ಒಟ್ಟಿಗೆ ಒಂದು ಸಿನೆಮಾ ಮಾಡಬೇಕು; ಸಲ್ಮಾನ್ ಗೆ ಟ್ವೀಟ್ ಮಾಡಿದ ಸ್ಟೆಲ್ಲೋನ್
ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟೆಲ್ಲೋನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಮಾನಾಂತರ ಅಭಿಮಾನಿ ಬಳಗವಿದೆ. ಈಗ ಈ ದಭಾಂಗ್ ನಟ ಸಲ್ಮಾನ್

ಮುಂಬೈ: ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟೆಲ್ಲೋನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಮಾನಾಂತರ ಅಭಿಮಾನಿ ಬಳಗವಿದೆ. ಈಗ ಈ ದಭಾಂಗ್ ನಟ ಸಲ್ಮಾನ್ ಜೊತೆ ಆಕ್ಷನ್ ಸಿನೆಮಾ ಮಾಡುವ ಆಸಕ್ತಿ ತೋರಿದ್ದರೆ ರ್ಯಂಬೋ ಖ್ಯಾತಿಯ ಸ್ಟೆಲ್ಲೋನ್
ಶುಕ್ರವಾರ ಭಜರಂಗಿ ಭೈಜಾನ್ ನಟ ಟ್ವಿಟ್ಟರ್ ನಲ್ಲಿ ತನ್ನ ೧೨ ದಶಲಕ್ಷ ಅನುಯಾಯಿಗಳಿಗೆ 'ಹೀರೋ ಕ ಹೀರೋ' ಸ್ಟೆಲ್ಲೋನ್ ಅವರನ್ನು ಅನುಸರಿಸುವಂತೆ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರ್ಯಾಂಬೊ ನಟ "ಅದ್ಭುಕ ಕೌಶಲ್ಯವಿರುವ ಭಾರತೀಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳು. ನಾವಿಬ್ಬರೂ ಒಟ್ಟಿಗೆ ಒಂದು ಸಿನೆಮಾ ಮಾಡಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಸ್ಟೆಲ್ಲೋನ್ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದರು. ೨೦೦೯ರ ಸಬ್ಬೀರ್ ಖಾನ್ ಅವರ 'ಕಂಭತ್ ಇಶ್ಕ್' ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


