ಬಾಲಿವುಡ್

ಅನುಷ್ಕಾ ಶೆಟ್ಟಿಗೆ ವಿವಾಹ ಯೋಗ

ಇಲ್ಲಿವರೆಗೂ ಸಿಂಗಲ್ ಆಗಿದ್ದ ಮಂಗಳೂರು ಮೂಲದ ಯೋಗಾ ಟೀಚರ್, ನಟಿ ಅನುಷ್ಕಾ ಶೆಟ್ಟಿ, ಇದೀಗ...

ಅನುಷ್ಕಾ ಶೆಟ್ಟಿಗೆ ವಿವಾಹ ಯೋಗ
ಅನುಷ್ಕಾ ಶೆಟ್ಟಿ
Published On :

ಇಲ್ಲಿವರೆಗೂ ಸಿಂಗಲ್ ಆಗಿದ್ದ ಮಂಗಳೂರು ಮೂಲದ ಯೋಗಾ ಟೀಚರ್, ನಟಿ ಅನುಷ್ಕಾ ಶೆಟ್ಟಿ, ಇದೀಗ ಮಿಂಗಲ್ ಆಗುವ ಹಾದಿಯಲ್ಲಿದ್ದಾರೆ!

ಕಾಲಿವುಡ್ ಮತ್ತು ಟಾಲಿವುಡ್‌ನ ಬಹುಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರಂತೆ. ಯಾರ ಜತೆ ಅನ್ನೋದು ಸಸ್ಪೆನ್ಸ್! ಆದರೆ ಅನುಷ್ಕಾ ಶೆಟ್ಟಿ ಕೈಹಿಡಿಯುತ್ತಿರುವ ಗಂಡು ಕನ್ನಡಿಗನಂತೆ.

ಇಷ್ಟನ್ನ ಬಿಟ್ರೆ, ಆತನ ಪೂರ್ವಾಪರ ಗುಟ್ಟಾಗಿದೆ.!
ನಟಿಯಾಗಿ ಇನ್ನೂ ಎತ್ತರದಲ್ಲಿರುವಾಗಲೇ ಮದುವೇನಾ? ಅನ್ನೋದಾ ನಿಮ್ಮ ಪ್ರಶ್ನೋ? ಮೊನ್ನೆಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ ಜತೆ ರೋಮಾನ್ಸ್ ಮಾಡಿದ್ದ ಅನುಷ್ಕಾ ಕೈಯಲ್ಲಿ ಸದ್ಯಕ್ಕಿರುವುದು ಮೂರೇ ಚಿತ್ರಗಳು.! ಇವುಗಳನ್ನ ಬಿಟ್ಟರೆ, ಅನುಷ್ಕಾ ಯಾವುದೇ ಹೊಸ ಆಫರ್‌ಗಳನ್ನು ಒಪ್ಪಿಕೊಂಡಿಲ್ಲ.

ಹೀಗಾಗಿ ಸದ್ಯಕ್ಕೆ ಅನುಷ್ಕಾ ಶೆಟ್ಟಿ ಖಾಲಿ ಇದ್ದಾರೆ. ಗ್ಲಾಮರಸ್ ಪಾತ್ರಗಳಿಂದ ಕೊಂಚ ದೂರು ಸರಿಯುತ್ತಿರುವ ಅನುಷ್ಕಾ, ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಾಗಿ ಗಮನ ಹರಿಸುತ್ತಿರುವ ಹಾಗಿದೆ. ಮದುವೆ ಸುದ್ದಿ ಬರೀ ಗಾಸಿಪ್ ಅಂತ ತಳ್ಳಿಹಾಕಿದರೂ, ಅನುಷ್ಕಾ ಸಿನಿಮಾಗಳನ್ನ ಒಪ್ಪಿಕೊಳ್ಳದೇ ಇರುವುದಕ್ಕೆ ಬೇರೆ ಕಾರಣವೇನಿದೆಯೋ ಗೊತ್ತಿಲ್ಲ. ಆದ್ರೆ, ಕೆಲವು ಬಲ್ಲ ಮೂಲಗಳ ಪ್ರಕಾರ ಸದ್ಯದಲ್ಲೇ ಸಿಹಿ ಸುದ್ದಿಯೊಂದನ್ನ ಅನುಷ್ಕಾ ಕೊಡ್ತಾರಂತೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.