ಬಾಲಿವುಡ್

ಅಮೇರಿಕನ್ ಬಾಯ್ ಫ್ರೆಂಡ್ ಜೊತೆ ಹಸಮಣೆ ಏರಲಿದ್ದಾಳೆ ಪ್ರೀತಿ!

ಬಾಲಿವುಡ್ ಬ್ಯೂಟಿ ಹಾಗೂ ಕಿಂಗ್ ಇಲೆವನ್ ತಂಡದ ಮಾಲಕಿ ಪ್ರೀತಿ ಝಿಂಟಾ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರಂತೆ...

ಅಮೇರಿಕನ್ ಬಾಯ್ ಫ್ರೆಂಡ್ ಜೊತೆ ಹಸಮಣೆ ಏರಲಿದ್ದಾಳೆ ಪ್ರೀತಿ!
ಪ್ರೀತಿ ಝಿಂಟಾ
Published On :

ಮುಂಬಯಿ: ಬಾಲಿವುಡ್ ಬ್ಯೂಟಿ ಹಾಗೂ ಕಿಂಗ್ ಇಲೆವನ್ ತಂಡದ ಮಾಲಕಿ ಪ್ರೀತಿ ಝಿಂಟಾ ಶೀಘ್ರವೇ ಸಪ್ತಪದಿ ತುಳಿಯಲಿದ್ದಾರಂತೆ.

ಅಮೇರಿಕಾದಲ್ಲಿರುವ ಪ್ರೀತಿ ಝಿಂಟಾ ಬಾಯ್ ಫ್ರೆಂಡ್ ಜೊತೆ 2016 ರ ಜನವರಿಯಲ್ಲಿ ಅಮೇರಿಕಾದಲ್ಲೇ ವಿವಾಹ ನಡೆಯಲಿದೆ ಎಂದು ಬಾಲಿವುಡ್.ಕಾಮ್. ವರದಿ ಮಾಡಿದೆ.

ಮೂಲಗಳ ಪ್ರಕಾರ ತನ್ನ ಅಮೆರಿಕನ್ ಬಾಯ್ ಫ್ರೆಂಡ್ ಜೀನ್ ಗುಡ್ ಎನಫ್ ಜೊತೆ ವಿವಾಹವಾಗಲಿದ್ದು, ಈ ಕಾರ್ಯಕ್ರಮದಲ್ಲಿ ಪ್ರೀತಿ ಝಿಂಟಾ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.

30 ವರ್ಷದ ಜೀನ್ ಗುಡ್ ಎನಫ್ ಲಾಸ್ ಎಂಜಲೀಸ್ ನಲ್ಲಿ ಹಣಕಾಸು ವಿಶ್ಲೇಷಕನಾಗಿದ್ದು, ನೆಸ್ ವಾಡಿಯಾ ಜೊತೆಗಿನ ಸಂಬಂಧ ಮುರಿದು ಬಿದ್ದ ನಂತರ ಈತನ ಜೊತೆಗೆ ಪ್ರೀತಿ ಗುಟ್ಟಾಗಿ ಅಫೈರ್ ಇಟ್ಟುಕೊಂಡಿದ್ದಳು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.