ಅಮಿತಾಬ್ ಬಚ್ಚನ್ @73
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ 73ನೇ ಹುಟ್ಟುಹಬ್ಬ ಇವತ್ತು. ಬಾಲಿವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅಮಿತಾಬ್ ಬಚ್ಚನ್ , ಬಿಗ್ ಬಿ...

Published On :
ನವದೆಹಲಿ: ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ 73ನೇ ಹುಟ್ಟುಹಬ್ಬ ಇವತ್ತು.
ಬಾಲಿವುಡ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಅಮಿತಾಬ್ ಬಚ್ಚನ್ ,ಬಿಗ್ ಬಿ ಎಂದೇ ಖ್ಯಾತರಾಗಿದ್ದಾರೆ. ಅವರ ಸಿನಿಮಾದ ಡೈಲಾಗ್ ಗಳು ಎಂಥವರನ್ನೂ ಸೆಳೆಯುತ್ತದೆ. ಬಾಲಿವುಡ್ ನ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಕರೆಯಲ್ಪಡುತ್ತಿದ್ದ ಅಮಿತಾಬ್ ಈಗಲೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಉತ್ತಮ ನಟನೆಗಾಗಿ ಮೂರು ರಾಷ್ಟ್ರಪ್ರಶಸ್ತಿ, 14 ಫಿಲ್ಮ್ ಫೇರ್ ಅವಾರ್ಡ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನೂ ಗಳಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಅವರ ಕೊಡುಗೆಗಾಗಿ ಭಾರತ ಸರ್ಕಾರ ಅವರಿಗೆ 1984ರಲ್ಲಿ ಪದ್ಮ ಶ್ರೀ, 2001ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ದೀವಾರ್, ಶೋಲೆ, ಝಂಜೀರ್, ಮರ್ದ್, ಕೂಲಿ, ಮುಖದ್ದರ್ ಕಾ ಸಿಖಂದರ್, ಅಗ್ನಿಪಥ್, ಸರ್ಕಾರ್, ಕಾಲಾ ಪತ್ತರ್, ಲಾವಾರಿಸ್ ಮೊದಲಾದ ಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ ಬಿಗ್ ಬಿ, ಅವರ ಡೈಲಾಗ್‌ಗಳು ಆಲ್ ಟೈಮ್ ಫೇವರಿಟ್ ಆಗಿವೆ.
ಕೆಲವೊಂದು ಚಿತ್ರಗಳಲ್ಲಿ ಅವರೇ ಹಾಡು ಹಾಡಿದ್ದೂ ಅಲ್ಲದೆ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.
ಹ್ಯಾಪಿ ಬರ್ತ್‌ಡೇ ಬಿಗ್ ಬಿ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


