ದಕ್ಷಿಣ ಭಾರತದ ಚಿತ್ರಕತೆಗಳನ್ನು ನೋಡಿ ಬಾಲಿವುಡ್ ಕಲಿಯಬೇಕಿದೆ: ರಾಮ್ ಚರಣ್
ದಕ್ಷಿಣ ಭಾರತದ ಚಿತ್ರಕತೆಗಳನ್ನು ನೋಡಿ ಬಾಲಿವುಡ್ ಕಲಿಯಬೇಕಿದೆ ಎಂದು ನಟ ರಾಮ್ ಚರಣ್ ಹೇಳಿದ್ದಾರೆ. ಸದ್ಯ, ತಮಿಳು...

Published On :
ನವದೆಹಲಿ: ದಕ್ಷಿಣ ಭಾರತದ ಚಿತ್ರಕತೆಗಳನ್ನು ನೋಡಿ ಬಾಲಿವುಡ್ ಕಲಿಯಬೇಕಿದೆ ಎಂದು ನಟ ರಾಮ್ ಚರಣ್ ಹೇಳಿದ್ದಾರೆ. ಸದ್ಯ, ರಾಮ್ ತಮಿಳು ಹಿಟ್ ಚಿತ್ರವಾದ 'ತಣಿ ಒರುವನ್' ನ ತೆಲುಗು ರಿಮೇಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಇಲ್ಲಿಯವರೆಗೆ 10 ಚಿತ್ರಗಳಲ್ಲಿ ನಟಿಸಿರುವ ರಾಮ್ ಚರಣ್ ಜಂಜೀರ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು. 1973ರಲ್ಲಿ ಬಿಡುಗಡೆಯಾದ ಪ್ರಕಾಶ್ ಮೆಹ್ರಾ ನಿರ್ದೇಶನದ ಜಂಜೀರ್ ಸಿನಿಮಾದ ರಿಮೇಕ್ ಆಗಿತ್ತು ಈ ಜಂಜೀರ್ ಸಿನಿಮಾ.
ಸಿನಿಮಾ ನಿರ್ಮಾಣದ ಕೆಲವೊಂದು ಅಂಶಗಳನ್ನು ದಕ್ಷಿಣ ಭಾರತದ ಸಿನಿಮಾ ರಂಗ ಅಳವಡಿಸಿಕೊಳ್ಳಬೇಕಿದೆ. ಆದರೆ ಚಿತ್ರಕತೆ ವಿಚಾರಕ್ಕೆ ಬಂದರೆ ಬಾಲಿವುಡ್ ದಕ್ಷಿಣ ಭಾರತದ ಚಿತ್ರರಂಗದಿಂದ ಕಲಿತುಕೊಳ್ಳಬೇಕಿದೆ. ಇಲ್ಲಿರುವ ಫೈಟ್, ಆಕ್ಷನ್ ಗಳ ಬಗ್ಗೆ ಅಲ್ಲ ಡ್ರಾಮಾ ಬಗ್ಗೆ ನಾನು ಹೇಳುತ್ತಿದ್ದೀನಿ.
ದಕ್ಷಿಣ ಭಾರತದಲ್ಲಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುವಂತವುಗಳು. ಕೆಲವರಿಗೆ ಇಂಥಾ ಚಿತ್ರಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಆದರೆ ಬಾಲಿವುಡ್ ನಲ್ಲಿ ಹೆಚ್ಚಿನವು ಮಲ್ಟಿಪ್ಲೆಕ್ಸ್ ಸಿನಿಮಾಗಳೇ. ದಕ್ಷಿಣದಲ್ಲಿ ದೊಡ್ಡ ಚಿತ್ರವಾಗಲೀ, ಚಿಕ್ಕದಾಗಿರಲಿ ಎಲ್ಲರೂ ನೋಡುತ್ತಾರೆ. ಅಂದರೆ ಎಲ್ಲರೂ ನೋಡತಕ್ಕಂಥಾ ಸಿನಿಮಾಗಳು ಇಲ್ಲಿವೆ, ಜನರು ಬಂದು ನೋಡ್ತಾರೆ, ಖುಷಿ ಪಡುತ್ತಾರೆ ಎಂದು ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಚರಣ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


