ಬಾಲಿವುಡ್

ಕತ್ರಿನಾ ಕೈಫ್ ನನ್ನ ಜೀವನಕ್ಕೆ ಸ್ಫೂರ್ತಿ: ರಣಬೀರ್ ಕಪೂರ್

ಇತ್ತೀಚೆಗೆ ಮಂಕು ಕವಿದಂತೆ ಕಂಡುಬರುತ್ತಿರುವ ಬಾಲಿವುಡ್ ನಟ ರಣಬೀರ್ ಕಪೂರ್, ಗೆಳತಿ ಕತ್ರಿನಾ ಕೈಫ್ ಜೊತೆ...

ಕತ್ರಿನಾ ಕೈಫ್ ನನ್ನ ಜೀವನಕ್ಕೆ ಸ್ಫೂರ್ತಿ: ರಣಬೀರ್ ಕಪೂರ್
ರಣಬೀರ್ ಕಪೂರ್-ಕತ್ರಿನಾ ಕೈಫ್
Published On :
ಮುಂಬೈ: ಇತ್ತೀಚೆಗೆ ಮಂಕು ಕವಿದಂತೆ ಕಂಡುಬರುತ್ತಿರುವ ಬಾಲಿವುಡ್ ನಟ ರಣಬೀರ್ ಕಪೂರ್, ಗೆಳತಿ ಕತ್ರಿನಾ ಕೈಫ್ ಜೊತೆ ಬ್ರೇಕ್ ಅಪ್ ಆದ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಇವೆಲ್ಲದರ ಬಗ್ಗೆ ಸ್ವತಃ ರಣಬೀರ್ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಇತ್ತೇಚೆಗೆ ಸಹೋದರಿ ಕರೀನಾ ಕಪೂರ್ ಖಾನ್ ಮನೆಗೆ ರಾತ್ರಿ ಊಟಕ್ಕೆ ಹೋಗಿದ್ದ ರಣಬೀರ್ ಅಂದೇ ಕತ್ರಿನಾಳನ್ನೂ ಕೂಡ ಗುಟ್ಟಾಗಿ ಭೇಟಿಯಾಗಿದ್ದರು ಎಂದು ಸುದ್ದಿ ಹಬ್ಬಿತ್ತು. ಆದರೆ ಈ ಎಲ್ಲಾ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿರುವ ರಣಬೀರ್ ಇದೆಲ್ಲಾ ಸುಳ್ಳು, ಸುಮ್ಮನೆ ಮಾಧ್ಯಮದ ಒಂದು ವರ್ಗ ಪ್ರೇಕ್ಷಕರನ್ನು ಬ್ರೈನ್ ವಾಶ್ ಮಾಡ್ತಿದೆ. ನಾನು ಕತ್ರಿನಾಳನ್ನು ಕದ್ದುಮುಚ್ಚಿ ಭೇಟಿಯಾಗಿಲ್ಲ, ಅದೆಲ್ಲಾ ಮೀಡಿಯಾದವ್ರ ಕಟ್ಟುಕಥೆ. ಇಂಥ ಸುದ್ದಿಗಳನ್ನು ಹಬ್ಬಿಸೋದ್ರಿಂದ ನಮಗೂ ಬೇಜಾರಾಗ್ತಿದೆ. ನಾವು ಸೆಪ್ಟೆಂಬರ್ 10ಕ್ಕೆ ಒಟ್ಟಾಗುತ್ತಿದ್ದೇವೆ, ಅದು ಜಗ್ಗಾ ಜಸೂಸ್ ಚಿತ್ರದ ಮುಂದಿನ ಭಾಗದ ಚಿತ್ರೀಕರಣಕ್ಕಾಗಿ ಎಂದು ಹೇಳಿದ್ದಾರೆ.
ನಾವು ಬ್ರೇಕಪ್ ಆಗಿದ್ದೇವು ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದರ ಬಗ್ಗೆ ಮಾತನಾಡುವ ಅವಶ್ಯಕತೆಯಿದೆ ಎಂದು ನನಗನಿಸುವುದಿಲ್ಲ. ನನ್ನ ಖಾಸಗಿ ಜೀವನವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಕತ್ರಿನಾ ಜೊತೆಗಿನ ನನ್ನ ಸಂಬಂಧ ನನ್ನ ಜೀವನದಲ್ಲಿ ಹಿಂದೆ, ಇಂದು ಮತ್ತು ಮುಂದೆಂದೂ ಬಹಳ ಪ್ರಭಾವ ಬೀರಲಿದೆ.ಆಕೆಯ ಜೊತೆ ಕಳೆದ ಕ್ಷಣ, ಹಂಚಿಕೊಂಡ ವಿಷಯ, ಭಾವನೆಗಳು ನನಗೆ ತುಂಬಾ ಮುಖ್ಯವಾಗಿದೆ. ಇಲ್ಲಿ ನನಗೆ ಯಾವುದೇ ವಿಷಾದವಿಲ್ಲ, ಯಾವುದೇ ಋಣಾತ್ಮಕ ಭಾವನೆಯಿಲ್ಲ. ನನ್ನ ತಂದೆತಾಯಿ ನಂತರ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿಯೆಂದರೆ ಕತ್ರಿನಾ, ಆಕೆ ನನ್ನ ಜೀವನಕ್ಕೆ ಸ್ಫೂರ್ತಿ ಎಂದು ಹೇಳಿದ್ದಾರೆ.
ಸಂಬಂಧ ಮುರಿದು ಬಿದ್ದ ನಂತರ ಕತ್ರಿನಾ ಜೊತೆ ಸಿನಿಮಾದಲ್ಲಿ ನಟಿಸುವ ರೀತಿಯಲ್ಲಿ ಏನಾದರೂ ಬದಲಾವಣೆಯಾಗಲಿದೆಯೇ ಎಂದು ಕೇಳಿದ್ದಕ್ಕೆ ಸಾರಾಸಗಟಾಗಿ ತಳ್ಳಿಹಾಕಿದ ರಣಬೀರ್, ಕತ್ರಿನಾ ಜೊತೆ ಕೆಲಸ ಮಾಡುವುದೆಂದರೆ ಅದೊಂದು ತಮಾಷೆ.ಅವರಿಗೆ ಅವರು ಮಾಡುವ ಕೆಲಸದಲ್ಲಿ ತುಂಬಾ ಉತ್ಸಾಹವಿದೆ. ಅಲ್ಲಿ ಯಾವುದೇ ಮುಜುಗರವಿಲ್ಲವಿಲ್ಲ. ಭವಿಷ್ಯದಲ್ಲಿ ಕೂಡ ನಾವು ಒಟ್ಟಿಗೆ ಕೆಲಸ ಮಾಡುವ ಆಶಾವಾದವಿದೆ ಎಂದು ಮಾಜಿ ಪ್ರಿಯತಮೆ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಈ ಹಿಂದೆ ಕೆಲ ವರ್ಷಗಳವರೆಗೆ ಜೋಡಿ ಹಕ್ಕಿಗಳಂತೆ ಪ್ರೀತಿಸಿ ನಂತರ ದೂರವಾಗಿದ್ದರು ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ. ಈಗ ಇವರಿಬ್ಬರೂ ಬಾಲಿವುಡ್ ನಲ್ಲಿ ಉತ್ತಮ ಸ್ನೇಹಿತರು. ಬ್ರೇಕ್ ಅಪ್ ನಂತರ ಯೆ ಜವಾನಿ ಹೈ ದಿವಾನಿ ಮತ್ತು ತಮಾಶಾ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಎರಡೂ ಚಿತ್ರಗಳು ಜನರ ಗಮನ ಸೆಳೆದಿದ್ದವು. 
ದೀಪಿಕಾಳಂತೆ ಕತ್ರಿನಾ ಜೊತೆಗೂ ಕೂಡ ಆ ಮಟ್ಟದವರೆಗೆ ಕಂಫರ್ಟ್ ಹೊಂದಿ ಚಿತ್ರಗಳಲ್ಲಿ ಅಭಿನಯಿಸಲು ಸಾಧ್ಯವೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ರಣಬೀರ್, ನಾವು ನಟರು, ನಮ್ಮ ಖಾಸಗಿ ಜೀವನ ಮತ್ತು ಭಾವನೆಗಳನ್ನು ಸೆಟ್ ಗೆ ತರಲು ಸಾಧ್ಯವಿಲ್ಲ. ನಿಜವಾಗಿ ಹೇಳಬೇಕೆಂದರೆ ಕತ್ರಿನಾ ಕೆಲಸವನ್ನು ಸುಲಭ ಮಾಡುತ್ತಾರೆ. ಆಕೆಯ ಜೊತೆ ಅಭಿನಯಿಸಲು ಮುಜುಗರ ಅಥವಾ ವಿಚಿತ್ರವನ್ನಿಸುವುದಿಲ್ಲ. ನಾವಿಬ್ಬರೂ ವೃತ್ತಿಪರರಾಗಿರಬೇಕೆಂದು ನಂಬುವವರು ಮತ್ತು ಉತ್ತಮ ಅಭಿನಯ ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ.
ನಾವು ತುಂಬಾ ಉತ್ತಮ ಕ್ರಿಯಾಶೀಲ ಮನೋಭಾವವನ್ನು ಹಂಚಿಕೊಳ್ಳುತ್ತೇವೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೆ ಇದಕ್ಕೆ ಕತ್ರಿನಾ ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಅನ್ನೋದ ಕುತೂಹಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.