'xXx ...' ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ: ದೀಪಿಕಾ ಪಡುಕೋಣೆ
ಬಾಲಿವುಡ್ ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್' ವಿಶ್ವದೆಲ್ಲೆಡೆಗಿಂತ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ.

Published On :
ಮುಂಬೈ: ಬಾಲಿವುಡ್ ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್' ವಿಶ್ವದೆಲ್ಲೆಡೆಗಿಂತ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಜನವರಿ ೧೪ ರಂದು ಈ ಸಿನೆಮಾ ತೆರೆ ಕಾಣಲಿದೆ.
"xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಮೊದಲು ಭಾರತದಲ್ಲಿ ಬಿಡುಗಡೆಯಾಲಿದೆ ಎಂದು ಘೋಷಿಸುವುದಕ್ಕೆ ಥ್ರಿಲ್ ಆಗಿದ್ದೇನೆ! ವಿಶ್ವದೆಲ್ಲೆಡೆ ಬಿಡುಗಡೆಯಾಗುವುದಕ್ಕೆ ಮೊದಲು! ಜನವರಿ ೧೪ ರಂದು" ಎಂದು ದೀಪಿಕಾ ಬುಧವಾರ ಟ್ವೀಟ್ ಮಾಡಿದ್ದಾರೆ.
ಈ ಅಂತಾರಾಷ್ಟ್ರೀಯ ಸಿನೆಮಾದಲ್ಲಿ ನಟಿ, ಸೆರೆನಾ ಉಂಗರ್ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಹಾಲಿವುಡ್ ನ ಖ್ಯಾತ ನಟ ವಿನ್ ಡೀಸೆಲ್ ನಾಯಕ ನಟ.
ಡಿಜೆ ಕಾರುಸೋ ನಿರ್ದೇಶಿಸರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್', ೨೦೦೨ ರಲ್ಲಿ ಬಿಡುಗಡೆಯಾದ 'xXx ' ಮತ್ತು ೨೦೦೫ ರಲ್ಲಿ ಬಿಡುಗಡೆಯಾದ 'xXx : ಸ್ಟೇಟ್ ಆಫ್ ಯೂನಿಯನ್' ಸಿನೆಮಾ ಸರಣಿಗಳ ಮುಂದಿನ ಭಾಗ. ಈ ಸಿನೆಮಾದಲ್ಲಿ ರೂಬಿ ಜೋಸ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡಾನ್ನಿ ಯೆನ್ ಮತ್ತು ಟೋನಿ ಜಾ ಕೂಡ ನಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Deepika Padukoneದೀಪಿಕಾ ಪಡುಕೋಣೆHollywoodಹಾಲಿವುಡ್Vin Dieselವಿನ್ ಡೀಸೆಲ್xXx: Return of Xander CagexXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


