ಬಾಲಿವುಡ್

ದೇಸಿ ಮಲ್ಲಿಕಾ

ಐಟಂ ಕ್ವೀನ್ಸ್ ಸನ್ನಿ, ಶೆರ್ಲಿನ್ ಬಂದ ಮೇಲೆ ಮಲ್ಲಿಕಾ ಶೆರಾವತ್ ಮುಂಬೈನಿಂದಲೇ ಓಡಿ ಹೋದಳು, ಶೆರಾವತ್‌ಗೆ ಅವರಷ್ಟು...

ದೇಸಿ ಮಲ್ಲಿಕಾ
Published On :

ಐಟಂ ಕ್ವೀನ್ಸ್ ಸನ್ನಿ, ಶೆರ್ಲಿನ್ ಬಂದ ಮೇಲೆ ಮಲ್ಲಿಕಾ ಶೆರಾವತ್ ಮುಂಬೈನಿಂದಲೇ ಓಡಿ ಹೋದಳು, ಶೆರಾವತ್‌ಗೆ ಅವರಷ್ಟು ಫೋಕಸ್ ಆಗೋದು ಗೊತ್ತಿಲ್ಲ... ಮುಂಬೈ ಗಲ್ಲಿ ಹೀಗೆ ಮಾತಾಡಿದ್ದೇ ಆಡಿದ್ದು. ಅದಕ್ಕೆ ತಕ್ಕನಾದ ಚಿತ್ರಗಳ ಸೆರಗನ್ನೇ ಮಲ್ಲಿಕಾ ಹಿಡಿಯುತ್ತಿರುವುದು ದುರಂತ.
ಚಿತ್ರದ ಹೆಸರು 'ಡರ್ಟಿ ಪಾಲಿಟಿಕ್ಸ್‌'. ಮೈತುಂಬಾ ಸೀರೆಯುಟ್ಟು, ಕೈ- ಮುಖ ಎರಡನ್ನು ಬಿಟ್ಟು ಬೇರ್ಯಾವ ಪಾರ್ಟನ್ನು ತೋರ್ಸೋದೇ ಇಲ್ಲ ಅನ್ನೋ ರೀತಿ ಇದರಲ್ಲಿ ಅಭಿನಯಿಸುತ್ತಿರುವವಳು ಮಲ್ಲಿಕಾ! 2011ರಲ್ಲಿ ಕೊಲೆಯಾದ ಭನ್ವಾರಿ ದೇವಿ ಬದುಕಿನ ಕುರಿತ ಚಿತ್ರ ಇದಾಗಿದ್ದು, ಭನ್ವಾರಿಯಾಗಿ ಮಲ್ಲಿಕಾ ಬಣ್ಣ ಹಚ್ಚುತ್ತಿದ್ದಾಳೆ. ಇದೇ ವೇಳೆ ಮಲ್ಲಿಕಾಳಿಗೆ ಹೊಟ್ಟೆ ಉರಿಸಲು ಅತ್ತ ಸನ್ನಿ, ಶೆರ್ಲಿನ್ ಬಾಲಿವುಡ್‌ನಲ್ಲಿ ಬಹುತೇಕ ಆಕೆಯ ಸೀಟನ್ನು ಅಲಂಕರಿಸಿದ್ದಾರೆ.
ಆದರೆ, ಇದ್ಯಾವುದರ ಬಗ್ಗೆಯೂ ಮಲ್ಲಿಕಾ ತಲೆಕೆಡಿಸಿಕೊಳ್ಳುತ್ತಿಲ್ಲವಂತೆ. ಏಕೆಂದರೆ, ಈಗೀಗ ಮಲ್ಲಿಕಾ ಭಾರತದಲ್ಲೇ ಇರೋದಿಲ್ಲ. ತಿಂಗಳುಗಟ್ಟಲೆ ಯುರೋಪಿನಲ್ಲೇ ಠಿಕಾಣಿ. ಅಲ್ಲಿ ಅವಳಿಗೊಬ್ಬ ಶ್ರೀಮಂತ ಬಾಯ್‌ಫ್ರೆಂಡ್ ಸಿಕ್ಕಿದ್ದಾನೆ. ಫೈಸ್ಟಾರ್ ಹೋಟೆಲ್‌ನಲ್ಲಿ ವಸತಿ. ಎಲ್ಲೆಂದರಲ್ಲಿ ಓಡಾಡಲೊಂದು ಪ್ರೈವೆಟ್ ಜೆಟ್ಟು... ಎಲ್ಲವೂ ಸಿಕ್ಕಾಗಿದೆ. ಡೈರೆಕ್ಟರ್ ಕೆ.ಸಿ. ಬೊಕಾಡಿಯಾ ಡಿಮ್ಯಾಂಡಿಟ್ಟರು ಎನ್ನುವ ಕಾರಣಕ್ಕಾಗಿ ಮುಂಬೈಗೆ ಶೂಟಿಂಗಿಗೆ ಬಂದಿದ್ದಾಳೆ ಅನ್ನೋದು ಬಲ್ಲಮೂಲಗಳ ಮಾಹಿತಿ.
ಹಾಗಾದರೆ, ಮಲ್ಲಿಕಾ ಸೋಲುತ್ತಿದ್ದಾಳಾ?

- ಮಿಲೀ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.