ಪ್ರೀತಿ ಜಿಂಟಾಗೆ ಕಣ್ಣೀರು ಹಾಕಿಸಿದ್ದ ಶಾರೂಖ್!
ಪ್ರೀತಿ ಜಿಂಟಾ ಸಿನಿಮಾಕ್ಕೆ ಬಂದು 17 ವರುಷ ಆಯ್ತು ಅಂತ ಯಾರೋ ಅಭಿಮಾನಿ ಟ್ವಿಟರಿನಲ್ಲಿ ನೆನಪಿಸಿದ್ದ. ಹೀಗಾಗಿ ಪ್ರೀತಿ ಈಗ ಒಂದೊಂದೇ ಕತೆ ಹರವಿಡುತ್ತಿದ್ದಾಳೆ...

ಪ್ರೀತಿ ಜಿಂಟಾ ಸಿನಿಮಾಕ್ಕೆ ಬಂದು 17 ವರುಷ ಆಯ್ತು ಅಂತ ಯಾರೋ ಅಭಿಮಾನಿ ಟ್ವಿಟರಿನಲ್ಲಿ ನೆನಪಿಸಿದ್ದ. ಹೀಗಾಗಿ ಪ್ರೀತಿ ಈಗ ಒಂದೊಂದೇ ಕತೆ ಹರವಿಡುತ್ತಿದ್ದಾಳೆ.
ಈಗ ಆಕೆ ಹೇಳಿದ್ದು, `ನನ್ನನ್ನು ಅನೇಕ ಸಲ ಅಳಿಸಿರುವ ನಟ ಶಾರೂಖ್ ಒಬ್ಬನೇ' ಅನ್ನೋದು. ಶಾರೂಖ್ ಚಿವುಟಲೂ ಇಲ್ಲ, ಚುಂಬಿಸಲೂ ಇಲ್ಲ. ಹಾಗಾದರೆ ಹೇಗೆ ಅಳಿಸಿದ? ಪ್ರೀತಿ ಪಾಲಿಗೆ ಶಾರೂಖ್ ಸಿಕ್ಕಾಪಟ್ಟೆ ಭಾವನಾತ್ಮಕವಾಗಿ ನಟಿಸುತ್ತಾನಂತೆ. ದಿಲ್ ಸೇ, ವೀರ್ ಝಾರಾ, ಕಲ್ ಹೋ ನಾ ಹೋಗಳಲ್ಲಿ ಪ್ರೀತಿ ಜಿಂಟಾ, ಶಾರೂಖ್ ಜೊತೆ ನಟಿಸಿದ್ದಾಳೆ. ಶಾರೂಖ್ ಸಿನಿಮಾಗಳು ನಾವೇ ಆ ಕಷ್ಟದಲ್ಲಿ ಸಿಲುಕಿದ್ದೇವೆ ಎಂಬಷ್ಟು ಫೀಲ್ ಹುಟ್ಟಿಸುತ್ತವೆ. ಈ ಭಾವನಾತ್ಮಕ ನಟನೆ ಬೇರೆಯವರಿಂದ ಆ ಪ್ರಮಾಣದಲ್ಲಿ ಬಂದಿಲ್ಲ ಅನ್ನೋದು ಪ್ರೀತಿ ಮಾತು.
The only actor who can make me cray at the drop of a hat in an emotion scene is @iamsrk omg ! I have cried in soooo many scenes with him
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


