ನಟಿ ಕರೀನಾಗೆ ಬೆದರಿಕೆ: ಭದ್ರತೆ ಹೆಚ್ಚಳ
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್‌ಗೆ ಕೆಲ ಧಾರ್ಮಿಕ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದ ಹಿನ್ನಲೆ..

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್‌ಗೆ ಕೆಲ ಧಾರ್ಮಿಕ ಸಂಘಟನೆಗಳಿಂದ ಬೆದರಿಕೆ ಕರೆಗಳು ಬಂದ ಹಿನ್ನಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಎಚ್‌ಪಿ ಸಂಘಟನೆ ಮ್ಯಾಗಜಿನ್‌ನಲ್ಲಿ ಕರೀನಾ ಅವರ ಭಾವಚಿತ್ರ ಪ್ರಕಟಗೊಂಡ ಬಳಿಕ ಈ ಬೆದರಿಕೆ ಕರೆಗಳು ಬರಲಾರಂಭಿಸಿದ್ದು, ಇದನ್ನು ಸ್ವತಃ ಪತಿ ಸೈಫ್ ಅಲಿಖಾನ್ ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ. ಹೀಗಾಗಿ ಪ್ರಸ್ತುತ ಕರೀನಾ ಕಪೂರ್‌ಗೆ ಇರುವ ಭದ್ರತೆಯೊಂದಿಗೇ ಇಬ್ಬರು ಬಾಡಿಗಾರ್ಡ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗಿದೆ.
ಈ ಹಿಂದೆ ವಿಎಚ್‌ಪಿ ಸಂಘಟನೆಯ ಮ್ಯಾಗಜಿನ್ ಹಿಮಾಲಯಧ್ವನಿಯಲ್ಲಿ ಕರೀನಾ ಕಪೂರ್ ಅವರ ಭಾವಚಿತ್ರ ಪ್ರಕಟವಾಗಿತ್ತು. ಕರೀನಾ ಅವರ ಅರ್ಧ ಮುಖ ಮತ್ತು ಬುರ್ಖಾಧರಿಸಿರುವ ಮಹಿಳೆಯ ಅರ್ಧ ಮುಖವನ್ನು ಒಟ್ಟುಗೂಡಿಸಿ ಭಾವಚಿತ್ರವನ್ನು ತಯಾರಿಸಲಾಗಿತ್ತು. ಭಾರತದಲ್ಲಿ ಲವ್‌ಜಿಹಾದ್ ಪ್ರಕರಣಗಳನ್ನು ವಿರೋಧಿಸಿ ಬರೆದಿದ್ದ ಲೇಖನಕ್ಕಾಗಿ ಈ ಭಾವಚಿತ್ರವನ್ನು ಉಪಯೋಗಿಸಿಕೊಳ್ಳಲಾಗಿತ್ತು ಎಂದು ಹೇಳಲಾಗುತ್ತಿದೆ.
ವಿಎಚ್‌ಪಿ ಸಂಘಟನೆಯ ಈ ಕ್ರಮದ ವಿರುದ್ಧ ಅಸಮಾಧಾನಗೊಂಡಿದ್ದ ಕರೀನಾ ಪತಿ ಸೈಫ್ ಅಲಿಖಾನ್, ಕಾನೂನು ಕ್ರಮಕ್ಕೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಕೆಲ ಧಾರ್ಮಿಕ ಸಂಘಟನೆಗಳು ಕರೀನಾ ಅವರಿಕೆ ಕರೆ ಮಾಡಿ ಬೆದರಿಕೆ ಹಾಕುತ್ತಿರುವುದರಿಂದ ಕರೀನಾ ಅವರ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


