ಬ್ರೇಕಪ್ ನಂತರ ಮತ್ತೆ ಜತೆಯಾಗಲಿದ್ದಾರೆ ಕೊಹ್ಲಿ- ಅನುಷ್ಕಾ?
ಇಬ್ಬರ ನಡುವಿನ ಬ್ರೇಕಪ್‌ಗೆ ಕಾರಣಗಳು ಒಂದೊಂದಾಗಿಯೇ ಸುದ್ದಿಯಾಗುತ್ತಿರುವ ಈ ಹೊತ್ತಿನಲ್ಲಿ ಆ ಜೋಡಿಗಳು ಮತ್ತೆ ಒಂದಾಗಲಿದ್ದಾರೆ....

Published On :
ಮುಂಬೈ: ವ್ಯಾಲೆಂಟೈನ್ಸ್ ವಾರದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವಿನ ಬ್ರೇಕಪ್ ವಿಷಯ ಭಾರೀ ಸುದ್ದಿಯಾಗಿತ್ತು. ವಿರಾಟ್ ಕೊಹ್ಲಿ ಅನುಷ್ಕಾಳಿಗೆ ಮದುವೆಯ ಪ್ರಸ್ತಾಪ ಮಾಡಿದ್ದಕ್ಕೆ ಅನುಷ್ಕಾ ನೋ ಎಂದಿರುವುದೇ ಅವರ ನಡುವಿನ ಬ್ರೇಕಪ್‌ಗೆ ಕಾರಣ ಎಂಬ ಸುದ್ದಿ ಮೊದಲು ಹಬ್ಬಿತ್ತು.
ಅನುಷ್ಕಾ, ಕೊಹ್ಲಿಗೆ ಒಂದು ಸಂದೇಶ ಕೂಡಾ ಕಳುಹಿಸದೆ ಸಲ್ಮಾನ್ ಹೀರೋ ಆಗಿರುವ ಸುಲ್ತಾನ್ ಚಿತ್ರದ ಶೂಟಿಂಗ್‌ಗೆ ಹೋಗಿದ್ದಳು. ಅನುಷ್ಕಾ ಸುಲ್ತಾನ್ ಚಿತ್ರವನ್ನು ಒಪ್ಪಿಕೊಂಡಿರುವುದೇ ಇಬ್ಬರ ನಡುವಿನ ಬ್ರೇಕಪ್‌ಗೆ ಕಾರಣ ಎಂಬ ಸುದ್ದಿಯೂ ಹಬ್ಬಿತ್ತು.
ಆದಾಗ್ಯೂ, ಇಬ್ಬರ ನಡುವಿನ ಬ್ರೇಕಪ್‌ಗೆ ಕಾರಣಗಳು ಒಂದೊಂದಾಗಿಯೇ ಸುದ್ದಿಯಾಗುತ್ತಿರುವ ಈ ಹೊತ್ತಿನಲ್ಲಿ ಆ ಜೋಡಿಗಳು ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಬಾಲಿವುಡ್ ಮೂಲಗಳ ಪ್ರಕಾರ ವಿರಾಟ್ ಕೊಹ್ಲಿ ಅನುಷ್ಕಾಳನ್ನು ಮತ್ತೆ ಪಡೆಯುವ ಯತ್ನ ಮಾಡುತ್ತಿದ್ದಾರೆ. ಕೊಹ್ಲಿ, ಅನುಷ್ಕಾಳ ಸಹೋದರನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅನುಷ್ಕಾಳನ್ನು ಮತ್ತೆ ತನ್ನ ಜೀವನಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರಂತೆ!
ಈ ವಿಷಯದ ಬಗ್ಗೆ ಸದ್ಯ ಇಬ್ಬರೂ ಮೌನ ವಹಿಸಿದ್ದು, ಅನುಷ್ಕಾಳ ಕಡೆಯಿಂದ ಏನು ಉತ್ತರ ಬರುತ್ತದೆ ಎಂಬುದು ಕಾದು ನೋಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


