ಮನೀಶ್ ಜತೆಗಿನ ದಾಂಪತ್ಯಕ್ಕೆ ಪೂಜಾ ಭಟ್ ಗುಡ್ ಬೈ
ನಟಿ, ನಿರ್ದೇಶಕಿ ಪೂಜಾ ಭಟ್ ಮತ್ತು ಮನೀಶ್ ಮಖೀಜಾ ಇದೀಗ ದೂರವಾಗಲು ತೀರ್ಮಾನಿಸಿದ್ದಾರೆ...

ಮುಂಬೈ: ಬಾಲಿವುಡ್ ನಟಿ, ನಿರ್ದೇಶಕಿ ಪೂಜಾ ಭಟ್ ಮತ್ತು ಮನೀಶ್ ಮಖೀಜಾ ಇದೀಗ ದೂರವಾಗಲು ತೀರ್ಮಾನಿಸಿದ್ದಾರೆ. 11 ವರ್ಷಗಳ ದಾಂಪತ್ಯಕ್ಕೆ ಗುಡ್ ಬೈ ಹೇಳಿರುವ ಪೂಜಾ ತಮ್ಮ ವಿವಾಹ ವಿಚ್ಛೇದನದ ಬಗ್ಗೆ ಟ್ವೀಟರ್‌ನಲ್ಲಿ ವಿಷಯ ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಹೃತಿಕ್ ರೋಷನ್-ಸುಸೇನ್ ಖಾನ್ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್- ಕಲ್ಕಿ ಕೊಚೆಲಿನ್ ತಮ್ಮ ವಿಚ್ಛೇದನದ ವಿಷಯವನ್ನು ಪತ್ರಿಕಾ ಹೇಳಿಕೆ ನೀಡುವ ಮೂಲಕ ಬಹಿರಂಗ ಪಡಿಸಿದ್ದರು.
ಆದರೆ ಬಾಲಿವುಡ್‌ನ ಖ್ಯಾತ ನಿರ್ದೇಶಕರ ಮಹೇಶ್ ಭಟ್ ಪುತ್ರಿ ಪೂಜಾ ಭಟ್ ತಮ್ಮ ದಾಂಪತ್ಯ ಜೀವನಕ್ಕೆ ತೆರೆ ಎಳೆದಿರುವ ವಿಷಯವನ್ನು ಟ್ವೀಟರ್‌ನಲ್ಲಿ ಹೇಳಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಆದಾಗ್ಯೂ, ಮನೀಶ್‌ನಿಂದ ದೂರವಾಗುವ ಬಗ್ಗೆ ಟ್ವೀಟರ್‌ನಲ್ಲೇ ಹೇಳಿಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗೂ ಪೂಜಾ ಉತ್ತರ ನೀಡಿದ್ದಾಳೆ.
ನಾವಿಬ್ಬರೂ ಸಾರ್ವಜನಿಕವಾಗಿ ಗೊತ್ತಿರುವವರು. ಆದ್ದರಿಂದ ನಮ್ಮ ಗೆಳೆಯರಿಗೆ, ಪ್ರೀತಿ ಪಾತ್ರರಿಗೆ ಈ ವಿಷಯ ಗೊತ್ತಿರಲಿ ಎಂಬ ಕಾರಣಕ್ಕೆ ನಾನು ಟ್ವೀಟರ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ ಎಂದಿದ್ದಾರೆ ಪೂಜಾ.
ನನ್ನ ಬಗ್ಗೆ ಕಾಳಜಿ ವಹಿಸುವವರು ಮತ್ತು ನನ್ನ ಪತಿ ಮುನ್ನಾ ಅವರನ್ನು ಗೊತ್ತಿಲ್ಲದೇ ಇರುವವರಿಗೆ ತಿಳಿಸುವ ಸಲುವಾಗಿಯೇ ನಾನು ಈ ಮಾಧ್ಯಮವನ್ನು ಆಯ್ಕೆ ಮಾಡಿಕೊಂಡೆ. ನಮ್ಮ 11 ವರ್ಷದ ದಾಂಪತ್ಯಕ್ಕೆ ಇಲ್ಲಿ ತೆರೆಯೆಳೆಯುತ್ತಿದ್ದೇನೆ. ನಮ್ಮಿಬ್ಬರ ಬ್ರೇಕ್ ಅಪ್ ಕೂಡಾ ಸೌಹಾರ್ದಯುತವಾಗಿತ್ತು, ಮುಂದೆಯೂ ನಾವು ಪರಸ್ಪರ ಗೌರವಿಸುತ್ತೇವೆ ಎಂದು ಪೂಜಾ ಟ್ವೀಟಿಸಿದ್ದಾಳೆ.
ಮಹೇಶ್ ಭಟ್ ಚಿತ್ರ 'ಪಾಪ್' ನಲ್ಲಿ ಪೂಜಾ ಮತ್ತು ಮಖೀಜಾ ಭೇಟಿಯಾಗಿದ್ದರು. ನಿರೂಪಕ, ನಟ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮಖೀಜಾ, ತೆಹೆಲ್ಕಾ ಡಾಟ್ ಕಾಂನಲ್ಲೂ ಕಾರ್ಯ ನಿರ್ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


