ಬಾಲಿವುಡ್

ಮತ್ತೆ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿರುವ ಸಲ್ಲು-ಕತ್ರಿನಾ ಜೋಡಿ

ಬಾಲಿವುಡ್ ನ ಮಾಜಿ ಪ್ರೇಮಿಗಳಾದ ಕತ್ರಿನಾ ಕೈಫ್, ಸಲ್ಮಾನ್ ಖಾನ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸುದ್ದಿಗಳು ಬಾಲಿವುಡ್ ನಲ್ಲಿ ಹರದಾಡುತ್ತಿದ್ದು...

ಮತ್ತೆ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿರುವ ಸಲ್ಲು-ಕತ್ರಿನಾ ಜೋಡಿ
ಸಲ್ಮಾನ್ ಖಾನ್, ಕತ್ರಿನಾ ಕೈಫ್
Published On :

ಮುಂಬೈ: ಬಾಲಿವುಡ್ ನ ಮಾಜಿ ಪ್ರೇಮಿಗಳಾದ ಕತ್ರಿನಾ ಕೈಫ್, ಸಲ್ಮಾನ್ ಖಾನ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಸುದ್ದಿಗಳು ಬಾಲಿವುಡ್ ನಲ್ಲಿ ಹರದಾಡುತ್ತಿದ್ದು, ಇದು ಬಹುತೇಕ ಖಚಿತವೂ ಆಗಿದೆ.

ಏಕ್ತಾ ಟೈಗರ್ ಚಿತ್ರದ ಮೂಲಕ ಮೋಡಿ ಮಾಡಿದ್ದ ಕ್ಯಾಟ್- ಸಲ್ಲು ಜೋಡಿ ಸಲ್ಮಾನ್ ಭಾವ ಅತುಲ್ ಅಗ್ನಿಹೋತ್ರಿ ಅವರ ಮುಂದಿನ ಚಿತ್ರದಲ್ಲಿ ತೆರೆ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ನಾನು ಅತುಲ್ ಅವರ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ, ಎಂದಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾಗೆ ಸಹ ಮುಖ್ಯ ಪಾತ್ರವಿದೆಯಾ ಎಂದು ಕೇಳಲಾಗಿ, 'ಅವರು ಈ ಚಿತ್ರದಲ್ಲಿ ನಟಿಸಬೇಕೆಂಬುದು ನನ್ನ ಬಯಕೆ. ಆದರೆ ಅದು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ", ಎಂದು ಸಲ್ಲು ತಮ್ಮ ಮನದಿಂಗಿತವನ್ನು ಹೇಳಿಕೊಂಡಿದ್ದಾರೆ.

ಈ ಹಿಂದೆ ಏಕ್ತಾ ಟೈಗರ್ ಚಿತ್ರವನ್ನು ನಿರ್ದೇಶಿಸಿದ್ದ ಕಬೀರ್ ಖಾನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಸಲ್ಲು ಮತ್ತು ಕ್ಯಾಟ್ ಜೋಡಿ ಅಭಿಮಾನಿಗಳ ಬಹುದಿನಗಳ ನಿರೀಕ್ಷೆ ಈಡೇರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.