ರಾಷ್ಟ್ರ ಪ್ರಶಸ್ತಿ ಸಿಕ್ಕರೆ ನಿವೃತ್ತಿಯಾಗ್ತೇನೆ!
ನಾನೀಗ ರಾಷ್ಟ್ರ ಪ್ರಶಸ್ತಿಗಾಗಿ ಕಾದಿದ್ದು, ಆ ಪ್ರಶಸ್ತಿ ಪಡೆದ ದಿನ ನಟನೆಗೆ ಗುಡ್‍ಬೈ ಹೇಳಲು ನಿರ್ಧರಿಸಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ...

ನವದೆಹಲಿ: ನಾನೀಗ ರಾಷ್ಟ್ರ ಪ್ರಶಸ್ತಿಗಾಗಿ ಕಾದಿದ್ದು, ಆ ಪ್ರಶಸ್ತಿ ಪಡೆದ ದಿನ ನಟನೆಗೆ ಗುಡ್‍ಬೈ ಹೇಳಲು ನಿರ್ಧರಿಸಿದ್ದೇನೆ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ತಮ್ಮ ಮಹತ್ವಾಕಾಂಕ್ಷೆಯ ಫ್ಯಾನ್ ಸಿನಿಮಾದಲ್ಲಿನ ತಮ್ಮ ದ್ವಿಪಾತ್ರದ ಬಗ್ಗೆ ಮಾತನಾಡುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫ್ಯಾನ್ ಸಿನಿಮಾದಲ್ಲಿ 24ರ ಹರೆಯದ ಅಭಿಮಾನಿ ಹಾಗೂ ಸೂಪರ್ ಸ್ಟಾರ್ ನಟನ ಪಾತ್ರಗಳನ್ನು ಏಕ ಕಾಲಕ್ಕೆ ನಿಭಾಯಿಸುವುದು ತೀರಾ ಸವಾಲಿನದ್ದಾಗಿತ್ತು.
ಅದೂ ಈ ವಯಸ್ಸಿನಲ್ಲಿ ಹರೆಯದ ಹುಡುಗನಂತೆ ಕಾಣಲು ಪ್ರತಿದಿನ ಗಂಟೆಗಟ್ಟಲೆ ಪ್ರೊಸ್ತೆಟಿಕ್ಸ್ ಮೇಕಪ್‍ಗೆ ಒಳಗಾಗುವುದು ಯಾತನಾದಾಯಕ. ಹಾಗೇ ಅದೊಂದು ಹುಚ್ಚು ಖುಷಿಯ ಅನುಭವ ಕೂಡ ಎಂದು 50ರ ಹರೆಯದ ನಟ ಹೇಳಿದ್ದಾರೆ. ಅಲ್ಲದೆ ರಾಷ್ಟ್ರ ಪ್ರಶಸ್ತಿ ನನ್ನ ಕನಸು ಎಂದೂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


