ಬಾಲಿವುಡ್

ರಾಣಿ ಮದುವೆಯಂತೆ

ಬಾಲಿವುಡ್ ನಟಿ ರಾಣಿ ಮುಖರ್ಜಿ ಸುತ್ತ ಹಬ್ಬಿದ್ದ ಗಾಸಿಪ್‌ಗಳಿಗೆ ತೆರೆಬೀಳುವ ಸಮಯ ಬಂದಿದೆ. ಹೌದು ಫೆಬ್ರವರಿ 10ರಂದು...

ರಾಣಿ ಮದುವೆಯಂತೆ
Published On :

ಬಾಲಿವುಡ್ ನಟಿ ರಾಣಿ ಮುಖರ್ಜಿ ಸುತ್ತ ಹಬ್ಬಿದ್ದ ಗಾಸಿಪ್‌ಗಳಿಗೆ ತೆರೆಬೀಳುವ ಸಮಯ ಬಂದಿದೆ.  ಹೌದು ಫೆಬ್ರವರಿ 10ರಂದು ಯಶ್‌ರಾಜ್ ಫಿಲಂಸ್‌ನ ಒಡೆಯ ಆದಿತ್ಯ ಚೋಪ್ರಾ ಜೊತೆ ಹಸೆಮಣೆ ಏರಲಿದ್ದಾರಂತೆ. ಕಳೆದ ಕೆಲ ವರ್ಷಗಳಿಂದ ಇವರಿಬ್ಬರ ನಡುವೆ ಪ್ರೇಮದಾಟ ನಡೆಯುತ್ತಿದೆ. ಈ ಜೋಡಿ ಹಕ್ಕಿಗಳು ಒಂದಾಗುತ್ತಾರೆ ಎಂಬ ಮಾತುಗಳು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿದ್ದವು.  ಇತ್ತೀಚೆಗೆ ಜೋಧ್‌ಪುರ್ ಅರಮನೆಯಲ್ಲಿ ನಡೆದ ನೀತಾ ಅಂಬಾನಿ ಹುಟ್ಟುಹಬ್ಬ ಸಂಭ್ರಮಕ್ಕೆ ರಾಣಿ ಹೋಗಿದ್ದರು. ಆ ಅರಮನೆಯ ಸೊಬಗು ಕಂಡು ಬೆರಗಾದ ಆಕೆ, ಮದುವೆ ಆದರೆ ಇಲ್ಲೇ ಆಗಬೇಕು ಎಂದು ತನ್ನ ಆಪ್ತರಲ್ಲದೆ, ಆದಿತ್ಯ ಬಳಿಯೂ ಹೇಳಿಕೊಂಡಿದ್ದಳಂತೆ.  ಇದಕ್ಕೆ ಆದಿತ್ಯನೂ ಒಪ್ಪಿಕೊಂಡಿದ್ದಾನೆ ಎಂಬ ಸುದ್ದಿ ಇದೆ. ಇನ್ನೇನಿದ್ದರೂ ಗಟ್ಟಿಮೇಳ ಮೊಳಗುವುದು ಬಾಕಿ. ಬಹಳ ಸಮಯದಿಂದಿದ್ದ ಗಾಸಿಪ್‌ಗೆ ತೆರೆ ಬೀಳುತ್ತಿರುವುದು ಸಂತಸದ ವಿಷಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.