ಶೀಘ್ರವೇ ಸಂಜಯ್ ಗಾಂಧಿ ಜೀವನ ಚರಿತ್ರೆ ಆಧಾರಿತ ಚಿತ್ರ ನಿರ್ಮಾಣ: ಹನ್ಸಲ್ ಮೆಹ್ತಾ
ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ ಗಾಂಧಿ ಅವರ ಜೀವನ ಚರಿತ್ರೆ ಆಧಾರಿತ ...

ಮುಂಬಯಿ: ರಾಜಕಾರಣಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುತ್ರ ಸಂಜಯ ಗಾಂಧಿ ಅವರ ಜೀವನ ಚರಿತ್ರೆ ಆಧಾರಿತ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಹನ್ಸಲ್ ಮೆಹ್ತಾ ಹೇಳಿದ್ದಾರೆ.
ಲೇಖಕ ವಿನೋದ್ ಮೆಹ್ತಾ , ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬರೆದಿರುವ 'ದಿ ಸಂಜಯ್ ಸ್ಟೋರಿ ' ಪುಸ್ತಕ ಆಧರಿಸಿ ಚಿತ್ರ ನಿರ್ಮಾಣವಾಗಲಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ದುರಂತ ಸಾವಿಗೀಡಾದ ಸಂಜಯ್ ಗಾಂಧಿ ಜೀವನದ ಸಂಪೂರ್ಣ ವಿವರ ಈ ಪುಸ್ತಕದಲ್ಲಿದೆ.
ಸಂಜಯ ಗಾಂಧಿ ಜೀವನದ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿ ಬರೆದಿರುವ ಈ ಪುಸ್ತಕ ಅದ್ಭುತವಾಗಿದೆ. ಸಂಜಯ್ ಗಾಂಧಿ ಸಾವಿನ ರಹಸ್ಯ ಇನ್ನೂ ನಿಗೂಢವಾಗಿಯೇ ಉಳಿದಿದ್ದು, ತನ್ನ ತಾಯಿ ಹಾಗೂ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಜೊತೆಯೇ ಸಂಜಯ ಗಾಂಧಿ ಸಂಬಂಧ ಹೊಂದಿದ್ದರು ಎಂಬ ವಿಷಯವನ್ನು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಈ ಎರಡು ಪಾತ್ರಗಳು ಚಿತ್ರದಲ್ಲಿ ಸವಾಲಿನ ಪಾತ್ರಗಳಾಗಿವೆ ಎಂದು ಹಸ್ನ ಲ್ ಮೆಹ್ತಾ ಹೇಳಿದ್ದಾರೆ.
ಇನ್ನು ಹೆಸರಿಡದ ಈ ಚಿತ್ರದ ಚಿತ್ರೀಕರಣ ಮುಂದಿನ ವರ್ಷ ಆರಂಭವಾಗಲಿದೆ. ಸದ್ಯ ಕಂಗನಾ ರಾಣವತ್ ಅಭಿನಯದ ಸಿಮ್ರಾನ್ ಚಿತ್ರದಲ್ಲಿ ಹನ್ಸಲ್ ಬ್ಯುಸಿಯಾಗಿದ್ದಾರೆ, ತಮ್ಮ ಮತ್ತೊಂದು ಮಹತ್ವಕಾಂಕ್ಷೆಯ ಅಲಿಗರ್ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


