ಅಸಿನ್ ತಂದ ಅನಾಸಿನ್
ಆಲ್ ಈಸ್ ವೆಲ್ ಚಿತ್ರದ ಶೀರ್ಷಿಕೆ ಪಾಸಿಟಿವ್ವಾಗಿ ಇದ್ರೂ ಅದ್ಯಾಕೋ ಎಲ್ಲವೂ...

ಆಲ್ ಈಸ್ ವೆಲ್ ಚಿತ್ರದ ಶೀರ್ಷಿಕೆ ಪಾಸಿಟಿವ್ವಾಗಿ ಇದ್ರೂ ಅದ್ಯಾಕೋ ಎಲ್ಲವೂ ಸುಸೂತ್ರವಾಗಿ ನಡೀತಿಲ್ಲ. ಇನ್ನೇನು ಎಲ್ಲ ಪರಿಹಾರವಾಯ್ತು ಅನ್ನೋ ಹೊತ್ತಿಗೆ ಹೊಸದೊಂದು ತಲೆನೋವು ಕಾಣಿಸಿಕೊಂಡಿದೆ. ಈಗಿನ ತಲೆನೋವಿಗೆ ಕಾರಣ ಚಿತ್ರದ ನಾಯಕಿ ಅಸಿನ್. ಅಸಿನ್‌ನಿಂದ ಬಂದಿರೋ ತಲೆನೋವು ಅನಾಸಿನ್ ತಗೊಂಡ್ರೂ ಸರಿ ಹೋಗಲ್ವಂತೆ.
ಇದು ಬಾಲಿವುಡ್ಡಲ್ಲಿ ಈಗ ತಾನೇ ಹುಟ್ಕಂಡಿರೋ ಕನ್ನಡ ಗಾಧೆ!! ವಿಷಯ ಏನಂದ್ರೆ ಅಭಿಷೇಕ್ ಬಚ್ಚನ್ ಅಸಿನ್ ತಾರಾಗಣದ ಈ ಚಿತ್ರ ಕುಂಟುತ್ತ ತೆವಳುತ್ತ ಮೊನ್ನಯಷ್ಟೇ ಪೂರ್ಣಗೊಂಡಿತ್ತು. ಆಧರೆ ತಾರಾಗಣದ ಈ ಚಿತ್ರ ಕುಂಟುತ್ತ ತೆವಳುತ್ತ ಮೊನ್ನೆಯಷ್ಟೇ ಪೂರ್ಣಗೊಂಡಿತ್ತು. ಆದರೆ ಎಡಿಟಿಂಗ್ ಟೇಬಲ್ ಮೇಲೆ ಕೂತಾಗ ಚಿತ್ರದ ಕೆಲವು ಭಾಗಗಳು ನಿರ್ದೇಶಕ ಉಮೇಶ್ ಶುಕ್ಲಾಗೆ ಸಮಾಧಾನ ತಂದಿಲ್ಲ. ಹಾಗಾಗಿ ರೀಶೂಟ್ ಮಾಡೋಣ ಎಂದು ನಿರ್ಧರಿಸಿ ಅಸಿನ್‌ಳನ್ನು ಕರೆಸಿದ್ದಾರೆ.
ಆದರೆ ಎದುರಿಗೆ ಬಂದು ಆಸೀನಳಾದ ಅಸಿನ್‌ಳನ್ನು ಕಂಡು ಶುಕ್ಲಾ ಹೌಹಾರಿದ್ದಾರೆ. ಕಾರಣ ಆಕೆ ದಿಢೀರ್ ಏಳೆಂಟು ಕೆಜಿ ಊದಿದ್ದಾಳೆ. ಈಗ ರೀಶೂಟ್ ಮಾಡಿದ್ರೆ ಕಂಟಿನ್ಯುಟಿ ಪ್ರಾಬ್ಲಮ್ ಆಗತ್ತೆ ಅಂತ ಶುಕ್ಲಾ ತಲೆ ಮೇಲೆ ಕೈಹೊತ್ತಿದ್ದಾರೆ. ಅಸಿನ್ ಒಂದು ತಿಂಗಳು ಟೈಮ್ ಕೊಡಿ ಅಂತ ಟ್ರೆಡ್ ಮಿಲ್ ಏರಿದ್ದಾಳೆ. ಸ್ಮೃತಿ ಇರಾನಿಯಿಂದಾಗಿ ಒಮ್ಮೆ ವಿಳಂಬವಾಗಿದ್ದ ಚಿತ್ರ ಇದೀಗ ಮತ್ತೊಮ್ಮೆ ತಿಂಗಳುಗಟ್ಟಲೆ ಮುಂದೆ ಹೋಗಿದೆ. ಆದರೂ ಆಲ್ ಈಸ್ ವೆಲೆ ಮಂತ್ರ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


