ಅಮೀರ್ ವಿವಾಹ ವಾರ್ಷಿಕೋತ್ಸವ; ಕಿರಣ್ ಗೆ ಅಚ್ಚರಿ ಔತಣಕೂಟಕ್ಕಾಗಿ ಸಜ್ಜು!
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೮ ರಂದು ಆಚರಿಸಿಕೊಳ್ಳಲಿದ್ದಾರೆ. ಈ ದಿನವನ್ನು ವಿಶೇಷವಾಗಿಸುವ ಸಲುವಾಗಿ

Published On :
ಬೆಂಗಳೂರು: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಕಿರಣ್ ರಾವ್ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಡಿಸೆಂಬರ್ ೨೮ ರಂದು ಆಚರಿಸಿಕೊಳ್ಳಲಿದ್ದಾರೆ. ಈ ದಿನವನ್ನು ವಿಶೇಷವಾಗಿಸುವ ಸಲುವಾಗಿ ಅಮೀರ್, ತಮ್ಮ ಪಂಚ್ಗನಿ ಮನೆಯಲ್ಲಿ, ನಿಕಟ ಗೆಳೆಯರು ಮತ್ತು ಕುಟುಂಬದೊಂದಿಗೆ ನಾಲ್ಕು ದಿನಗಳ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ೧೧ ವರ್ಶಗಳ ಹಿಂದೆ ಕಿರಣ್ ಅವರನ್ನು ಮದುವೆಯಾದ ಸ್ಥಳದಲ್ಲೇ ಔತಣಕೂಟ ಆಯೋಜಿಸಲಾಗಿದೆ.
ಪಂಚ್ಗನಿ ಮನೆಯನ್ನು ಅಮೀರ್ ಅದೃಷ್ಟವೆಂದು ಪರಿಗಣಿಸುತ್ತಾರೆ. ಮುಂಬೈನ ಜೀವನದಿಂದ ವಿರಾಮ ಮತ್ತು ಶಾಂತಿ ಬಯಸಿದಾಗ, ಅವರಿಗೆ ಮತ್ತು ಕಿರಣ್ ಗೆ ಅದು ಅಡಗುತಾಣ ಕೂಡ. ಡಿಸೆಂಬರ್ ೨೮ ರಂದು ಅಮೀರ್ ಮತ್ತು ಕಿರಣ್ ತಮ್ಮಷ್ಟಕ್ಕೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳಲಿದ್ದು, ೨೯ ರಿಂದ ಅತಿಥಿಗಳನ್ನು ಆಹ್ವಾನಿಸಲಾಗಿದೆ ಮತ್ತು ಇದು ಜನವರಿ ೧ ೨೦೧೭ ರವರೆಗೆ ಮುಂದುವರೆಯಲಿದೆ. ವಾರ್ಷಿಕೋತ್ಸವ ಮತ್ತು ಹೊಸ ವರ್ಷಾಚರಣೆ ಎರಡು ಒಟ್ಟಾಗಲಿದ್ದು, ಅಮೀರ್ ಅವರೇ ವೈಯಕ್ತಿಕವಾಗಿ ಸಿದ್ಧತೆಗಳ ನೇತೃತ್ವ ವಹಿಸಿದ್ದಾರೆ. ಮೂರು ದಿನಗಳ ಅದ್ದೂರಿ ಆಚರಣೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಆಮೀರ್ ಮನವಿಯನ್ನು ತಳ್ಳಿಹಾಕಿದ ತಲೈವ
ಈ ವರ್ಷದ ಅತಿ ಹೆಚ್ಚು ನಿರೀಕ್ಷಿತ ಬಾಲಿವುಡ್ ಚಿತ್ರ ಎಂದೇ ಬಿಂಬಿಸಲಾಗಿರುವ ಅಮೀರ್ ಖಾನ್ ನಟಿಸಿರುವ 'ದಂಗಾಲ್' ಶೀಘ್ರದಲ್ಲೇ ಬಿಡುಗಡೆಯಾಗಬೇಕಿದೆ. ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು, ತಮಿಳು ಅವತರಿಣಿಕೆಗೆ ಅಮೀರ್ ಖಾನ್ ಭಾಗವನ್ನು ಡಬ್ ಮಾಡಲು ನಟ ರಜನಿಕಾಂತ್ ಅವರನ್ನು ವೈಯಕ್ತಿವಾಗಿ ಅಮೀರ್ ಕೋರಿದ್ದರಂತೆ. "ಈ ಸಿನೆಮಾ ನೋಡಿ ಬಹಳ ಸಂತಪಟ್ಟರು ಆದರೆ ರಜನಿ ಸರ್ ವಿನಯದಿಂದ ಇದನ್ನು ತಿರಸ್ಕರಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ತಿಳಿದಂತೆ, ಡಿಸೆಂಬರ್ ೨೩ ರಂದು ಮೂಲ ಹಿಂದಿ ಚಿತ್ರದೊಂದಿಗೆ ತಮಿಳು ಡಬ್ ಅವತರಿಣಿಕೆಯು ಬಿಡುಗಡೆಯಾಗಲಿದೆ ಎನ್ನಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


