'ಬಿಗ್ ಬಿಗಾಗಿ ರೇಖಾ ಸಿಂಧೂರ ಧರಿಸುತ್ತಾರೆ'
ಬಾಲಿವುಡ್ ನ' ಅಮಿತಾಬ್ ಬಚ್ಚನ್ ಅವರಿಗಾಗಿ ನಟಿ ರೇಖಾ ಅವರು ತಮ್ಮ ಹಣೆಯ ಮೇಲೆ ಸಿಂಧೂರ ಇಡುತ್ತಾರೆ ಎಂದು ದೀಪಾಲಿ ಇಸ್ಸಾರ್ ಹೇಳಿದ್ದಾರೆ..

ಮುಂಬೈ: ಬಾಲಿವುಡ್ ನ' ಅಮಿತಾಬ್ ಬಚ್ಚನ್ ಅವರಿಗಾಗಿ ನಟಿ ರೇಖಾ ಅವರು ತಮ್ಮ ಹಣೆಯ ಮೇಲೆ ಸಿಂಧೂರ ಇಡುತ್ತಾರೆ ಎಂದು ದೀಪಾಲಿ ಇಸ್ಸಾರ್ ಹೇಳಿದ್ದಾರೆ.
ಖಾಸಗಿ ಮ್ಯಾಗಜಿನ್ಗೆ ನೀಡಿರುವ ಸಂದರ್ಶನದಲ್ಲಿ ದೀಪಾಲಿ ಇಸ್ಸಾರ್ ಅವರು ಇಂತಹುದೊಂದು ಹೇಳಿಕೆ ನೀಡುವ ಮೂಲಕ ಇದೀಗ ಬಾಲಿವುಡ್ನ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ದೀಪಾಲಿ ಇಸ್ಸಾರ್ ಅವರು ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಮುಕ್ತಾಯಗೊಂಡ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿಯಾಗಿದ್ದ ನಟ ಪುನೀತ್ ಇಸ್ಸಾರ್ ಅವರ ಪತ್ನಿಯಾಗಿದ್ದು, ದೀಪಾಲಿ ಇಸ್ಸಾರ್ ಅವರ ಈ ಹೇಳಿಕೆ ಮಾಧ್ಯಮಗಳಲ್ಲಿ ಭಾರಿ ಪ್ರಚಾರವನ್ನೇ ಪಡೆದುಕೊಳ್ಳುತ್ತಿದೆ.
ಇನ್ನು ಈ ಪ್ರಕರಣಕ್ಕೆ ಮತ್ತೊಂದು ಪ್ರಕರಣ ತಳುಕು ಹಾಕಿಕೊಂಡಿದ್ದು, ಈ ಹಿಂದೆ ಪುನೀತ್ ಸ್ಪರ್ಧಿಸಿದ್ದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ನಟಿ ರೇಖಾ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ನಟನೆಯ 'ಸೂಪರ್ ನಾನಿ' ಚಿತ್ರದ ಪ್ರಮೋಷನ್ ಗಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟಿ ರೇಖಾ ಅವರು, ಬಿಗ್ಬಾಸ್ ಮನೆಯ ಸ್ಪರ್ಧಾಳುಗಳನ್ನು ಭೇಟಿ ಮಾಡಿದ್ದರು. ಆದರೆ ಅದೇ ತಂಡದಲ್ಲಿದ್ದ ಪುನೀತ್ ಇಸ್ಸಾರ್ ಅವರನ್ನು ಮಾತ್ರ ರೇಖಾ ಅವರು ಮಾತನಾಡಿಸಿರಲಿಲ್ಲ. ಕೂಲಿ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳನ್ನು ಮನಸಿನಲ್ಲಿಟ್ಟುಕೊಂಡು ನಟಿ ರೇಖಾ ಅವರು ಪುನೀತ್ ಅವರನ್ನು ಬೇಕೆಂದೇ ಮಾತನಾಡಿಸಲಿಲ್ಲ ಮತ್ತು ಇದೇ ಕಾರಣಕ್ಕಾಗಿ ಪುನೀತ್ ಪತ್ನಿ ದೀಪಾಲಿ ಇಸ್ಸಾರ್ ಅವರು ಇಂತಹುದೊಂದು ಊಹಾಪೊಹಗಳನ್ನು ಹರಿಬಿಟ್ಟಿದ್ದಾರೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ನಟ ಪುನೀತ್ ಮತ್ತು ಅಮಿತಾಬ್ ಬಚ್ಚನ್ ಜೊತೆಗೂಡಿ ನಟಿಸಿದ್ದ ಕೂಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಟ ಅಮಿತಾಬ್ ಬಚ್ಚನ್ಗೆ ಆದ ಗಾಯವಾಗಿತ್ತು. ಇದಕ್ಕೆ ಅಂದು ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟ ಪುನೀತ್ ಇಸ್ಸಾರ್ ಅವರೇ ಪರೋಕ್ಷ ಕಾರಣ ಎಂದೂ ಹೇಳಲಾಗುತ್ತಿತ್ತು.
ಒಟ್ಟಾರೆ ನಟಿ ರೇಖಾ ಅವರ ಸ್ಟೈಲ್ ಸ್ಟೇಟ್ಮೆಂಟ್ ಆಗಿದ್ದ ಸಿಂಧೂರವನ್ನು ದೀಪಾಲಿ ಇಸ್ಸಾರ್ ಅವರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ಇದೀಗ ವಿವಾದಕ್ಕೀಡಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


