ಬಾಲಿವುಡ್

ಗೋವಿಂದ ಅಭಿಮಾನಿಗೆ ಕಪಾಳ ಮೋಕ್ಷ ಪ್ರಕರಣ: 5 ಲಕ್ಷ ಪರಿಹಾರ ನೀಡಲು ಒಪ್ಪಿಗೆ

ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣ ಸಂಬಂಧ ಆತನಿಗೆ ಐದು ಲಕ್ಷ ರೂ.ಗಳ ಪರಿಹಾರ ಕೊಡುವುದಾಗಿ ಬಾಲಿವುಡ್‌ ನಟ ಗೋವಿಂದ ತಿಳಿಸಿದ್ದಾರೆ. ..

ಗೋವಿಂದ ಅಭಿಮಾನಿಗೆ ಕಪಾಳ ಮೋಕ್ಷ ಪ್ರಕರಣ: 5 ಲಕ್ಷ ಪರಿಹಾರ ನೀಡಲು ಒಪ್ಪಿಗೆ
ಗೋವಿಂದ
Published On :

ನವದೆಹಲಿ : ತನ್ನ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಆತನಿಗೆ ಐದು ಲಕ್ಷ ರೂ.ಗಳ ಪರಿಹಾರ ಕೊಡುವುದಾಗಿ ಬಾಲಿವುಡ್‌ ನಟ ಗೋವಿಂದ ತಿಳಿಸಿದ್ದಾರೆ.

ಕೇವಲ ಪರಿಹಾರ ನೀಡಿದರೇ ಸಾಲದು, ಪರಿಹಾರದ ಹಣದ ಜೊತೆಗೆ ಅಭಿಮಾನಿಯ ಬಳಿ ಕ್ಷಣೆ ಕೇಳಬೇಕೆಂದು ಸುಪ್ರಿಂಕೋರ್ಟ್ ಸೂಚಿಸಿದೆ. ಇದಕ್ಕಾಗಿ ನಟ ಗೋವಿಂದ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಿದೆ.

2008ರಲ್ಲಿ ಮನೀ ಹೈ ತೋ ಹನಿ ಹೈ ಎಂಬ ಚಿತ್ರದ ಚಿತ್ರೀಕರಣ ಸಮಯದಲ್ಲಿ ಈ ಘಟನೆ ನಡೆದಿತ್ತು, ಸಂತೋಷ್‌ ರಾಯ್‌ ಪೂರ್ವಾನುಮತಿ ಪಡೆಯದೇ ಚಿತ್ರೀಕರಣದ ಸೆಟ್ಟಿಗೆ ಬಂದುದಲ್ಲದೆ ನೃತ್ಯಗಾತಿಯರಾಗಿ ಬಂದಿದ್ದ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಇದರಿಂದ ಕುಪಿತರಾದ ನಟ ಗೋವಿಂದ, ಆತನಿಗೆ ಕಪಾಳಮೋಕ್ಷ ಮಾಡಿದ್ದರು.

ತನ್ನ ಮೇಲೆ ನಟ ಗೋವಿಂದ ಅವರು ಹಲ್ಲೆ ಮಾಡಿ ಕ್ರಿಮಿನಲ್‌ ಬೆದರಿಕೆ ಒಡ್ಡಿದರೆಂದು ಸಂತೋಷ್‌ ರಾಯ್‌ 2009 ರಲ್ಲಿ  ಬಾಂಬೇ ಹೈಕೋರ್ಟಿಗೆ ದೂರು ನೀಡಿದ್ದರು. 2013ರಲ್ಲಿ ಬಾಂಬೇ ಹೈಕೋರ್ಟ್‌ ಈ ದೂರನ್ನು ವಜಾ ಮಾಡಿತ್ತು. ಅದಾಗಿ ಸಂತೋಷ್‌ 2014ರಲ್ಲಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಲೇರಿದ್ದರು. ಈಗ ಅವರಿಗೆ ಜಯ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.