ರಾಕುಲ್ ರಾಕಿಂಗ್
ಚಿರಂಜೀವಿಯ ಮಗಧೀರ ರಾಮ್ ಚರಣ್ ತೇಜನ ಹೊಸ ಚಿತ್ರಕ್ಕೆ ಪಂಜಾಬಿನ ಸುಂದರಿ ರಾಕುಲ್ ಪ್ರೀತಿ ಸಿಂಗ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ...

ಚಿರಂಜೀವಿಯ ಮಗಧೀರ ರಾಮ್ ಚರಣ್ ತೇಜನ ಹೊಸ ಚಿತ್ರಕ್ಕೆ ಪಂಜಾಬಿನ ಸುಂದರಿ ರಾಕುಲ್ ಪ್ರೀತಿ ಸಿಂಗ್ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಮಿಸ್ ಇಂಡಿಯಾ ಸ್ಪರ್ಧಿಯ ಬಗ್ಗೆ ತೆಲುಗು ಇಂಡಸ್ಟ್ರಿಯ ನಾಯಕಿಯರೆಲ್ಲ ಭಯಪಡಲಾರಂಭಿಸಿದ್ದಾರೆ.
ಇಂಡಸ್ಟ್ರಿಯ ಸಮೀಕ್ಷೆಗಳ ಪ್ರಕಾರ ಈ ವರ್ಷದಲ್ಲಿ ರಾಕುಲ್ ತೆಲುಗು ನಂಬರ್ ಒನ್ ಹೀರೋಯಿನ್ ಆಗುವ ಸಾಧ್ಯತೆ ಕಾಣಿಸುತ್ತಿದೆ. ಆದರೆ ಇದನ್ನು ಕೇವಲ ಅದೃಷ್ಟ ಎಂದು ಕೂಡ ಹೇಳಲಾಗುತ್ತಿದೆ. ಕಾರಣ ಇಷ್ಟೆ. ಈಕೆಗೆ ಸಿಕ್ಕಿರುವ ಚಿತ್ರಗಳೆಲ್ಲವೂ ಆಕಸ್ಮಿಕವಾಗಿ ಒಲಿದು ಬಂದಂಥವು. ವೆಂಕಟಾದ್ರಿ ಎಕ್ಸ್ ಪ್ರೆಸ್‍ಗೆ ನಾಯಕಿಯಾಗಿದ್ದು ಖ್ಯಾತ ನಾಯಕಿಯೊಬ್ಬಳ ಕೊನೆಗಳಿಗೆಯ ಕಿರಿಕ್ಕಿನಿಂದ.
ಅದು ಸೂಪರ್‍ಹಿಟ್ ಆಗಿದ್ದೇ ತಡ, ಹೊಸ ನಾಯಕರ ಚಿತ್ರಗಳಿಗೆ ನಾಯಕಿಯಾಗಲು ರಾಶಿ ರಾಶಿ ಆಫರ್. ಆದರೆ ರಾಕುಲ್ ಚೂಸಿ ಆಗಿಬಿಟ್ಟಳು. ಇದೀಗ ಎರಡು ದೊಡ್ಡ ಚಿತ್ರಗಳಿಗೆ ನಾಯಕಿಯಾಗುವ ಮೂಲಕ ತಮನ್ನ, ಸಮಂತ, ಹನ್ಸಿಕಾ ಥರದವರಿಗೆ ನಡುಕ ಹುಟ್ಟಿಸಿದ್ದಾಳೆ. ರವಿತೇಜನ ಕಿಕ್2ಗೆ ಇವಳೇ ನಾಯಕಿ. ಇದರ ಬೆನ್ನಲ್ಲೇ ಸಮಂತ ತಿರಸ್ಕರಿಸಿದ ರಾಮ್ ಚರಣ್ ತೇಜ-ಸೀನು ವೈಟ್ಲ ಕಾಂಬಿನೇಷನ್ನಿನ ಪಂಡಗ ಚೇಸ್ಕೋ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದು, ತೆಲುಗು ಇಂಡಸ್ಟ್ರಿ ಇದನ್ನು ಶುಭಶಕುನ ಎಂದು ಹೇಳುತ್ತಿದೆ. ಈಕೆ ಮೊದಲು ಆಯ್ಕೆ ಆಗಿರುವ ನಾಯಕಿಯನ್ನು ರೀಪ್ಲೇಸ್ ಮಾಡಿದ ಚಿತ್ರಗಳೆಲ್ಲ ಹಿಟ್ ಆಗುತ್ತವೆಂಬ ನಂಬಿಕೆ ಟಾಲಿವುಡ್‍ದು! ವರ್ಷದ ಕೊನೆಯ ಹೊತ್ತಿಗೆ ರಾಕುಲ್ ನಂಬರ್ ಒನ್ ಆಗಿರ್ತಾಳಾ ಕಾದುನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


