ಬಾಲಿವುಡ್

ಏನೇನೂ ಬದಲಿಲ್ಲ

ಕರೀನಾ ಕಪೂರ್ ಎಂಬ ಬಡನಡುವಿನ ನಟಿ ಸೈಫ್ ಅಲಿ ಖಾನ್ ಪಟೌಡಿ ಕೈ ಹಿಡಿದು ಕರೀನಾ ಕಪೂರ್ ಖಾನ್ ಪಟೌಡಿ ಆಗಿ ವರ್ಷ...

ಏನೇನೂ ಬದಲಿಲ್ಲ
Published On :

ಕರೀನಾ ಕಪೂರ್ ಎಂಬ ಬಡನಡುವಿನ ನಟಿ ಸೈಫ್ ಅಲಿ ಖಾನ್ ಪಟೌಡಿ ಕೈ ಹಿಡಿದು ಕರೀನಾ ಕಪೂರ್ ಖಾನ್ ಪಟೌಡಿ ಆಗಿ ವರ್ಷ ಸಮೀಪಿಸುತ್ತ ಬಂತು. ಮದುವೆ ಈಕೆ ಬದುಕಿನಲ್ಲಿ ಏನೇನೂ ವ್ಯತ್ಯಾಸ ತಂದಿಲ್ಲವಂತೆ. 'ನಮ್ಮಿಬ್ಬರ ವಿವಾಹ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಗಿತ್ತು. ಆದರೆ ನಮಗೆ ಹಾಗೆ ಅನ್ನಿಸಲೇ ಇಲ್ಲ. ನಾನು ಮತ್ತು ಸೈಫ್ ಮುಂಚೆ ಹೇಗಿದ್ದೆವೋ ಮದುವೆ ಬಳಿಕವೂ ಹಾಗೆಯೇ ಇದ್ದೇವೆ. ಸೈಫ್ ಸ್ವಲ್ಪವೂ ಬದಲಾಗಿಲ್ಲ. ಆತ ಮುಂದೆಯೂ ಹೀಗೆಯೇ ಇರಲಿ ಎನ್ನುವುದೇ ನನ್ನಾಸೆ' ಎಂದು ಹೇಳಿಕೊಂಡಿದ್ದಾಳೆ ಕರೀನಾ. ಹಾಗಿದ್ದರೆ ಮದುವೆ ಏಕೆ ಬೇಕಿತ್ತು? ಐದು ವರ್ಷ ನಡೆಸಿದ ಸಾಂಗತ್ಯ ಜೀವನವನ್ನೇ ಮುಂದುವರಿಸಬಹುದಿತ್ತಲ್ಲ ಎನ್ನುವ  ತನ್ನ ವಿರೋಧಿಗಳ ಕುಹಕ ಅವಳ ಕಿವಿಗೆ ಬಿದ್ದಿಲ್ಲವಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.