ಬಾಲಿವುಡ್

ಮೀನಾಕುಮಾರಿಯಾಗಿ ಕಂಗನಾ

ಮೀನಾ ಕುಮಾರಿ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಲಿದ್ದಾರಂತೆ! ಟಾಪ್ ಒನ್ ಸ್ಥಾನಕ್ಕೇರಿದ, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಕಂಗನಾ ಕೈಯಲ್ಲಿ ಸದ್ಯ ಸಾಕಷ್ಟು ಚಿತ್ರಗಳಿವೆಯಂತೆ. ಅವೆಲ್ಲಾ ಮುಗಿದ ಬಳಿಕ ಅವರು...

ಮೀನಾಕುಮಾರಿಯಾಗಿ ಕಂಗನಾ
ಕಂಗನಾ ರನೌತ್
Published On :

ಮೀನಾ ಕುಮಾರಿ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಲಿದ್ದಾರಂತೆ! ಟಾಪ್ ಒನ್ ಸ್ಥಾನಕ್ಕೇರಿದ, ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಕಂಗನಾ ಕೈಯಲ್ಲಿ ಸದ್ಯ ಸಾಕಷ್ಟು ಚಿತ್ರಗಳಿವೆಯಂತೆ. ಅವೆಲ್ಲಾ ಮುಗಿದ ಬಳಿಕ ಅವರು `ಮೀನಾ ಕುಮಾರಿ' ಪಾತ್ರಕ್ಕೆ ರಂಗು ಹಚ್ಚಲಿದ್ದಾರಂತೆ.

ಬಾಲಿವುಡ್ ಚಿತ್ರ ರಂಗ ಕಂಡ ಖ್ಯಾತ ಅಭಿನೇತ್ರಿ ಮೀನಾ ಕುಮಾರಿ ಅವರ ಕಥೆ ಕೇಳಿದರೆ ಯಾರೇ ಆಗಲಿ ಆ ಪಾತ್ರ ಮಾಡಬೇಕು ಅನ್ನಿಸುತ್ತದೆ. ಬಾಲಿವುಡ್ ಚಿತ್ರರಂಗ ಕಂಡ ಪ್ರತಿಭಾನ್ವಿತ ಹಾಗೂ ದುರಂತ ನಾಯಕಿ ಮೀನಾ ಕುಮಾರಿ. ಇದೀಗ ಮೀನಾ ಕುಮಾರಿಯಾಗಲು ಹೊರಟ ಕಂಗನಾ ರನೌತ್ `ಮೀನಾ ಕುಮಾರಿ ಪಾತ್ರಕ್ಕೆ ನನಗೆ ಆಫರ್ ಬಂದಿದೆ.

ಖಂಡಿತ ಆ ಪಾತ್ರ ಮಾಡುವ ಭರವಸೆ ಇದೆ. ಅದಕ್ಕೂ ಮುನ್ನ ಈಗಾಗಲೇ ಒಪ್ಪಿಕೊಂಡ ಚಿತ್ರಗಳನ್ನು ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ 2016ರ ಮಧ್ಯಂತರದ ತನಕ ಮೀನಾಕುಮಾರಿಯಾಗಲು ಸಾಧ್ಯವಿಲ್ಲ' ಎಂದಿದ್ದಾರೆ. ಒಟ್ಟಿನಲ್ಲಿ ಈ ಚಿತ್ರ ಸೆಟ್ಟೇರಬೇಕಾದರೆ 2016ರ ಮಧ್ಯಂತರದ ತನಕ ಕಾಯಲೇಬೇಕು. ಇನ್ನು ಚಿತ್ರೀಕರಣ ಮುಗಿದು ಮೀನಾಕುಮಾರಿ ನೋಡಲು ಅಭಿಮಾನಿಗಳು ಇನ್ನೆಷ್ಟು ದಿನ ಕಾಯಬೇಕೋ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.