ಕತ್ರೀನಾ-ರಣಬೀರ್ ನೂತನ ಬಂಗಲೆಗೆ ಸಿಸಿಟಿವಿ?
ಮನೆ ತಗೊಂಡ್ ನೋಡು ಮದುವೆ ಮಾಡ್ಕೊಂಡ್ ನೋಡು ಅನ್ನೋ ತತ್ವಕ್ಕೆ ಬದ್ಧರಾಗಿರೋ...

ಮನೆ ತಗೊಂಡ್ ನೋಡು ಮದುವೆ ಮಾಡ್ಕೊಂಡ್ ನೋಡು ಅನ್ನೋ ತತ್ವಕ್ಕೆ ಬದ್ಧರಾಗಿರೋ ಕತ್ರಿನಾ-ರಣಬೀರ್ ಜೋಡಿ, ತಮ್ಮ ನೂತನ ಬಂಗಲೆಗೆ ಸಿಸಿಟಿವಿ ಅಳವಡಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಮುಂಬೈನ ಬಾಂದ್ರಾ ಬಳಿಯ ಸಾಗರತೀರದಲ್ಲಿ ಹೊಸದೊಂದು ಬಂಗಲೆ ಖರೀದಿಸಿ ಗೃಹ ಪ್ರವೇಶಕ್ಕೆ ತಮ್ಮ ಆಪ್ತರನ್ನಷ್ಟೇ ಆಹ್ವಾನಿಸಿ ಪಾರ್ಟಿ ಕೊಟ್ಟಿದ್ದ ಈ ಜೋಡಿ, ಇದೀಗ ಸುರಕ್ಷತೆಗಾಗಿ ತಮ್ಮ ನೂತನ ಬಂಗಲೆಯ ಸುತ್ತಾ ಮುತ್ತಾ ಸಿಸಿಟಿವಿ ಅಳವಡಿಕೆ ಮುಂದಾಗಿದ್ದಾರೆ.
ಭದ್ರತೆ ಮತ್ತು ಖಾಸಗಿ ಜೀವನಕ್ಕೆ ಯಾವುದೇ ರೀತಿಯ ತೊಂದೆರಯಾಗಬಾರದೆಂಬ ಉದ್ದೇಶದಿಂದ ಈ ಜೋಡಿ ಈ ನಿರ್ಧಾರ ತೆಗದುಕೊಂಡಿದ್ದು, ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ದಾರಂತೆ.
ಗಾಳಿಮಾತಿನ ಪ್ರಕಾರ ಈ ಜೋಡಿ ಈಗಾಗಲೇ ನೂತನ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗುತ್ತಿದೆ.
ಏನೇ ಆಗಲಿ ಚಳಿಗಾಲದಲ್ಲಿ ಬೆಚ್ಚನೆ ಮನೆಯಿರಲು... ಎಂಬ ವಚನದಂತೆ, ಭಾವಿ ಹೆಂಡತಿಯ ಜೊತೆ ಸ್ವರ್ಗಕ್ಕೆ ಕಿಚ್ಚು ಹಚ್ಚಲು ರಣಬೀರ್ ರೆಡಿಯಾಗಿರೋದಂತೂ ಸುಳ್ಳಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


