ಬಾಲಿವುಡ್

ಕಿಂಗ್‌ಖಾನ್ ಗೆ ಜತೆಯಾಗಲಿದ್ದಾರಾ ಐಶ್ವರ್ಯಾ?

ಐಶ್ವರ್ಯಾ ರೈ ಮತ್ತೆ ಬಾಲಿವುಡ್‌ಗೆ ಮರಳಲಿದ್ದಾರಾ? ಹೌದು ಅನ್ನುತ್ತವೆ ಬಾಲಿವುಡ್ ಮೂಲಗಳು...

ಕಿಂಗ್‌ಖಾನ್ ಗೆ  ಜತೆಯಾಗಲಿದ್ದಾರಾ ಐಶ್ವರ್ಯಾ?
ಶಾರುಖ್ ಮತ್ತು ಐಶ್ವರ್ಯಾ
Published On :

ನವದೆಹಲಿ : ಐಶ್ವರ್ಯಾ ರೈ ಮತ್ತೆ ಬಾಲಿವುಡ್‌ಗೆ ಮರಳಲಿದ್ದಾರಾ? ಹೌದು ಅನ್ನುತ್ತವೆ ಬಾಲಿವುಡ್ ಮೂಲಗಳು. ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿರುವ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜತೆ ನಟಿಸುವ ಮೂಲಕ ರೀ ಎಂಟ್ರಿ ಕೊಡಲಿದ್ದಾಳೆ  ಎಂಬುದು ಇನ್ನೊಂದು ಸುದ್ದಿ.

ದಶಕಗಳ ನಂತರ ಶಾರುಖ್ ಮತ್ತು ಐಶ್ವರ್ಯಾ ಜತೆಯಾಗಿ ನಟಿಸಲಿದ್ದು ಸಿನಿಮಾ ಪ್ರೇಮಿಗಳು ಈ ಜೋಡಿಯನ್ನು ತೆರೆಯ ಮೇಲೆ ಕಾಣಲು ಉತ್ಸುಕರಾಗಿದ್ದಾರೆ.

'ಚೆನ್ನೈ ಎಕ್ಸ್‌ಪ್ರೆಸ್‌' ಸಿನಿಮಾ ನಿರ್ದೇಶನದ ಖ್ಯಾತಿಯ ರೋಹಿತ್ ಶೆಟ್ಟಿ ಈ ಜೋಡಿಯನ್ನು ತೆರೆಯ ಮೇಲೆ ಕರೆತರಲಿದ್ದಾರೆ. 'ಚಲ್ತಿ ಕಾ ನಾಮ್ ಗಾಡಿ' ಚಿತ್ರದ ಕಿಶೋರ್ ಕುಮಾರ್ ಮತ್ತು ಮಧುಬಾಲಾ ಅವರ ಪಾತ್ರದ ಮರುಸೃಷ್ಟಿಯಲ್ಲಿ ಐಶ್ ಮತ್ತು ಕಿಂಗ್‌ಖಾನ್ ಬಣ್ಣ ಹಚ್ಚಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿವೆ.

ಆದಾಗ್ಯೂ, ಇಲ್ಲಿಯವರೆಗೆ ಸಿನಿಮಾದ ಬಗ್ಗೆ ನಿರ್ಮಾಪಕರಾಗಲೀ, ನಟರಾಗಲೀ ಯಾವುದೇ ಹೇಳಿಕೆ ನೀಡಿಲ್ಲ.
2012ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ದೇವದಾಸ್‌' ಚಿತ್ರದಲ್ಲಿ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತದಾ? ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.