ಬಾಲಿವುಡ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಗಾಯಕ ಬೆನ್ನಿ ದಯಾಲ್

ಬಹುಭಾಷಾ ಗಾಯಕ ಬೆನ್ನಿ ದಯಾಲ್ ತಮ್ಮ ಸ್ನೇಹಿತೆ ಕ್ಯಾಥರೀನ್ ತಂಗಮ್ ಅವರ ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ....

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್  ಗಾಯಕ ಬೆನ್ನಿ ದಯಾಲ್
ಬೆನ್ನಿ ದಯಾಳ್ ಮತ್ತು ಕ್ಯಾಥರಿನ್ ತಂಗಮ್
Published On :

ಮುಂಬೈ: ಬಹುಭಾಷಾ ಗಾಯಕ ಬೆನ್ನಿ ದಯಾಲ್ ತಮ್ಮ ಸ್ನೇಹಿತೆ ಕ್ಯಾಥರೀನ್ ತಂಗಮ್  ಅವರ  ಕೈ ಹಿಡಿಯುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಗೀತ ನಿರ್ದೇಶಕ ವಿಶಾಲ್ ದಡ್ಲಾನಿ ಟ್ವೀಟ್ ಮಾಡುವ ಮೂಲಕ ಬೆನ್ನಿ ದಯಾಲ್ ವಿವಾಹವನ್ನು ಖಚಿತ ಪಡಿಸಿದ್ದಾರೆ. 32 ವರ್ಷದ ಬ್ಯಾಂಗ್ ಬ್ಯಾಂಗ್ ಗಾಯಕ ದಯಾಲ್ ಸಾಂಪ್ರದಾಯಿಕ ದೋತಿ – ಕುರ್ತಾದಲ್ಲಿ ಹಾಕಿದ್ದರು. ಇವರ ವಿವಾಹ ಸಂಭ್ರಮಕ್ಕೆ ವಿಶಾಲ್ ದಡ್ಲಾನಿ ಸಾಕ್ಷಿಯಾಗಿದ್ದು, ಬಾಲಿವುಡ್​ನ ಸ್ಟಾರ್ ನಟ-ನಟಿಯರು ಈ ಗಾಯಕನಿಗೆ ವಿವಾಹದ ಶುಭಾಶಯ ಕೋರಿದ್ದಾರೆ.

ತಮಿಳು, ತೆಲಗು, ಹಿಂದಿ, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನೂರಕ್ಕೂ ಅಧಿಕ ಹಾಡುಗಳನ್ನು ಬೆನ್ನಿ ದಯಾಲ್ ಹಾಡಿದ್ದು, ಹಿಂದಿಯ ಪಪ್ಪು ಕಾಂಟ್ ಡಾನ್ಸ್ ಸಾಲಾ, ಕೈಸೆ ಮುಜೆ, ದಾರು ದೈಸಿ, ಏಕ್ ಮೈನ್ ಔರ್ ಏಕ್ ತು, ಬತ್ತಮಿಜ್ ದಿಲ್, ಲತ್ ಲಗ್ ಗಯಿ ಸೇರಿದಂತೆ ಹಲವಾರು ಜನಪ್ರಿಯ ಗೀತೆಗಳನ್ನು ಹಾಡಿದ್ದಾರೆ.

ಕನ್ನಡದಲ್ಲಿ ಲವ್ ಗುರು ಚಿತ್ರದ- ತಂಗಾಳಿ ತನ್ನೆದೆಯಲ್ಲಿ, ಉಲ್ಲಾಸ ಉತ್ಸಾಹ – ಚಕೋರಿ ಚಕೋರಿ, ಮಸ್ತ್ ಮಜಾ ಮಾಡಿ- ಜಣ ಜಣ ಕಾಂಚಾಣ ಸೇರಿದಂತೆ ಹಲವು ಹಾಡುಗಳು ಇವರ ಕಂಠ ಸಿರಿಯಲ್ಲಿ ಮೂಡಿಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.