ಬಾಲಿವುಡ್

ಬಾಲಿವುಡ್ ಬಾದ್ ಶಾ ಟ್ವಿಟರ್ ನಲ್ಲಿ ಫಾಲೋ ಮಾಡುವ "ಫ್ಯಾನ್" ಇವನೇ!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇವರ ಪೈಕಿ ಕೆಲವರು ಮಾತ್ರ ಅವರ ಹೃದಯ ಗೆದ್ದಿದ್ದು, ಅವರಲ್ಲಿ ಸುದೀರ್ ಕೊಠಾರಿ ಕೂಡ ಒಬ್ಬರು...

ಬಾಲಿವುಡ್ ಬಾದ್ ಶಾ ಟ್ವಿಟರ್ ನಲ್ಲಿ ಫಾಲೋ ಮಾಡುವ "ಫ್ಯಾನ್" ಇವನೇ!
"ಫ್ಯಾನ್" ಸುಧೀರ್ ಕೊಠಾರಿ ಜೊತೆ ಶಾರುಖ್ ಖಾನ್
Published On :

ಚೆನ್ನೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇವರ ಪೈಕಿ ಕೆಲವರು ಮಾತ್ರ ಅವರ ಹೃದಯ ಗೆದ್ದಿದ್ದು, ಅವರಲ್ಲಿ ಸುದೀರ್ ಕೊಠಾರಿ ಕೂಡ  ಒಬ್ಬರು.

ಟ್ವಿಟರ್ ನಲ್ಲಿ ನಟ ಶಾರುಖ್ ಖಾನ್ ರನ್ನು ಸುಮಾರು 90 ಮಿಲಿಯನ್ ಮಂದಿ ಫಾಲೋ ಮಾಡುತ್ತಾರೆಯಾದರೂ, ಶಾರುಖ್ ಖಾನ್ ಮಾತ್ರ ಫಾಲೋ ಮಾಡುವುದು ಕೇವಲ 79 ಅಭಿಮಾನಿಗಳನ್ನು  ಮಾತ್ರ. ಈ ಪೈಕಿ ಚೆನ್ನೈ ಮೂಲದ ಉಧ್ಯಮಿ ಸುಧೀರ್ ಕೊಠಾರಿ ಕೂಡ ಒಬ್ಬರು. ಸುಧೀರ್ ಕೊಠಾರಿ ಎಸ್ ಅರ್ ಕೆ ಚೆನ್ನೈ ಫ್ಯಾನ್ಸ್ ಕ್ಲಬ್ ಅನ್ನು ಸ್ಥಾಪನೆ ಮಾಡಿದ್ದು, ಇದೀಗ ಈ ಕ್ಲಬ್ ಕೇವಲ  ತಮಿಳುನಾಡು ಮಾತ್ರವಲ್ಲದೇ ವಿಶ್ವವ್ಯಾಪಿ ಸುಮಾರು 42 ಬ್ರಾಂಚ್ ಗಳನ್ನು ಹೊಂದಿದೆ. ಇವುಗಳಲ್ಲಿ ಆಸ್ಟ್ರೇಲಿಯಾ ಮತ್ತು ಅಜರ್ ಬೈಜಾನ್ ದೇಶಗಳೂ ಕೂಡ ಸೇರಿವೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಸುಧೀರ್ ಕೊಠಾರಿ. ತಮ್ಮ ಮತ್ತು ಶಾರುಖ್ ಖಾನ್ ನಡುವಿನ ರೋಚಕ ಸ್ನೇಹ ಸಂಬಂಧವನ್ನು ಎಳೆಎಳೆಯಾಗಿ  ಬಿಚ್ಚಿಟ್ಟಿದ್ದಾರೆ.

3 ವರ್ಷಗಳ ಹಿಂದೆ ಅಂದರೆ 2016 ಆಗಸ್ಟ್ 28 ರಂದು ಮೊದಲ ಬಾರಿಗೆ  ಸುಧೀರ್ ಕೊಠಾರಿ ಶಾರುಖ್ ಖಾನ್ ರನ್ನು ಟ್ವಿಟರ್ ನಲ್ಲಿ ಸಂಪರ್ಕಿಸಿ, ತಮ್ಮ ನೂತನ "ಚಕ್ ದೇ ಸ್ಟಾಕ್" ಹೆಸರಿನ ಸಂಸ್ಥೆ  ಉದ್ಘಾಟನೆ ಕುರಿತಂತೆ ಶಾರುಖ್ ಖಾನ್ ಅವರ ಆಶೀರ್ವಾದ ಕೇಳಿದ್ದಾರೆ. ಆಚ್ಚರಿ ಎಂದರೆ ಸುಧೀರ್ ಅವರ ಟ್ವಿಟರ್ ಸಂದೇಶಕ್ಕೆ ಸ್ವತಃ ಶಾರುಖ್ ಖಾನ್ ಪ್ರತಿಕ್ರಿಯಿಸಿರುವುದಷ್ಟೇ ಅಲ್ಲದೇ  ಟ್ವಿಟರ್ ನಲ್ಲಿ ಅವರನ್ನು ಫಾಲೋ ಕೂಡ ಮಾಡುತ್ತಿದ್ದಾರೆ ಎಂದು ಸುಧೀರ್ ಕೊಠಾರಿ ಹೇಳಿದ್ದಾರೆ.

ಇನ್ನು ಕೊಠಾರಿ ಶಾರುಖ್ ಗುಂಗಿನಲ್ಲಿ ತಮ್ಮ ಮದುವೆ ವಾರ್ಷಿಕೋತ್ಸವವನ್ನೇ ಮರೆತಿದ್ದರಂತೆ. ಇದೇಕಾರಣಕ್ಕೆ ಅವರ ಕುಟುಂಬಸ್ಥರು ಶಾರುಖ್ ರನ್ನು ದ್ವೇಷಿಸುತ್ತಾರೆ ಎಂದು ಕೊಠಾರಿ  ಹೇಳಿಕೊಂಡಿದ್ದಾರೆ. ಕೊಠಾರಿ ನಾಲ್ಕನೇ ವಯಸ್ಸಿನಿಂದಲೂ ಶಾರುಖ್ ಅವರ ಫ್ಯಾನ್ ಆಗಿದ್ದು, ಅವರನ್ನು ದೇವರೆಂದೇ ಪೂಜಿಸುತ್ತಾರೆ. ಇನ್ನು ತಮ್ಮ ಸಂಸ್ಥೆ ಆರಂಭಕ್ಕೆ ಶುಭಕೋರಿದ್ದ ಕೊಠಾರಿಗೆ  ಶಾರುಖ್ ರಿಂದ ಪ್ರತಿಕ್ರಿಯೆ ಲಭಿಸಿತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಠಾರಿ ಅವರ ಆಶೀರ್ವಾದ ಲಭಿಸಿದ್ದು, ಅಂದಿನಿಂದ ಇಂದಿನವರೆಗೂ ಅವರ ಸಂಸ್ಥೆ ಬೃಹದಾಕಾರವಾಗಿ  ಬೆಳೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಫ್ಯಾನ್ ಚಿತ್ರದ ಕುರಿತು ನಿಮ್ಮ ನಿರೀಕ್ಷೆಗಳೇನು?
ಶಾರುಖ್ ಅವರ ಇತರೆ ಚಿತ್ರಗಳಿಗಿಂತ ಫ್ಯಾನ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಶಾರುಖ್ ಅವರ ಎಲ್ಲ ಚಿತ್ರಗಳು ಒಂದು ಹಂತದ್ದಾದರೆ, ಫ್ಯಾನ್ ಚಿತ್ರ ಮತ್ತೊಂದು ಹಂತ. ಹೀಗಾಗಿ ಅವರ  ಫ್ಯಾನ್ ಚಿತ್ರಕ್ಕಾಗಿ ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ.

ಶಾರುಖ್ ಜನ್ಮದಿನದಂದು ಅವರಿಗೆ ಶುಭಾಶಯ ಕೋರಲು ಸಾಧ್ಯವಾಯಿತೆ?
ಪ್ರತೀ ವರ್ಷ ನವೆಂಬರ್ 2ರಂದು ನಾವು ಖಂಡಿತ ಶಾರುಖ್ ಖಾನ್ ಅವರಿಗೆ ಶುಭಾಶಯ ಕೋರಲು ಮುಂಬೈಗೆ ತೆರಳುತ್ತೇವೆ. ಇದಕ್ಕಾಗಿ ಒಂದು ತಿಂಗಳ ಮುಂಚಿತವಾಗಿಯೇ ನಾವು ಯೋಜನೆ ಹಾಕಿಕೊಂಡು ಯಾರೆಲ್ಲಾ ಹೋಗಬೇಕು ಎಂತಹ ಉಡುಗೊರೆ ನೀಡಬೇಕು ಎಂದು ಯೋಜನೆ ಹಾಕಿಕೊಳ್ಳುತ್ತೇವೆ. ಶಾರುಖ್ ಅವರ 50ನೇ ಜನ್ಮ ದಿನದಂದು ಅವರ 50 ಅಭಿಮಾನಿಗಳನ್ನು ನಾವು  ಮುಂಬೈಗೆ ಕರೆದೊಯ್ದು ಅವರನ್ನು ಭೇಟಿ ಮಾಡಿಸಿದ್ದೆವು. ಅಲ್ಲದೆ ಶಾರುಖ್ ಅವರಿಗೆ ಅವರ ಚಿತ್ರಗಳ ಮೂರು ಪಾತ್ರಗಳ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದೆವು.

ಫ್ಯಾನ್ ಚಿತ್ರ ಬಿಡುಗಡೆ ನಿಮ್ಮ ಯೋಜನೆ?
ನಾವು ಈಗಾಗಲೇ ಫ್ಯಾನ್ ಚಿತ್ರದ 100 ಟಿಕೆಟ್ ಗಳನ್ನು ಬುಕ್ ಮಾಡಿದ್ದೇವೆ. ಇನ್ನು ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ದೀಪಿಕಾ ಅವರ ಸಹೋದರಿ ಪಾತ್ರ ಮಾಡಿದ್ದ ನಟಿ ಪುವಿಶಾ ಅವರು  ನಮ್ಮೊಂದಿಗೆ ಚಿತ್ರ ವೀಕ್ಷಣೆಗೆ ಬರಲು ಒಪ್ಪಿದ್ದಾರೆ. ಇದಲ್ಲದೇ ನಮ್ಮ ಎಸ್ ಆರ್ ಕೆ ಫ್ಯಾನ್ ಕ್ಲಬ್ ವತಿಯಿಂದ ಫ್ಯಾನ್ ಚಿತ್ರದ ಟಿಕೆಟ್ ಬುಕಿಂಗ್ ಗೆ ಆಸ್ಟ್ರೇಲಿಯಾ, ಬಲ್ಗೇರಿಯಾ, ಅಲ್ಜೀರಿಯಾ,  ದುಬೈ ಮತ್ತು ಪಾಕಿಸ್ತಾನ ಸೇರಿದಂತೆ ವಿಶ್ವಾದ್ಯಂತ ಇರುವ ಬ್ರಾಂಚ್ ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಫ್ಯಾನ್ ಚಿತ್ರದ ಬಿಡುಗಡೆ ವೇಳೆ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಲು  ನಿರ್ಧರಿಸಿದ್ದೆವು. ಆದರೆ ಕೇರಳ ಘಟನೆ ಬಳಿಕ ಆ ನಿರ್ಧಾರವನ್ನು ಕೈಬಿಟ್ಟೆವು ಎಂದು ಕೊಠಾರಿ ಹೇಳಿದ್ದಾರೆ.

ಶಾರುಖ್ ಗೆ ಅಪಾರ ಅಭಿಮಾನಿ ಬಳಗವಿದೆ. ಅದರಲ್ಲಿ ವಿಶಿಷ್ಟ ಎನಿಸುವ ಮತ್ತು ನಿಮಗಿಂತ ದೊಡ್ಡ ಅಭಿಮಾನಿಯನ್ನು ನೋಡಿದ್ದೀರಾ?
ಶಾರುಖ್ ಖಾನ್ ಗೆ ನಾನೇ ದೊಡ್ಡ ಅಭಿಮಾನಿ ಎಂದು ಹೇಳಿಕೊಳ್ಳುವುದಿಲ್ಲ. ನನಗಿಂತ ದೊಡ್ಡ ಮಟ್ಟದಲ್ಲಿ ಅವರನ್ನು ಪ್ರೀತಿಸುವ ಮಂದಿ ಇದ್ದಾರೆ. ಆದರೆ ನಾನು ಅದೃಷ್ಟವಂತ ಎಂದಷ್ಟೇ  ಹೇಳಬಲ್ಲೆ. ಅವರು ನನ್ನ ಟ್ವಿಟರ್ ಖಾತೆ ಫಾಲೋ ಮಾಡಿದ ಬಳಿಕವಷ್ಟೇ ನಾನು ದೊಡ್ಡ ಅಭಿಮಾನಿ ಎಂದೆನಿಸಿಕೊಂಡಿದ್ದು ಕೊಠಾರಿ ಹೇಳಿದ್ದಾರೆ.

ಇದೇ ಶುಕ್ರವಾರ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಫ್ಯಾನ್ ಬಿಡುಗಡೆಯಾಗುತ್ತಿದ್ದು, ಚಿತ್ರದ ಮೇಲೆ ಭಾರಿ ನಿರೀಕ್ಷೆಗಳು ಗರಿಗೆದರಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.