ಬಾಲಿವುಡ್

ಶಾರುಕ್ ಗಿಂತ ಬಹಳ ಚೆನ್ನಾಗಿ ಹಾಡಬಲ್ಲೆ: ಸಲ್ಮಾನ್

ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಾಮಾನ್ಯವಾಗಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್ ಜಿದ್ದಾಜಿದ್ದಿಗೆ ಬಿದ್ದಿರುತ್ತಾರೆ. ಆದರೆ ಗಾಯನಕ್ಕೆ ಬಂದರೆ

ಶಾರುಕ್ ಗಿಂತ ಬಹಳ ಚೆನ್ನಾಗಿ ಹಾಡಬಲ್ಲೆ: ಸಲ್ಮಾನ್
ಬಾಲಿವುಡ್ ನಟ ಸಲ್ಮಾನ್ ಖಾನ್
Published On :

ಮುಂಬೈ: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಸಾಮಾನ್ಯವಾಗಿ ಬಾಲಿವುಡ್ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಕ್ ಖಾನ್ ಜಿದ್ದಾಜಿದ್ದಿಗೆ ಬಿದ್ದಿರುತ್ತಾರೆ. ಆದರೆ ಗಾಯನಕ್ಕೆ ಬಂದರೆ ಶಾರುಕ್ ಸೋಲುವುದು ಶತಸಿದ್ಧ ಎನ್ನುತ್ತಾರೆ 'ಭಜರಂಗಿ ಭಾಯಿಜಾನ್' ನಟ ಸಲ್ಮಾನ್ ಖಾನ್.

ತಮ್ಮ ಮುಂಬರುತ್ತಿರುವ 'ಹೀರೋ' ಸಿನೆಮಾದ ಶೀರ್ಷಿಕೆ ಗೀತೆ ಹಾಡಲು ಸಲ್ಮಾನ್ ತಮ್ಮ ಕಂಠವನ್ನು ಹುರಿಗೊಳ್ಳಿಸಿದ್ದರಂತೆ. ಈ ಸಿನೆಮಾದಲ್ಲಿ ಸೂರಜ್ ಪಾಂಚೋಲಿ ಮತ್ತು ಆತಿತ್ಯ ಶೆಟ್ಟಿ ಎಂಬ ಹೊಸಮುಖಗಳು ಕೂಡ ಬೆಳಕಿಗೆ ಬರಲಿವೆ.

ಕಾರ್ಯಕ್ರಮವೊಂದರಲ್ಲಿ ಹಸನ್ಮುಖರಾಗಿದ್ದ ಸಲ್ಮಾನ್ ಖಾನ್ 'ಹೀರೋ' ಸಿನೆಮಾದ ನಿರ್ದೇಶಕ ನಿಖಿಲ್ ಅದ್ವಾನಿ ಮತ್ತು ಗಾಯಕರಾದ ಪಂಕಜ್ ಮುಚ್ಚಲ್ ಮತ್ತು ರಾಹತ್ ಫತೇ ಅಲಿ ಖಾನ್ ಅವರುಗಳೊಂದಿಗೆ ಹಾಸ್ಯಮಯವಾಗಿ ಮಾತನಾಡುತ್ತಿದ್ದುದು ಕಂಡುಬಂದಿದೆ.

ಗಾಯನದ ವಿಷಯ ಬಂದರೆ ಎಲ್ಲ ಖಾನ್ ಗಳು ನನಗೆ ಗೆಲ್ಲಲು ಸಹಾಯ ಮಾಡುತ್ತಾರೆ ಎಂದಿದ್ದಾರೆ.

ರಾಹತ್ ಫತೇ ಅಲಿ ಖಾನ್ ಅವರನ್ನು ಇದೇ ವಿಷಯವಾಗಿ ಹಾಡುಗಾರಿಕೆಯಲ್ಲಿ ನಿಮ್ಮ ಆಯ್ಕೆ ಯಾವುದು ಎಂದಾಗ "ನಾನು ಕೇವಲ ಸಲ್ಮಾನ್ ಹಾಡುವುದು ಕೇಳಿದ್ದೇನೆ ಆದರೆ ಶಾರುಕ್ ಹಾಡುವುದನ್ನು ಕೇಳಿಲ್ಲ" ಎಂದಿದ್ದಾರೆ.

ಆಗ ಕೂಡಲೆ ಪ್ರತಿಕ್ರಿಯಿಸಿರುವ ಸಲ್ಮಾನ್ "ಸಾಧ್ಯವೇ ಇಲ್ಲ. ನನ್ನ ಮುಂದೆ ಅವರು ಸೋಲುವುದು ಖಂಡಿತಾ. ನಾನು ಅವರು ಹಾಡುವುದು ಕೇಳಿದ್ದೇನೆ. ಶಾರುಕ್ ಮತ್ತು ಅಮೀರ್ ಇಬ್ಬರೂ ನನಗೆ ಗೆಲ್ಲಲು ಬಿಡುತ್ತಾರೆ. ಅದರಲ್ಲಿ ಅನುಮಾನವೇ ಇಲ್ಲ" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.