'ಪಿಕೆ' ತಂಡದಿಂದ ಯಶಸ್ಸಿನ ಸಂಭ್ರಮಾಚರಣೆ
ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ.

ಮುಂಬೈ: ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿರುವ 'ಪಿಕೆ' ಸಿನೆಮಾ ಬುಧವಾರ ಚಿತ್ರತಂಡ ಸಂಭ್ರಮಾಚರಣೆಗಳಲ್ಲಿ ಮುಳುಗಲಿದೆ.
ಅಮೀರ್ ಖಾನ್ ನಟನೆಯ ಈ ಚಿತ್ರ ಜಾಗತಿಕವಾಗಿ ೬೨೦ ಕೋಟಿ ರೂ ಗಳಿಕೆ ಕಂಡಿದೆ. ಬಾಲಿವುಡ್ ಇತಿಹಾಸದಲ್ಲೇ ಇದು ಅತಿ ಹೆಚ್ಚಿನ ಗಳಿಕೆ ಎನ್ನಲಾಗಿದೆ.
ಭಾರತದಲ್ಲೇ ಈ ಸಿನೆಮಾ ೩೨೦ ಕೋಟಿ ಗಳಿಸಿದ್ದರೆ ವಿದೇಶಗಳಲ್ಲಿನ ಗಳಿಕೆ ೨೮೦ ಕೋಟಿ. ಈ ಗಳಿಕೆ ಇನ್ನೂ ಮುಂದುವರೆಯಲಿದೆ ಎನ್ನಲಾಗಿದೆ.
ರಾಜಕುಮಾರ್ ಹಿರಾನಿ ನಿರ್ದೇಶನದ ಹಾಗು ವಿದು ವಿನೋದ್ ಚೋಪ್ರಾ ನಿರ್ಮಿಸಿರುವ ಈ ಚಲನಚಿತ್ರ ಚೈನಾದಲ್ಲಿ ಕಳೆದ ತಿಂಗಳು ಬಿಡುಗಡೆ ಕಂಡು ಚೈನಾದಲ್ಲೇ ೧೦೦ ಕೋಟಿ ಗಳಿಕೆಯನ್ನು ಮೀರಿದೆ.
ಈ ಗಗನ ಗಳಿಕೆಯಯನ್ನು ಆಚರಿಸಲು ಇಡೀ ಚಿತ್ರತಂಡ ಇಂದು ಒಟ್ಟಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


