ಬಾಲಿವುಡ್

ಪ್ರಿಯಾಂಕಾ ಚೋಪ್ರಾಗೆ ಗಂಡು ಬೇಕಿರುವುದು ಮಗು ಪಡೆಯಲು ಮಾತ್ರವಂತೆ!

ತನಗೆ ಪುರುಷನ ಅಗತ್ಯವಿರುವುದು ಮಕ್ಕಳನ್ನು ಪಡೆಯಲು ಮಾತ್ರ, ಅದರಿಂದಾಚೆಗೆ ನನ್ನ ಬದುಕಿನಲ್ಲಿ ಪುರುಷನ ಅಗತ್ಯ ಕಂಡುಬರುವುದಿಲ್ಲ...

ಪ್ರಿಯಾಂಕಾ ಚೋಪ್ರಾಗೆ ಗಂಡು ಬೇಕಿರುವುದು ಮಗು ಪಡೆಯಲು ಮಾತ್ರವಂತೆ!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
Published On :

ಮುಂಬೈ: ತನಗೆ ಪುರುಷನ ಅಗತ್ಯವಿರುವುದು ಮಕ್ಕಳನ್ನು ಪಡೆಯಲು ಮಾತ್ರ, ಅದರಿಂದಾಚೆಗೆ ನನ್ನ ಬದುಕಿನಲ್ಲಿ ಪುರುಷನ ಅಗತ್ಯ ಕಂಡುಬರುವುದಿಲ್ಲ ಎಂದು ಹೇಳಿದ್ದಾರೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ.

ತಮ್ಮ ನಟನೆಗೆ ಪ್ರಶಸ್ತಿ, ಪ್ರಶಂಸೆ ಪಡೆದಿರುವ ಪ್ರಿಯಾಂಕಾ ಚೋಪ್ರಾ ಮೊದಲಿನಿಂದಲೂ ಮಹಿಳಾ ಪರ ಹೋರಾಟಗಳಿಗೆ ದನಿಗೂಡಿಸಿದವರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಿಯಾಂಕಾರನ್ನು ಇತ್ತೀಚೆಗೆ ಫಿಲ್ಮ್ ಫೇರ್ ಮ್ಯಾಗಜೀನ್ ಸಂದರ್ಶನ ನಡೆಸಿತ್ತು. ಅಲ್ಲಿ ತಮ್ಮ ಖಾಸಗಿ ಜೀವನ ಮತ್ತು ಸಂಬಂಧಧ ಬಗ್ಗೆ ಸಂದರ್ಶಕರು ಪ್ರಶ್ನಿಸಿದಾಗ ಪ್ರಿಯಾಂಕಾ, ನನಗೆ ಬೇಕಾದ ಆಭರಣವನ್ನು ನಾನೇ ಖರೀದಿಸುತ್ತೇನೆ. ಇದಕ್ಕೆ ಪುರುಷನ ಅಗತ್ಯವಿಲ್ಲ. ನನ್ನ ಜೀವನದಲ್ಲಿ ಪುರುಷನ ಅಗತ್ಯವಿದ್ದರೆ ಅದು ಮಗು ಪಡೆಯುವ ಏಕೈಕ ಕಾರಣಕ್ಕೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜೀವನದಲ್ಲಿ ಸಂಗಾಂತಿ ತುಂಬಾ ಪ್ರಾಮುಖ್ಯವಾಗುತ್ತದೆ. ನಾವು ಒಂದು ಬಾರಿ ಒಬ್ಬರಿಗೆ ಮನಸ್ಸು ಕೊಟ್ಟ ಮೇಲೆ ಜೀವನಪೂರ್ತಿ ಅವರೊಂದಿಗೆ ಇರಬೇಕು. ಇಲ್ಲದಿದ್ದರೆ ಸಂಬಂಧದ ಪಾವಿತ್ರ್ಯತೆಗೆ ಅರ್ಥವೇ ಇಲ್ಲ ಎನ್ನುತ್ತಾರೆ.

ಪ್ರಿಯಾಂಕಾ ಚೋಪ್ರಾಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಬಂದಿದೆ. ಈಕೆಯ ತಂದೆ-ತಾಯಿ ಇಬ್ಬರೂ ಸೇನೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರ ಬಗ್ಗೆ ಹೆಮ್ಮೆಯೆನಿಸುತ್ತದೆ ಎನ್ನುತ್ತಾರೆ ಪ್ರಿಯಾಂಕಾ. ಪ್ರಶಸ್ತಿಯ ಕೀರ್ತಿ ತಂದೆ-ತಾಯಿಗಳಿಗೆ ಸಲ್ಲಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.