ಸನ್ನಿ ಲಿಯೋನ್ ಗೆ ಬೆಂಗಳೂರೆಂದರೆ ಇಷ್ಟವಂತೆ!
ಬಾಲಿವುಡ್ ನ ಒನ್ ನೈಟ್ ಸ್ಟ್ಯಾಂಡ್ ಚಿತ್ರದ ಪ್ರಚಾರಾರ್ಥ ಬೆಂಗಳೂರಿಗೆ ಆಗಮಿಸಿರುವ ಮಾದಕ ನಟಿ ಸನ್ನಿ ಲಿಯೋನ್ ಗೆ ಬೆಂಗಳೂರು ಅಂದರೆ ಬಹು ಇಷ್ಟವಂತೆ...

ಬೆ೦ಗಳೂರು: ಬಾಲಿವುಡ್ ನ ಒನ್ ನೈಟ್ ಸ್ಟ್ಯಾಂಡ್ ಚಿತ್ರದ ಪ್ರಚಾರಾರ್ಥ ಬೆಂಗಳೂರಿಗೆ ಆಗಮಿಸಿರುವ ಮಾದಕ ನಟಿ ಸನ್ನಿ ಲಿಯೋನ್ ಗೆ ಬೆಂಗಳೂರು ಅಂದರೆ ಬಹು ಇಷ್ಟವಂತೆ. ಬೆಂಗಳೂರಿನ ವಾತಾವರಣ ನನಗೆ ಬಹು ಹಿಡಿಸಿದ್ದು, ಇಲ್ಲಿಗೆ ಬಂದರೆ ಮನಸ್ಸು ಹಗುರವಾಗುತ್ತದೆ ಎಂದು ಹೇಳಿದ್ದಾರೆ.
ಜಾಸ್ಮಿನ್ ಮೊಸೆಸ್ ಡಿಸೋಜಾ ನಿದೇ೯ಶನದ ಒನ್ ನೈಟ್ ಸ್ಟ್ಯಾ೦ಡ್ ಚಿತ್ರ ಏಪ್ರಿಲ್ 22ಕ್ಕೆ ತೆರೆ ಕಾಣಲಿದ್ದು ಚಿತ್ರದ ಪ್ರಚಾರಾಥ೯ ದೊಮ್ಮಲೂರಿನ ಖಾಸಗಿ ಹೋಟೆಲ್‍ಗೆ ಆಗಮಿಸಿದ್ದ ಸನ್ನಿ, ಉದ್ಯಾನನಗರಿಯನ್ನು ಮನಸಾರೆ ಕೊ೦ಡಾಡಿದರು. ಅಲ್ಲದೆ ಶನಿವಾರ ಈ ನಟಿಯ 5ನೇ ವಿವಾಹ ವಾಷಿ೯ಕೋತ್ಸವವೂ ಇದ್ದುದರಿ೦ದ ಡಬಲ್ ಖುಷಿಯಲ್ಲಿದ್ದರು.
ಇ೦ಡೋ-ಕೆನಡಿಯನ್ ಮೂಲದ ಸನ್ನಿ ಲಿಯೋನ್ ಬೆ೦ಗಳೂರಿನಲ್ಲೇ ನನ್ನ ಮದುವೆಯ 5ನೇ ವಾಷಿ೯ಕೋತ್ಸವ ಆಚರಿಸಿಕೊಳ್ಳುತ್ತಿರುವುದು ನನಗೆ ಮತ್ತಷ್ಟು ಸ೦ತಸ ತ೦ದಿದೆ ಎ೦ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


