ಬಾಲಿವುಡ್

ಪ್ರೀತಿ, ಮದುವೆ ಬಗ್ಗೆ ಮಾತನಾಡಿದ ಕತ್ರಿನಾ

ಜಿ ಕ್ಯು ಮ್ಯಾಗಜೀನ್ ನ ಭಾರತದ ಡಿಸೆಂಬರ್ ಸಂಚಿಕೆಯ ಮುಖಪುಟದಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರುವ...

ಪ್ರೀತಿ, ಮದುವೆ ಬಗ್ಗೆ ಮಾತನಾಡಿದ ಕತ್ರಿನಾ
ಕತ್ರಿನಾ ಕೈಫ್
Published On :

ಮುಂಬೈ: ಜಿ ಕ್ಯು ಮ್ಯಾಗಜೀನ್ ನ ಭಾರತದ ಡಿಸೆಂಬರ್ ಸಂಚಿಕೆಯ ಮುಖಪುಟದಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೊನೆಗೂ ಮುಕ್ತವಾಗಿ ಮಾತನಾಡಿದ್ದಾಳೆ.

ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಕತ್ರಿನಾ ತನ್ನ ಪ್ರೀತಿ, ಮದುವೆ ಮತ್ತು ಅಸ್ಥಿರತೆ ಕುರಿತು ಮನಬಿಚ್ಚಿ ಹೇಳಿಕೊಂಡಿದ್ದಾಳೆ. ಆಕೆಯ ಭಾವಿ ಪತಿ ರಣಬೀರ್ ಕಪೂರ್ ಮನೆಯವರ ಬಗ್ಗೆ ಅವರೊಂದಿಗೆ ಕಳೆದ ಕೆಲ ಕ್ಷಣಗಳ ಬಗ್ಗೆ ಕೂಡ ಹೇಳಿಕೊಂಡಿದ್ದಾಳೆ.

ನಾನು ಬಯಸುವಷ್ಟು ರಣಬೀರ್ ಕಪೂರ್ ಅವರ ಕುಟುಂಬದವರ ಜೊತೆ ನಿಕಟವಾಗಿಲ್ಲ. ನಾನು ಅವರ ಜೊತೆ ಹೆಚ್ಚು ಬೆರೆಯಲು, ಮತ್ತಷ್ಟು ಕಾಲ ಸಮಯ ಕಳೆಯಲು ಬಯಸುತ್ತೇನೆ. ನಾನು ಮದುವೆಯಾಗಲು ನಿರ್ಧರಿಸುವ ವೇಳೆಗೆ ಕುಟುಂಬ ನಿರ್ಣಾಯಕ ಅಂಶವಾಗುತ್ತದೆ. ನಾನು ತುಂಬಾ ಜವಾಬ್ದಾರಿಯುತ ವ್ಯಕ್ತಿ. ನನಗೆ ಅಗತ್ಯವಿರುವುದನ್ನು ನನ್ನ ಜೊತೆಗಾರ ನೀಡಿದರೆ ಅವನಿಗೆ ನಾನು ಉತ್ತಮ ಗೆಳತಿಯಾಗುತ್ತೇನೆ ಎಂದು ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನು ಮದುವೆ ಮಂಟಪದಲ್ಲಿ ನಿಂತಿರುವಾಗ ನನ್ನ ಮದುವೆಯಾಗುವವನು ನನ್ನನ್ನು ಸಂಪೂರ್ಣವಾಗಿ ಪ್ರೀತಿಸುತ್ತಾನೆಯೇ ಇಲ್ಲವೇ ಎಂಬುದು ನನಗಿರುವ ಬಹುದೊಡ್ಡ ಭಯ ಎಂದು ಕತ್ರಿನಾ ಮಾತು ಮುಗಿಸಿದಳು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.