ಬಾಲಿವುಡ್

ಮಲ್ಲಿಕಾ ಶರಾವತ್ 'ಡರ್ಟಿ ಪಾಲಿಟಿಕ್ಸ್' ಚಿತ್ರಕ್ಕೆ ನಿಷೇಧ ಹೇರಿದ ಪಾಟ್ನ ಹೈಕೋರ್ಟ್

ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶರಾವತ್ ಅವರ ಬಹುನಿರೀಕ್ಷಿತ ಚಿತ್ರ ಡರ್ಟಿ ಪಾಲಿಟಿಕ್ಸ್ ಸಿನಿಮಾ ಬಿಡುಗಡೆಗೆ ಪಾಟ್ನ ಹೈ ಕೋರ್ಟ್ ನಿಷೇಧ ಹೇರಿದೆ...

ಮಲ್ಲಿಕಾ ಶರಾವತ್ 'ಡರ್ಟಿ ಪಾಲಿಟಿಕ್ಸ್' ಚಿತ್ರಕ್ಕೆ ನಿಷೇಧ ಹೇರಿದ ಪಾಟ್ನ ಹೈಕೋರ್ಟ್
ಡರ್ಟಿ ಪಾಲಿಟಿಕ್ಸ್ ನಲ್ಲಿ ಮಲ್ಲಿಕಾ ಶರಾವತ್
Published On :

ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶರಾವತ್ ಅವರ ಬಹುನಿರೀಕ್ಷಿತ ಚಿತ್ರ ಡರ್ಟಿ ಪಾಲಿಟಿಕ್ಸ್ ಸಿನಿಮಾ ಬಿಡುಗಡೆಗೆ ಪಾಟ್ನ ಹೈ ಕೋರ್ಟ್ ನಿಷೇಧ ಹೇರಿದೆ.

ಡರ್ಟಿ ಪಾಲಿಟಿಕ್ಸ್ ಚಿತ್ರದ ದೃಶ್ಯವೊಂದರಲ್ಲಿ ಮಲ್ಲಿಕಾ ಶರಾವತ್ ಭಾರತದ ತ್ರಿವರ್ಣ ಧ್ವಜವನ್ನು ವಸ್ತ್ರವಂತೆ ತೊಟ್ಟಿದ್ದಾರೆ. ಇದೊಂದು ಆಕ್ಷೇಪಾರ್ಹವಾಗಿದ್ದು, ಚಿತ್ರದ ಮೂಲಕ ರಾಷ್ಟ್ರೀಯ ಧ್ವಜಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಅರ್ಜಿಯೊಂದು ದಾಖಲಾಗಿತ್ತು.

ಈ ಕುರಿತಂತೆ ಮಂಗಳವಾರ ವಿಚಾರಣೆ ಕೈಗೊಂಡ ಪಾಟ್ನ ಹೈಕೋರ್ಟ್ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವವರೆಗೂ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಸೂಚನೆ ನೀಡಿದೆ. ಕೆ.ಸಿ ಬೊಕಾಡಿಯಾ ನಿರ್ದೇಶನದ 'ಡರ್ಟಿ ಪಾಲಿಟಿಕ್ಸ್' ಚಿತ್ರ ಮಾರ್ಚ್ 6 ರಂದು ಬಿಡುಗಡೆಯಾಗಬೇಕಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.