ಬಾಲಿವುಡ್

ನನ್ನ ಮೇಲೆ 3 ದಿನ ನಿರಂತರ ಅತ್ಯಾಚಾರ: ಪೂಜಾ ಮಿಶ್ರಾ

ಬಿಗ್‍ಬಾಸ್ ಮನೆಯಿಂದ ಮತ್ತೊಂದು ಮುಜುಗರದ ಸುದ್ದಿ ಹೊರಬಂದಿದೆ. ನೋಯ್ಡಾದ ಅತಿಥಿಗೃಹವೊಂದರಲ್ಲಿ ಅಪರಿಚಿತನೊಬ್ಬ ಆ.17ರಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಬಿಗ್‍ಬಾಸ್ 5ನೇ ಆವೃತ್ತಿಯ ಸ್ಪರ್ಧಿ, ರೂಪದರ್ಶಿ ಪೂಜಾ ಮಿಶ್ರಾ ಆರೋಪಿಸಿದ್ದಾರೆ...

ನನ್ನ ಮೇಲೆ 3 ದಿನ ನಿರಂತರ ಅತ್ಯಾಚಾರ: ಪೂಜಾ ಮಿಶ್ರಾ
ಪೂಜಾ ಮಿಶ್ರಾ (ಸಂಗ್ರಹ ಚಿತ್ರ)
Published On :

ನವದೆಹಲಿ: ಬಿಗ್‍ಬಾಸ್ ಮನೆಯಿಂದ ಮತ್ತೊಂದು ಮುಜುಗರದ ಸುದ್ದಿ ಹೊರಬಂದಿದೆ. ನೋಯ್ಡಾದ ಅತಿಥಿಗೃಹವೊಂದರಲ್ಲಿ ಅಪರಿಚಿತನೊಬ್ಬ ಆ.17ರಂದು ತನ್ನ ಮೇಲೆ ನಿರಂತರ 3 ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಬಿಗ್‍ಬಾಸ್ 5ನೇ ಆವೃತ್ತಿಯ ಸ್ಪರ್ಧಿ, ರೂಪದರ್ಶಿ ಪೂಜಾ ಮಿಶ್ರಾ ಆರೋಪಿಸಿದ್ದಾರೆ.

ಈ ಬಗ್ಗೆ ದೂರು ನೀಡಿರುವ ಪೂಜಾ, ನನಗೆ ಮಾದಕ ದ್ರವ್ಯ ನೀಡಿ, ಎತ್ತಿಕೊಂಡೊಯ್ದ ಅಪರಿಚಿತನೊಬ್ಬ ಸತತ ಮೂರು ದಿನ ಹೇಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಏ.15ರಂದು ಉದಯಪುರದಲ್ಲಿ ತನ್ನ ಮೇಲೆ ಅತ್ಯಾಚಾರ ಪ್ರಯತ್ನ ನಡೆದಿತ್ತೆಂದು ದೂರು ನೀಡಿದ್ದರು. ಶೂಟಿಂಗ್‍ಗೆ ಹೋಗಿದ್ದ ಪೂಜಾಳ ಮೇಲೆ ಹೋಟೆಲ್ ನಲ್ಲಿ ದೈಹಿಕ ಹಿಂಸೆ ನಡೆದಿತ್ತೆಂದು ದೂರು ದಾಖಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.