'ಬಾದ್ಷಾಹೋ' ಇಂದ ಹೊರಬಂದ ಶೃತಿ ಹಾಸನ್
ಮುಂಚೆ ಕಥೆ ಕೇಳಿದ್ದಕ್ಕೂ ಆದರೆ ನಂತರ ತನ್ನ ಪಾತ್ರದಲ್ಲಿ ಆದ ಬೆಳವಣಿಗೆಗೂ ವ್ಯತ್ಯಾಸ ಇರುವುದರಿಂದ ಅದನ್ನು ಒಪ್ಪದೆ ನಟಿ ಶೃತಿ ಹಾಸನ್ ಅವರು ಮಿಲನ್ ಲೂಥ್ರಿಯಾ

ಮುಂಬೈ: ಮುಂಚೆ ಕಥೆ ಕೇಳಿದ್ದಕ್ಕೂ ಆದರೆ ನಂತರ ತನ್ನ ಪಾತ್ರದಲ್ಲಿ ಆದ ಬೆಳವಣಿಗೆಗೂ ವ್ಯತ್ಯಾಸ ಇರುವುದರಿಂದ ಅದನ್ನು ಒಪ್ಪದೆ ನಟಿ ಶೃತಿ ಹಾಸನ್ ಅವರು ಮಿಲನ್ ಲೂಥ್ರಿಯಾ ನಿರ್ದೇಶನದ 'ಬಾದ್ಷಾಹೋ' ಸಿನೆಮಾ ಇಂದ ಹೊರಬಂದಿದ್ದಾರೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಅವರು ಅಜಯ್ ದೇವಗನ್ ಎದುರು ನಟಿಸಬೇಕಿತ್ತು.
"ಶೃತಿ ಮತ್ತು ಮಿಲನ್ ಹಲವು ಬಾರಿ ಭೇಟಿ ಮಾಡಿದ್ದರು. ಆ ಸಭೆಗಳಲ್ಲಿ ಮೊದಲಿಗೆ ಸಿನೆಮಾ ಕಥೆಯ ಬಗ್ಗೆ, ಹಾಗೂ ಅವರ ಪಾತ್ರದ ಬಗ್ಗೆ ಶೃತಿಗೆ ಇಷ್ಟವಾಗಿತ್ತು. ಆದುದರಿಂದ ಮೌಖಿಕವಾಗಿ ಒಪ್ಪಿಕೊಂಡಿದ್ದರು" ಎಂದು ಶೃತಿ ಅವರಿಗೆ ಹತ್ತಿರವಿರುವ ಮೂಲಗಳು ತಿಳಿಸಿವೆ.
ಆದರೆ ನಂತರ ಪಾತ್ರದಲ್ಲಿ ಹಲವಾರು ಬದಲಾವಣೆಗಳಾಗಿದ್ದವು ಎಂದು ತಿಳಿದುಬಂದಿದೆ.
"ಇತ್ತೀಚಿಗೆ ಕಥೆ ಕೇಳಿರುವ ಪ್ರಕಾರ ಸ್ಕ್ರಿಪ್ಟ್ ನಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಅವರ ಪಾತ್ರ ಹಿಂದೆ ಕೇಳಿದ್ದಕ್ಕಿಂತಲೂ ವಿಭಿನ್ನವಾಗಿದೆ. ಅದು ಚಿತ್ರಕಥೆಗೆ ಅಷ್ಟೇನೂ ಪ್ರಮುಖವಾಗಿಲ್ಲ. ಆದುದರಿಂದ ಮಿಲನ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದರು ಕೂಡ ಆ ಯೋಜನೆಯಿಂದ ಅನಿವಾರ್ಯವಾಗಿ ಹೊರಬರಬೇಕಾಯಿತು" ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ಚಿತ್ರೀಕರಣದ ದಿನಾಂಕಗಳು ಕೂಡ ಮುಂದೂಡಲಾಗಿದ್ದು ಶೃತಿ ಅವರ ದಕ್ಷಿಣ ಭಾಷೆಗಳ ಸಿನೆಮಾಗಳ ಚಿತ್ರೀಕರಣ ದಿನಾಂಕಕ್ಕೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಕೂಡ ಮೂಲಗಳು ತಿಳಿಸಿವೆ.
ಸದ್ಯಕ್ಕೆ ತಮಿಳು ಚಿತ್ರ 'ಪುಲಿ' ಬಿಡುಗಡೆಗೆ ಶೃತಿ ಕಾಯುತ್ತಿದ್ದಾರೆ. ಅಜಿತ್ ಕುಮಾರ್ ಅವರೊಂದಿಗೆ ಒಂದು ಚಿತ್ರ ಹಾಗೂ 'ಸಿಂಗಂ೩' ಕೂಡ ಶೃತಿ ಅವರ ಪಟ್ಟಿಯಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


