'ಪಿಕೆ' ಬಗ್ಗೆ ಸಲ್ಮಾನ್ ಅಸಮಾಧಾನಗೊಂಡಿದ್ದು ಏಕೆ?
ನಟ ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಚಿತ್ರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದಾರಂತೆ..

ಮುಂಬೈ: ನಟ ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಚಿತ್ರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದಾರಂತೆ..
ಕಳೆದ ವಾರ ತೆರೆಕಂಡು ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಮೀರ್ಖಾನ್ ಅವರ ಪಿಕೆ ಚಿತ್ರದ ಟಿಕೆಟ್ ದರದ ಬಗ್ಗೆ ನಟ ಸಲ್ಮಾನ್ ಖಾನ್ ಅಸಮಾಧಾನಗೊಂಡಿದ್ದು, ಸಾಮಾನ್ಯ ಜನರಿಗೆ ಟಿಕೆಟ್ ದರ ಕೊಂಚ ದುಬಾರಿಯಾಯಿತು ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸಲ್ಮಾನ್ ಕೇವಲ ಲಾಭದ ಉದ್ದೇಶದಿಂದಲೇ ಚಿತ್ರವನ್ನು ನೋಡುವುದು ಸರಿಯಲ್ಲ. ಪ್ರೇಕ್ಷಕರ ಕುರಿತಾಗಿಯೂ ನಾವು ಯೋಚಿಸ ಬೇಕಾಗುತ್ತದೆ. ಚಿತ್ರ ಪ್ರೇಕ್ಷಕರಿಗೆ ಹೇಗೆ ತಲುಪಿಸುತ್ತೇವೆ ಎನ್ನುವುದರ ಮೇಲೆ ಚಿತ್ರದ ಯಶಸ್ಸು ನಿರ್ಧಾರವಾಗುತ್ತದೆ. ಹೀಗಾಗಿ ಸಾಮಾನ್ಯ ಜನರ ಕೈಗೆಟುಕದ ರೀತಿಯಲ್ಲಿ ಟಿಕೆಟ್ದರವನ್ನು ನಿಗದಿ ಮಾಡಬಾರದು ಎಂದು ಅವರು ಹೇಳಿದ್ದಾರೆ. ಅಂತೆಯೇ ಟಿಕೆಟ್ ದರವನ್ನು ಖಡಿತಗೊಳಿಸುವಂತೆ ನಟ ಸಲ್ಮಾನ್ ನಿರ್ಮಾಪಕರಿಗೆ ಸಲಹೆ ನೀಡಿದ್ದಾರೆ.
ನಟ ಅಮೀರ್ಖಾನ್ ಅವರ ಉತ್ತಮ ಸ್ನೇಹಿತನಾಗಿರುವ ಸಲ್ಮಾನ್ ಖಾನ್, ತಮಗೆ ತಪ್ಪು ಎನಿಸಿದ ವಿಚಾರದ ಕುರಿತು ಯಾವುದೇ ಮುಜುಗರವಿಲ್ಲದೇ ಧ್ವನಿ ಎತ್ತುತ್ತಾರೆ. ಅಂತೆಯೇ ಪಿಕೆ ಚಿತ್ರದ ಟಿಕೆಟ್ ದರವನ್ನು ಕಡಿತಗೊಳಿಸದಿದ್ದರೆ, ಚಿತ್ರವು ನಿರೀಕ್ಷಿತ ಯಶಸ್ಸುಗಳಿಸುವುದು ಕಷ್ಟ ಎಂದು ನಿರ್ಮಾಪಕರಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಪಿಕೆ ಆರಂಭದಿಂದಲೂ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಈ ಹಿಂದೆ ಚಿತ್ರದ ಪೋಸ್ಟರ್ಗಳು ತೀವ್ರ ವಿವಾದ ಹುಟ್ಟುಹಾಕಿದ್ದವು. ಆದರೆ ಚಿತ್ರ ತೆರೆಕಂಡ ಬಳಿಕ ಉತ್ತಮ ಆರಂಭ ಪಡೆದಿದ್ದು, ಟಿಕೆಟ್ ದರ ದುಬಾರಿಯಾಯಿತು ಎನ್ನುವ ಅಭಿಪ್ರಾಯ ಪ್ರೇಕ್ಷಕರ ವಲಯದಿಂದಲೂ ಕೇಳಿಬಂದಿತ್ತು. ಮುಂಬೈನ ಖ್ಯಾತ ಚಿತ್ರಮಂದಿರಗಳಾದ ಮರಾಠ ಮಂದಿರ್ ಮತ್ತು ಮಿನಿ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಟಿಕೆಟ್ ದರ ದುಬಾರಿಯಾಯಿತು ಎಂದೇ ಪಿಕೆ ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದವು.
ಚಿತ್ರವನ್ನು ಖ್ಯಾತ ನಿರ್ದೇಶಕ ರಾಜ್ಕುಮಾರ್ ಹಿರಾನಿ ಅವರು ನಿರ್ದೇಶಿಸಿದ್ದು, ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅವರೊಂದಿಗೆ ವಿದು ವಿನೋದ್ ಚೋಪ್ರಾ, ಸಿದ್ಧಾರ್ಥ್ ರಾಯ್ ಕಪೂರ್ ಅವರು ಕೈ ಜೋಡಿಸಿದ್ದಾರೆ. ಇನ್ನು ಚಿತ್ರದಲ್ಲಿ ಅಮೀರ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್, ಬೊಮ್ಮನ್ ಹಿರಾನಿ ಮತ್ತು ಸಂಜಯ್ ದತ್ ಅವರು ಸಹಾಯಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


