ಬಾಲಿವುಡ್

ಅಮೀರ್‍ಗೆ ಅಂಟಿದ ಬಯೋಪಿಕ್ ಕ್ರೇಜ್, ಗಾಯಕ ಕಿಶೋರ್ ಕುಮಾರ್ ಅವತಾರ

ನಟ ಅಮೀರ್ ಖಾನ್ ಒಂದು ರೀತಿ ವಿಚಿತ್ರ ಮನುಷ್ಯ. ಸದಾ ಹೊಸದನ್ನು ಸೃಷ್ಟಿಸುವ ಅಥವಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುವ ಡಿಫರೆಂಟ್ ವ್ಯಕ್ತಿ. ..

ಅಮೀರ್‍ಗೆ ಅಂಟಿದ ಬಯೋಪಿಕ್ ಕ್ರೇಜ್, ಗಾಯಕ ಕಿಶೋರ್ ಕುಮಾರ್ ಅವತಾರ
ಅಮೀರ್ ಖಾನ್
Published On :

ನಟ ಅಮೀರ್ ಖಾನ್ ಒಂದು ರೀತಿ ವಿಚಿತ್ರ ಮನುಷ್ಯ. ಸದಾ ಹೊಸದನ್ನು ಸೃಷ್ಟಿಸುವ ಅಥವಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುವ ಡಿಫರೆಂಟ್ ವ್ಯಕ್ತಿ. ಈಗವರು, ಬಾಲಿವುಡ್ ದಂತಕತೆ ಕಿಶೋರ್ ಕುಮಾರ್ ಅವತಾರಕ್ಕೆ ಮನಸ್ಸು ಮಾಡಿದ್ದಾರೆ. ದಂತಕತೆಯಾದ ವ್ಯಕ್ತಿಗಳ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವುದರಲ್ಲಿ ಅಮೀರ್ ನೀಸ್ಸಿಮರು. ಈಗಷ್ಟೇ ಅವರು ದೇಶದ ಖ್ಯಾತ ಕುಸ್ತಿಪಟು ಮಹಾವೀರ್ ಸಿಂಗ್ ಜೀವನ ಕುರಿತ `ಡಾಂಗಲ್' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.

ಈ ಚಿತ್ರ ಮುಗಿದ ನಂತರ ಕಿಶೋರ್ ಕುಮಾರ್ ಕುರಿತ ಚಿತ್ರದ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಳ್ಳಲು ಸಿದಟಛಿ ಎಂದು ಅವರು ತಮ್ಮ ಮನದಾಳದ ಇಂಗಿತ ಹೊರ ಹಾಕಿದ್ದಾರೆ. ಅಲ್ಲಿಗೆ ಲವರ್‍ಬಾಯ್ ರಣಬೀರ್ ಕಪೂರ್ ಹೆಸರು ಹಿನ್ನೆಲೆಗೆ ಸರಿದಿದೆ. ಬಾಲಿವುಡ್ ಕಂಡ ಹೆಸರಾಂತ ಸಂಗೀತ ನಿರ್ದೇಶಕ, ಹಿನ್ನೆಲೆ ಗಾಯಕ, ನಟ, ನಿರ್ಮಾಪಕ..ಹೀಗೆ ಎಲ್ಲವೂ ಆಗಿದ್ದ ಕಿಶೋರ್ ಕುಮಾರ್ ಜೀವನಗಾಥೆ
ಚಿತ್ರವಾಗುವ ಸುದ್ದಿ ಇಂದಿನದಲ್ಲ. ಮೂರು ವರ್ಷಗಳ ಹಿಂದೆಯೇ ನಿರ್ದೇಶಕ ಅನೂರಾಗ್ ಬಸು ಇಂಥದೊಂದು ಸುದ್ದಿ ಮಾಡಿದ್ದರು. ಆ ನಂತರ ಕಿಶೋರ್ ಕುಮಾರ್ ಪಾತ್ರಕ್ಕೆ ರಣಬೀರ್ ಕಪೂರ್ ಹೆಸರು ಕೇಳಿಬಂದಿತ್ತು. ಬಹುತೇಕ ಅವರೇ ಫೈನಲ್ ಎನ್ನುವ ತನಕ ಸುದ್ದಿ ಆಗಿತ್ತು.

ಅದ್ಯಾಕೋ ಈ ಸುದ್ದಿ ತೆರೆಗೆ ಸರಿದಿದ್ದು, ದಿಢೀರ್ ಈಗ ಹೊಸರೂಪ ಪಡೆದುಕೊಂಡಿದೆ. ರಣಬೀರ್ ಕಪೂರ್ ಜಾಗಕ್ಕೆ ಅಮೀರ್ ಖಾನ್ ಬರುವುದು ಗ್ಯಾರಂಟಿಯಂತೆ. ಹಾಗಾದ್ರೆ ರಣಬೀರ್ ಕಪೂರ್ ಈ ಚಿತ್ರದಿಂದ ಹಿಂದೆ ಸರಿದಿದ್ದು ಯಾಕೆ? ಅನುರಾಗ್ ಬಸು ಪ್ರಾಜೆಕ್ಟ್ ಗೆ ರಣಬೀರ್ ಕಪೂರ್ ಬದಲಿಗೆ ಅಮೀರ್ ಖಾನ್ ಬರುತ್ತಿದ್ದಾರೆಂದಾಗ ಈ ಪ್ರಶ್ನೆ ಎದ್ದೇಳುವುದು ಸಹಜ. ಅದಕ್ಕೂ ಅಮೀರ್ ಖಾನ್ ಅವರೇ ಸ್ಪಷ್ಟನೆ ನೀಡಿದ್ದಾರಂತೆ. ರಣಬೀರ್ ಕಪೂರ್ ಒಪ್ಪಿದ ನಂತರವೇ ತಾವು ಕಿಶೋರ್ ಕುಮಾರ್ ಜೀವನ ಕುರಿತ ಚಿತ್ರಕ್ಕೆ ಮನಸ್ಸು ಮಾಡಿದ್ದಾಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಮೀರ್ ಖಾನ್ ಹಾಗೂ ರಣಬೀರ್ ಕಪೂರ್ ಮುಖಾಮುಖಿ ಆಗಿದ್ದಾರೆ.

ರಣಬೀರ್ ಕಪೂರ್ ಅವರನ್ನು ಖುದ್ದು ನಟ ಅಮೀರ್ ಅವರೇ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಣಬೀರ್ ಕಪೂರ್ ಹಿಂದೆ ಸರಿಯಲು ಕಾರಣ ಎನೆಂದು ತಿಳಿಯಲು ಪ್ರಯತ್ನಿಸಿದಾಗ,ಸದ್ಯಕ್ಕೆ ಬಯೋಪಿಕ್ ಚಿತ್ರಗಳಲ್ಲಿ ಅಭಿನಯಸುವ ಮನಸ್ಸಿಲ್ಲ ಎಂದು ರಣಬೀರ್ ತಮ್ಮ ನಿರ್ಧಾರ ಹೇಳಿದರಂತೆ. ಆ ನಂತರವೇ ಅಮೀರ್ ಖಾನ್ ಈ ನಿರ್ಧಾರಕ್ಕೆ ಬಂದಿದ್ದಾರೆನ್ನುತ್ತಿವೆ ಬಾಲಿವುಡ್ ಮೂಲಗಳು. ಕೆಲವು ವಾರಗಳ ಹಿಂದೆಷ್ಟೇ ನಟ ರಣಬೀರ್ ಕಪೂರ್ ಕೂಡ, ಸದ್ಯಕ್ಕೆ ತಾವು ಅನುರಾಗ್ ಬಸು ಪ್ರಾಜೆಕ್ಟ್‍ನಲ್ಲಿ ತೊಡಗಿಸಿ ಕೊಳ್ಳುತ್ತಿಲ್ಲ ಎಂದಿದ್ದರ ಮರ್ಮಾ ಈಗ ಗೊತ್ತಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.