ವಿರಾಟ್ ಕೊಹ್ಲಿ ಜೊತೆ ಮದುವೆ ವದಂತಿ ತಳ್ಳಿಹಾಕಿದ ಅನುಷ್ಕಾ
ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಲಿದ್ದಾರೆ ಎಂಬ ವದಂತಿಯನ್ನು ನಟಿ ಪರವಾಗಿ ನೀಡಿರುವ ಹೇಳಿಕೆಯಲ್ಲಿ ತಳ್ಳಿಹಾಕಲಾಗಿದೆ.

ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಲಿದ್ದಾರೆ ಎಂಬ ವದಂತಿಯನ್ನು ನಟಿ ಪರವಾಗಿ ನೀಡಿರುವ ಹೇಳಿಕೆಯಲ್ಲಿ ತಳ್ಳಿಹಾಕಲಾಗಿದೆ.
"ಅನುಷ್ಕಾ ಶರ್ಮಾ ಮದುವೆಯಾಗುತ್ತಿರುವ ಕಥೆಗಳು/ವದಂತಿಗಳಲ್ಲಿ ಸ್ವಲ್ಪವೂ ಹುರುಳಿಲ್ಲ. ಸದ್ಯಕ್ಕೆ ಅವರು ಅವರ ಕೆಲಸದಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಜೀವನದಲ್ಲಿ ಯಾವತ್ತೂ ಮುಕ್ತವಾಗಿದ್ದಾರೆ ಆದುದರಿಂದ ಅವರೇ ಹೇಳಿಕೆ ನೀಡುವವರೆಗೆ ಯಾವುದೇ ಊಹೆ ಮಾಡದೆ ಕಾಯಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ" ಎಂದು ಹೇಳಿಕೆ ತಿಳಿಸಿದೆ.
ಅನುಷ್ಕಾ ಅವರ ತಂದೆ ಮತ್ತು ವಿರಾಟ್ ಜೊತೆ ಮನೆ ಹುಡುಕುತ್ತಿರುವುದು ಕಂಡು ಬಂದ ನಂತರ ಮಿಡ್ ಡೇ ಪತ್ರಿಕೆಯ ಒಂದು ಮೂಲದಂತೆ "ಅನುಷ್ಕಾ ಮತ್ತು ವಿರಾಟ್ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿದ್ದರೆ ಮತ್ತು ಅವರ ಕುಟುಂಬಗಳು ಭೇಟಿಯಾಗಿ ಅವರ ಮದುವೆ ಬಗ್ಗೆ ಚರ್ಚಿಸಲಿವೆ. ಮತ್ತು ಮುಂದಿನ ವರ್ಷ ಮದುವೆಯಾಗುವ ಎಲ್ಲಾ ಸೂಚನೆಗಳಿವೆ" ಎಂದು ತಿಳಿದುಬಂದಿತ್ತು.
ನಟಿ ಅನುಷ್ಕಾ ಖಾಸಗಿ ವಿಚಾರಗಳಿಗೆ ಗೌರವ ನೀಡುವಂತೆ ಎಲ್ಲರಲ್ಲೂ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


