ಬಾಲಿವುಡ್

ಮಹಿಳೆಯರು ಇಚ್ಛಿಸುವ ಉಡುಗೆ ತೊಡಲು ಬಿಡಬೇಕು: ವಿದ್ಯಾಬಾಲನ್

ಮಹಿಳೆ ಉಟ್ಟಿರುವ ಬಟ್ಟೆಯ ಅಳತೆಯ ಮೇಲೆ ಗೌರವ ನೀಡುವ ಮನೋಭಾವವನ್ನು ಬಿಡಬೇಕು. ಆಕೆಗಿಚ್ಛಿಸುವ ಉಡುಗೆ ತೊಡಲು ಆಕೆಯನ್ನು ಬಿಡಬೇಕು ಎಂದು ಬಾಲಿವುಡ್ ನಟಿ ವಿದ್ಯಾಬಾಲನ್ ಹೇಳಿದ್ದಾರೆ...

ಮಹಿಳೆಯರು ಇಚ್ಛಿಸುವ ಉಡುಗೆ ತೊಡಲು ಬಿಡಬೇಕು: ವಿದ್ಯಾಬಾಲನ್
ಬಾಲಿವುಡ್ ನಟಿ ವಿದ್ಯಾಬಾಲನ್ (ಸಂಗ್ರಹ ಚಿತ್ರ)
Published On :

ಮುಂಬೈ: ಮಹಿಳೆ ಉಟ್ಟಿರುವ ಬಟ್ಟೆಯ ಅಳತೆಯ ಮೇಲೆ ಗೌರವ ನೀಡುವ ಮನೋಭಾವವನ್ನು ಬಿಡಬೇಕು. ಆಕೆಗಿಚ್ಛಿಸುವ ಉಡುಗೆ ತೊಡಲು ಆಕೆಯನ್ನು ಬಿಡಬೇಕು ಎಂದು ಬಾಲಿವುಡ್ ನಟಿ  ವಿದ್ಯಾಬಾಲನ್ ಹೇಳಿದ್ದಾರೆ.

ಮುಂಬೈನಲ್ಲಿ "ಯೂತ್ ಫಾರ್ ಯೂನಿಟಿ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ವಿದ್ಯಾಬಾಲನ್ ಅವರು, ಸ್ತ್ರೀಯರು ತೊಟ್ಟಿರುವ ಉಡುಗೆಯ ಅಳತೆಯ ಮೇರೆಗೆ ಅವರನ್ನು  ಗೌರವಿಸುವ ಮನೋಭಾವವನ್ನು ಬಿಡಬೇಕು. ಆಕೆಯ ಗೌರವಕ್ಕೂ ಆಕೆ ತೊಡುವ ಬಟ್ಟೆಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಮಹಿಳೆಯರು ಇಚ್ಛಿಸಿದ ಉಡುಗೆ ತೊಡಲು ಅವರು  ಸ್ವತಂತ್ರರಾಗಿದ್ದಾರೆ ಎಂದು ಹೇಳಿದರು.

"ಸ್ತ್ರೀಯರು ಪುರುಷರ ಸಮನಾಗಿ ಬೆಳೆಯುತ್ತಿದ್ದಾರೆ. ನಮ್ಮ ಸಮಾಜದ ಆಲೋಚನಾ ಲಹರಿ ಬದಲಾಗಿದೆ. ಮಹಿಳೆಯರು ತಮ್ಮ  ಕಾಲ ಮೇಲೆ ನಿಂತು ತಾವೂ ಕೂಡ ಪುರುಷರಿಗೆ ಸಮ ಎಂದು  ತೋರಿಸುತ್ತಿದ್ದಾರೆ. ಗಂಡು-ಹೆಣ್ಣಿನ ನಡುವೆ ಯಾವುದೇ ಭೇದವಿಲ್ಲ. ಇಬ್ಬರೂ ಸಮಾನರೇ. ಇಡೀ ಜಗತ್ತು ಕೂಡ ಇದೀಗ ಮಹಿಳೆ ಮತ್ತು ಪುರುಷರಿಗೆ ಸಮಾನ ವೇದಿಕೆ ಕಲ್ಪಿಸಿದೆ ಎಂದು ವಿದ್ಯಾ  ಅಭಿಪ್ರಾಯಪಟ್ಟರು.

ಇದೇ ವೇಳೆ ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಮಾತನಾಡಿದ ವಿದ್ಯಾ, ಮಹಿಳೆಯರ ಮೇಲಿನ ದೌರ್ಜನ್ಯಗಳು ಎಲ್ಲೆಡೆ ಹೆಚ್ಚುತ್ತಿವೆ. ಕಾಲೇಜು ದಿನಗಳ ಬಳಿಕ ನನಗೆ ಇಂತಹ ಅನುಭವಗಳಾಗಿಲ್ಲ. ಆದರೆ ಮಾಧ್ಯಮಗಳಲ್ಲಿನ ವರದಿಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ತೊಟ್ಟ ಉಡುಗೆಯಿಂದಲೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ. ಆಲೋಚನಾ ಲಹರಿಯನ್ನು ಬದಲಿಸಬೇಕಿದೆ. ಮಹಿಳೆಯರು, ಯುವತಿಯರು ನಿಜಕ್ಕೂ ಧೈರ್ಯ ತಂದುಕೊಳ್ಳಬೇಕು. ತಮ್ಮ ವಿರುದ್ಧದ  ಎಂತಹುದೇ ಕಿರುಕುಳವನ್ನು ಎದುರಿಸಿ ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.