ಬಾಲಿವುಡ್

ಗಾಗ್ರ ಅಮೀರ್

ಖ್ಯಾತ ನಟ ಅಮಿರ್‌ಖಾನ್ ಹುಡುಗಿಯರ ಲಿಪ್‌ಸ್ಟಿಕ್ ಹಚ್ಚಿಕೊಂಡು, ಗಾಗ್ರ ತೊಟ್ಟು ದೆಹಲಿ ರಸ್ತೆಗಳಲ್ಲಿ ಸುತ್ತಾಡುತ್ತಿದ್ದಾರೆಂಬ ಸುದ್ದಿ...

ಗಾಗ್ರ  ಅಮೀರ್
Published On :

ಖ್ಯಾತ ನಟ ಅಮಿರ್‌ಖಾನ್ ಹುಡುಗಿ ವೇಷದಲ್ಲಿ ದೆಹಲಿ ರಸ್ತೆಗಳಲ್ಲಿ ಓಡಾಡುತ್ತಿದ್ದಾರಂತೆ. ಹುಡುಗಿಯರ  ಲಿಪ್‌ಸ್ಟಿಕ್ ಹಚ್ಚಿಕೊಂಡು, ಗಾಗ್ರ ತೊಟ್ಟು ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡುತ್ತಿದ್ದಾರೆಂಬ ಸುದ್ದಿ ಹಬ್ಬಿದೆ. ಅಯ್ಯೋ ಅಮಿರ್‌ಗೇನಾಯ್ತು? ಯಾಕ್ ಈ ಚಟ ಅಂಟಿಸಿಕೊಂಡರು? ಅಂತೆಲ್ಲ ಅಲ್ಲಿನ ಜನ ಮಾತಾಡ್ಕೊಳ್ತಿದ್ದಾರೆ. ಆದರೆ, ವಿಷಯ ಏನೆಂದರೆ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ 'ಪಿಕೆ' ಸಿನಿಮಾ ಶೂಟಿಂಗ್‌ನಲ್ಲಿ ಅಮಿರ್ ಬ್ಯುಸಿಯಾಗಿದ್ದಾರೆ. ಆ ಚಿತ್ರದಲ್ಲಿ ನಾಯಕ ನಟಿ ತನ್ನ ಲಿಪ್‌ಸ್ಟಿಕ್, ಗಾಗ್ರವನ್ನು ಯಾವುದೋ ಸನ್ನಿವೇಶದಲ್ಲಿ  ಬಿಟ್ಟು ಹೋಗಿರುತ್ತಾರೆ. ಅದನ್ನು ಅಮಿರ್‌ಖಾನ್ ತೆಗೆದುಕೊಂಡು ಆಕೆಯನ್ನು ಹುಡುಕುವಾಗ ನಾಯಕಿಯ ಲಿಪ್‌ಸ್ಟಿಕ್ ಹಚ್ಚಿಕೊಂಡು, ಆಕೆಯ ಗಾಗ್ರ ಹಾಕಿಕೊಂಡು ದೆಹಲಿಯ ರಸ್ತೆಗಳಲ್ಲಿ ಹುಡುಕುತ್ತಿರುತ್ತಾನೆ. ಇದನ್ನೇ ಜನ ತಪ್ಪಾಗಿ ತಿಳ್ಕೊಂಡರೆ ಅದಕ್ಯಾರು ಹೊಣೆ? ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ತೆಲುಗಿನ ಖ್ಯಾತ ನಟಿ ಕನ್ನಡದ ಅನುಷ್ಕಾ ಶರ್ಮಾ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.