಸ್ಟಾರ್ ನಟರೊಂದಿಗೆ ಒಟ್ಟಿಗೆ ನಟಿಸಿರುವ ನಟಿ ಅನುಷ್ಕಾ ಹೇಳಿದ್ದಾರೆ.
"ಅದಕ್ಕಾಗಿ (ಸ್ಟಾರ್ ನಟರೊಂದಿಗೆ ನಟಿಸುವುದಕ್ಕೆ) ನಾನು ಶ್ರಮ ಪಡಲಿಲ್ಲ. ನನಗೆ ಪ್ರಮುಖವಾಗುವುದು ಸ್ಕ್ರಿಪ್ಟ್ ಮತ್ತು ನಿರ್ದೇಶಕ. ಅದೃಷ್ಟವಷಾತ್ ಒಳ್ಳೆಯ ಸ್ಕ್ರಿಪ್ಟ್ ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು" ಎಂದು ಮುಂದಿನ ಸಿನೆಮಾ 'ಸುಲ್ತಾನ್' ನಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿಸಿರುವ ಅನುಷ್ಕಾ ಹೇಳಿದ್ದಾರೆ.
ಈ ಶೋ ಉದ್ದಿಮೆಯಲ್ಲಿ ಮಹಿಳೆಯಾಗಿ ಏನೇನು ಬದಲಾವಣೆಗಳನ್ನು ಕಂಡಿದ್ದೀರಿ ಎಂಬ ಪ್ರಶ್ನೆಗೆ "ಇದು ಬದಲಾಗುತ್ತಿರುವ ವಿಶ್ವಕ್ಕೆ ಸಂಬಂಧಿಸಿದ ಪ್ರಶ್ನೆ. 10 ವರ್ಷದ ಹಿಂದೆ ಸಿನೆಮಾ ಸೆಟ್ ಗಳಲ್ಲಿ ಇಷ್ಟು ಮಹಿಳೆಯರನ್ನು ಕಾಣಲು ಸಾಧ್ಯವಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಛಾಯಾಗ್ರಹಣದವರೆಗೂ ಹಲವಾರು ಸಹಾಯಕಿಯರು ಮಹಿಳೆಯರಿದ್ದಾರೆ. ಈ ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ" ಎನ್ನುತ್ತಾರೆ ಅನುಷ್ಕಾ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


