ಫಿಲ್ಮ್ ಫೇರ್ ಪ್ರಶಸ್ತಿ: ಕಂಗನಾ ಉತ್ತಮ ನಟಿ, ಶಾಹಿದ್ ಉತ್ತಮ ನಟ
60ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ನಡೆದಿದ್ದು, ಕ್ವೀನ್ ಚಿತ್ರದ ಕಂಗನಾ ರಣಾವತ್ ಶ್ರೇಷ್ಠ ನಟಿ ಪ್ರಶಸ್ತಿ...

ನವದೆಹಲಿ: 60ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ನಡೆದಿದ್ದು, ಕ್ವೀನ್ ಚಿತ್ರದ ಕಂಗನಾ ರಣಾವತ್ ಶ್ರೇಷ್ಠ ನಟಿ ಪ್ರಶಸ್ತಿ ಹಾಗೂ ಹೈದರ್ ಚಿತ್ರದ ಶಾಹೀದ್ ಕಪೂರ್ ಶ್ರೇಷ್ಠ ನಟ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ಬಾಲಿವುಡ್‌ನ ಖ್ಯಾತ ನಟ ನಟಿಯರೆಲ್ಲರೂ ಭಾಗವಹಿಸಿ, ತಾರೆಯರ ನೃತ್ಯ ಹಾಡುಗಳಿಂದ ಕೂಡಿದ ಅದ್ದೂರಿ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಿಕಾಸ್ ಬೇಲ್ ಅವರ ಕ್ವೀನ್ ಚಿತ್ರ ಆರು ವಿಭಾಗದಲ್ಲಿ 6 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದೇ ಚಿತ್ರಕ್ಕಾಗಿ ವಿಕಾಸ್ ಬೇಲ್ ಉತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.
ಅದೇ ವೇಳೆ ಪಾಕಿಸ್ತಾನದ ನಟ ಫವಾದ್ ಖಾನ್ ಹೊಸಮುಖ ಪ್ರತಿಭೆ ಪ್ರಶಸ್ತಿ (ನಟ) ಗೆದ್ದುಕೊಂಡಿದ್ದು, ಹೊಸಮುಖ ಪ್ರತಿಭೆ (ನಟಿ) ಪ್ರಶಸ್ತಿಯನ್ನು ಕೃತಿ ಸಾನೊನ್ ಗೆದ್ದುಕೊಂಡಿದ್ದಾರೆ.
ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ
ಅತ್ಯುತ್ತಮ ನಟಿ- ಕಂಗನಾ ರಣಾವತ್ (ಕ್ವೀನ್)
ಅತ್ಯುತ್ತಮ ನಟ- ಶಾಹೀದ್ ಕಪೂರ್ (ಹೈದರ್)
ಅತ್ಯುತ್ತಮ ಚಿತ್ರ (ವಿಮರ್ಶಕರ ತೀರ್ಪು)- ರಜತ್ ಕಪೂರ್ (ಆಖೋಂ ದೇಖಿ)
ಅತ್ಯುತ್ತಮ ಚಿತ್ರ - ಕ್ವೀನ್
ಅತ್ಯುತ್ತಮ ನಿರ್ದೇಶಕ - ವಿಕಾಸ್ ಬೇಲ್ (ಕ್ವೀನ್)
ಅತ್ಯುತ್ತಮ ಪೋಷಕನಟ - ಕೆ ಕೆ ಮೆನನ್ (ಹೈದರ್)
ಅತ್ಯುತ್ತಮ ಪೋಷಕನಟಿ- ಟಬು (ಹೈದರ್)
ಅತ್ಯುತ್ತಮ ಸಂಗೀತ ನಿರ್ದೇಶಕ - ಶಂಕರ್ ಎಸಾನ್ ಲಾಯೋ (2 ಸ್ಟೇಟ್ಸ್)
ಅತ್ಯುತ್ತಮ ಚಿತ್ರ ಸಾಹಿತಿ ರಶ್ಮಿ ಸಿಂಗ್ - ಮುಸ್ಮುಕುರಾನೇಕಿ ವಜಾ (ಸಿಟಿ ಲೈಟ್ಸ್)
ಹೊಸ ಮುಖ ಪ್ರತಿಭೆ (ನಟ) -ಫವಾದ್ ಖಾನ್ (ಖೂಬ್‌ಸೂರತ್)
ಹೊಸ ಮುಖ ಪ್ರತಿಭೆ (ನಟಿ) - ಕೀರ್ತಿ ಸನೋನ್ ಹೀರೋಪಂತಿ
ಅತ್ಯುತ್ತಮ ಕತೆ - ರಜತ್ ಕಪೂರ್ (ಅನೋಖ್ ದೇಖಿ)
ಅತ್ಯುತ್ತಮ ಸಂಭಾಷಣೆ - ಅಭಿಜಿತ್ ಜೋಷಿ ಮತ್ತು ರಾಜ್ ಕುಮಾರ್ ಹಿರಾನಿ (ಪಿಕೆ)
ಅತ್ಯುತ್ತಮ ಚಿತ್ರಕತೆ - ರಾಜ್‌ಕುಮಾರ್ ಹಿರಾನಿ ಮತ್ತು ಅಭಿಜಿತ್ ದೋಷಿ (ಪಿಕೆ)
ಅತ್ಯುತ್ತಮ ಗಾಯಕ - ಅಂಕಿತ್ ತಿವಾರಿ ಗಲಿಯಾಂ (ಏಕ್ ವಿಲನ್)
ಅತ್ಯುತ್ತಮ ಗಾಯಕಿ - ಕನ್ನಿಕಾ ಕಪೂರ್ ಬೇಬಿ ಡೋಲ್ (ರಾಗಿಣಿ ಎಂಎಂಎಸ್)
ಜೀವಮಾನ ಸಾಧನೆ - ಕಾಮಿನಿ ಕೌಶಲ್
ಅತ್ಯುತ್ತಮ ನಿರ್ದೇಶಕ (ಪ್ರಪ್ರಥಮ) - ಅಭಿಷೇಕ್ ವರ್ಮಾ, (2 ಸ್ಟೇಟ್ಸ್)
ಅತ್ಯುತ್ತಮ ನಟ (ವಿಮರ್ಶಕರ ತೀರ್ಪು)- ಸಂಜಯ್ ಮಿಶ್ರಾ, (ಅಂಖೋನ್ ದೇಖಿ)
ಅತ್ಯುತ್ತಮ ನಟಿ (ವಿಮರ್ಶಕರ ತೀರ್ಪು) - ಆಲಿಯಾ ಭಟ್ , (ಹೈವೇ)
ಅತ್ಯುತ್ತಮ ಸಂಕಲನ - ಅಭಿಜಿತ್ ಕೊಕಟೆ ಮತ್ತು ಅನುರಾಗ್ ಕಶ್ಯಪ್ , (ಕ್ವೀನ್ )
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ - ಸುಬ್ರತಾ ಚಕ್ರಬೊರ್ತಿ ಮತ್ತು ಅಮಿತ್ ರೇ (ಹೈದರ್)
ಅತ್ಯುತ್ತಮ ನೃತ್ಯ ನಿರ್ದೇಶಕ - ಅಹ್ಮದ್ ಖಾನ್ , ಜುಮ್ಮೇಕಿ ರಾತ್ (ಕಿಕ್)
ಅತ್ಯುತ್ತಮ ಹಿನ್ನೆಲೆ ಸಂಗೀತ - ಅಮಿತ್ ತ್ರಿವೇದಿ, (ಕ್ವೀನ್)
ಅತ್ಯುತ್ತಮ ಛಾಯಾಗ್ರಹಣ ಬಾಬ್ಬಿ ಸಿಂಗ್ ಮತ್ತು ಸಿದ್ದಾರ್ಥ ದಿವಾನ್ (ಕ್ವೀನ್)
ಅತ್ಯುತ್ತಮ ಸಾಹಸ ಶಾಮ್ ಕೌಶಾಲ್ (ಗುಂಡೇ)
ಅತ್ಯುತ್ತಮ ಪ್ರಸಾದನ - ಡೋಲಿ ಅಹ್ಲುವಾಲಿಯಾ (ಹೈದರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


