ಪ್ರಿಯಾಂಕ ಲೀಲೆ
ಸಂಜಯ ಲೀಲಾ ಬನ್ಸಾಲಿ ಅವರ 'ರಾಮಲೀಲಾ'ದಲ್ಲಿ ಬಳುಕುವ ಬಳ್ಳಿ ಪ್ರಿಯಾಂಕ ಚೋಪ್ರಾ ಅವರು ಲಾಲಿತ್ಯದ ಟಚ್ ಕೊಟ್ಟು ಸೊಂಟ...

ಸಂಜಯ ಲೀಲಾ ಬನ್ಸಾಲಿ ಅವರ 'ರಾಮಲೀಲಾ'ದಲ್ಲಿ ಬಳುಕುವ ಬಳ್ಳಿ ಪ್ರಿಯಾಂಕ ಚೋಪ್ರಾ ಅವರು ಲಾಲಿತ್ಯದ ಟಚ್ ಕೊಟ್ಟು ಸೊಂಟ ಬಳುಕಿಸಿರುವುದನ್ನು ನೋಡಬಹುದಂತೆ. ಮತ್ತೊಮ್ಮೆ ಪ್ರಿಯಾಂಕ ಐಟಂ ಸಾಂಗ್ಗೆ ಹೆಜ್ಜೆ ಹಾಕಿದ್ದಾಳಂತೆ. ತಮ್ಮ ಎಂದಿನ ಮಾದಕ ಮೈಮಾಟವನ್ನು ತಮ್ಮ ರಸಿಕರಿಗಾಗಿ ಕುಣಿಸಿದ್ದಾರಂತೆ. ಸಂಪೂರ್ಣ ಶ್ವೇತ ವರ್ಣದಲ್ಲಿ ಸಾಕ್ಷಾತ್ ದೇವಲೋಕದ ಕನ್ಯೆಯ ಥರ ಕಾಣ್ತಿದ್ದಾಳೆ ಎಂಬ ರಿಪೋರ್ಟ್ ಬಂದಿದೆ. ಹೀಗಾಗಿ ಈಕೆಯ ದೇಹಸಿರಿಯ ಮೈ ಮೆರವಣಿಗೆಯ ವಿಡಿಯೋ ದೃಶ್ಯಗಳನ್ನು ನೋಡಲು ಅಭಿಮಾನಿಗಳು ಆಸೆಯಗಣ್ಣಲ್ಲಿ ನಿದ್ದೆಗೆಟ್ಟು ಕಾಯುತ್ತಿದ್ದಾರೆ.
ಈ ಹಾಡಿಗೆ ಕೊರಿಯೋಗ್ರಫಿಯನ್ನು ಕನ್ನಡ ಮೂಲದ ಡ್ಯಾನ್ಸ್ ಮಾಸ್ಟರ್ ಪ್ರಭುದೇವ್ ಅವರ ಸಹೋದರ ವಿಷ್ಣುದೇವ ಸಂಯೋಜನೆ ಮಾಡಿದ್ದಾರೆ. ಈ ಐಟಂ ಸಾಂಗ್ನಲ್ಲಿ ಐಶ್ವರ್ಯ ಕುಣಿಯಬೇಕಿತ್ತಂತೆ. ಆದರೆ ಆಕೆಯ ಸೊಂಟದ ಸುತ್ತಳತೆ ಸರಿಬರಲಿಲ್ಲವೆಂಬುದು ಸುದ್ಧಿ. ಆದರೆ ಅದನ್ನೊಪ್ಪದ ಐಶ್ ಅಭಿಮಾನಿಗಳು ಆಕೆಗೆ ಪ್ರಮುಖ ಪಾತ್ರ ಕೊಟ್ಟಿದ್ದರೆ ನಟಿಸೋರು, ಯಃಕಶ್ಚಿತ್ ಒಂದು ಹಾಡಿಗಲ್ಲ ಅಂತಾರೆ. ಈ 'ರಾಮಲೀಲಾ'ದ ಮುಖ್ಯ ಭೂಮಿಕೆಯಲ್ಲಿ ರಣವೀರ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇದ್ದಾರೆ. ರೋಮಿಯೋ- ಜ್ಯೂಲಿಯಟ್ ಕಥೆಯ ಹಂದರ ಈ ಚಿತ್ರದ್ದಂತೆ. ನವೆಂಬರ್ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕಾಗಿ 'ಬಬ್ಲಿ' ಅಭಿಮಾನಿಗಳು ತವಕದಿಂದ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


